ಭೂತಾನ್ ಗೆ ಆ 17 ರಂದು ಪ್ರಧಾನಿ ಮೋದಿ ಭೇಟಿ

ನವದೆಹಲಿ, ಆ 9      ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಸ್ಟ್ 17 ಮತ್ತು 18 ರಂದು ಭೂತಾನ್ ಗೆ ಭೇಟಿ ನೀಡಲಿದ್ದಾರೆ. 

ಭೂತಾನ್ ನೊಂದಿಗೆ ಭಾರತ ನಿಕಟ ಬಾಂಧವ್ಯ ಹೊಂದಿದೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ. ನೆರೆ ರಾಜ್ಯ ಮೊದಲು ನೀತಿಯನ್ನು ಅನುಸರಿಸುವ ಬದ್ಧತೆ ಅನುಸಾರವಾಗಿ ಪ್ರಧಾನಿ ಮೋದಿ ಭೂತಾನ್ ಗೆ ಭೇಟಿ ನೀಡಲಿದ್ದಾರೆ. 

ಈ ಸಂದರ್ಭದಲ್ಲಿ ಅವರು ಅಲ್ಲಿನ ಪ್ರಧಾನಿ ತ್ಸೆರಿಂಗ್, ಭೂತಾನ್ ದೊರೆ ಜಿಗ್ಮೆ ಕೇಶರ್ ನಾಮ್ಗ್ಯೇಲ್ ವಾಂಗ್ ಚುಕ್ ಮತ್ತಿತರರೊಂದಿಗೆ ಮಾತುಕತೆ ನಡೆಸಲಿದ್ದಾರೆ. 

ಭಾರತ ಮತ್ತು ಭೂತಾನ್ ವಿಶೇಷ ಬಾಂಧವ್ಯ ಹಂಚಿಕೊಂಡಿದ್ದು ಸಾಂಸ್ಕೃತಿಕ ಪರಂಪರೆಯ ಹಂಚುವಿಕೆಯಿಂದೆ ಅದು ಇನ್ನಷ್ಟು ಬಲಗೊಂಡಿದೆ ಎಂದು ಹೇಳಿಕೆ ತಿಳಿಸಿದೆ.