ನವದೆಹಲಿ, ಆಗಸ್ಟ್ 8 ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 8 ಗಂಟೆಗೆ ವಿಶೇಷ ಪ್ರಸರಣದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಪ್ರಕಟಣೆ ಈ ವಿಷಯ ತಿಳಿಸಿದ್ದು, ಮೋದಿ ಅವರು ಆಕಾಶವಾಣಿ ಹಾಗೂ ದೂರದರ್ಶನದ ವಿಶೇಷ ಪ್ರಸಾರ ಭಾಷಣ ಮಾಡಲಿದ್ದು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ನಿಷ್ಕ್ರಿಯಗೊಳಿಸಿದ ಐತಿಹಾಸಿಕ ನಿರ್ಣಯದ ಕುರಿತು ಮಾತನಾಡುವ ಸಾಧ್ಯತೆಯಿದೆ.
ಜಮ್ಮು ಕಾಶ್ಮೀರವನ್ನು ವಿಧಾನಸಭೆ ಒಳಗೊಂಡ ಕೇಂದ್ರಾಡಳಿತ ಪ್ರದೇಶ ಹಾಗೂ ಲಡಾಖ್ ಪ್ರದೇಶವನ್ನು ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವ ವಿಧೆಯಕಕ್ಕೆ ಸಂಸತ್ ಅನುಮೋದನೆ ನೀಡಿದ್ದು, ಈ ಕುರಿತ ತಮ್ಮ ಅನಿಸಿಕೆಗಳನ್ನು ಪ್ರಧಾನಿ ಅವರು ದೇಶವಾಸಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.