ದೇಶಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಕೊಡುಗೆ ಅಪಾರ; ಸಹಕಾರ ಸಚಿವ

ಮೈಸೂರು, ಜೂ.5,ಪ್ರಧಾನಮಂತ್ರಿಗಳು 6 ವರ್ಷ ಮಾಡಿದ ಸಾಧನೆ, ಕೋವಿಡ್ 19 ಸಂದರ್ಭದಲ್ಲಿ ಮಹಾಮಾರಿಯನ್ನು  ಎದುರಿಸಲು ಇಡೀ ದೇಶಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ. ಇದಕ್ಕೋಸ್ಕರ 20 ಲಕ್ಷ ಕೋಟಿ  ಪ್ಯಾಕೇಜ್ ನೀಡಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯಕ್ಕಾಗಿಯೇ 40 ಸಾವಿರ ಕೋಟಿ  ರೂಪಾಯಿಯನ್ನು ಆರ್‌ಡಿಪಿಆರ್ ಮೂಲಕ ಕೊಡಲಾಗಿದೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ  ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ."ಜನರೇ  ಪ್ರೇರಕ ನಾನು ಪ್ರಧಾನ ಸೇವಕ" ಎಂಬ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆಯ  ಪ್ರತಿಯನ್ನು ಕೃಷ್ಣರಾಜ ಕ್ಷೇತ್ರದ ಮೂಲಕ ಪ್ರತಿ ಮನೆಗೆ ತಲುಪಿಸುವ ಕಾರ್ಯಕ್ಕೆ ಚಾಲನೆ  ನೀಡಿ ಮಾತನಾಡಿದ ಸಚಿವರು, ಯಾವುದೇ ಒಂದು ಕೇಂದ್ರ ಸರ್ಕಾರದ ಯೋಜನೆ ಇದ್ದರೂ ಅದನ್ನು  ಮೊದಲು ಕಾರ್ಯಾರಂಭ ಮಾಡುವುದು ಶಾಸಕರಾದ ರಾಮದಾಸ್ ಅವರು. ಅದೇ ರೀತಿ ನಾಳೆ ಶಾಸಕರಾದ  ನಾಗೇಂದ್ರ ಅವರೂ ಸಹ ಚಾಲನೆ ನೀಡಲಿದ್ದಾರೆ ಎಂದು ಸಚಿವರು ಹೇಳಿದರು.

ಶಾಸಕರಾದ  ಎಸ್.ಎ.ರಾಮದಾಸ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ  ಸರ್ಕಾರ ಇಂದು ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದು ಪ್ರತಿಯೊಬ್ಬ  ನಾಗರಿಕರಿಗೂ ಮುಟ್ಟಬೇಕು. ಆ ಕೆಲಸವನ್ನು ನಮ್ಮ ಪಕ್ಷದ ನಾಯಕರು, ಪದಾಧಿಕಾರಿಗಳು ಹಾಗೂ  ಕಾರ್ಯಕರ್ತರು ಮಾಡಲಿದ್ದಾರೆ ಎಂದು ಹೇಳಿದರು.ಶಾಸಕರಾದ ನಾಗೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಎನ್. ಶ್ರೀವತ್ಸ, ಮುಖಂಡರಾದ ಪಿ.ರಾಜೀವ್‌ ಇತರರು ಇದ್ದರು. ಮನೆ ಮನೆಗೆ ವಿತರಿಸಿದ ಸಚಿವರು"ಜನರೇ  ಪ್ರೇರಕ ನಾನು ಪ್ರಧಾನ ಸೇವಕ" ಎಂಬ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆಯ  ಪ್ರತಿಯನ್ನು ಕೃಷ್ಣರಾಜ ಕ್ಷೇತ್ರದ ನಾಗರಿಕರ ಮನೆಗೆ ವಿತರಿಸುವ ಮೂಲಕ ಸಚಿವ ಸೋಮಶೇಖರ್  ಅವರು ಸಾಂಕೇತಿಕವಾಗಿ ಚಾಲನೆ ನೀಡಿದರು.