ಹಿರಿಯ ನಾಗರಿಕರಿಗೆ ಪಿಎಂ ಮೋದಿ ಆರೋಗ್ಯದ ಪಾಠ.

ನವದೆಹಲಿ, ಏ 25, ದೇಶದಲ್ಲಿ ಕರೋನ ಸೋಂಕು ಪ್ರಕರಣಗಳ ಸಂಖ್ಯೆ    ಹೆಚ್ಚಾಗುತ್ತಿದೆ  ಶನಿವಾರ ಬೆಳಗಿನ ಮಾಹಿತಿಯಂತೆ ಸೋಂಕಿತರ ಸಂಖ್ಯೆ 24, 506 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದೆ. ದೇಶದಲ್ಲಿ ಈವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ  800 ಗಡಿ ಸಮೀಪಿಸುತ್ತಿದೆ . ಈ ನಡುವೆ  ಪ್ರಧಾನಿ  ನರೇಂದ್ರ ಮೋದಿ  ಅವರು ಕೆಲವು ಹಿರಿಯ ನಾಗರಿಕರಿಗೆ ದೂರವಾಣಿ ಕರೆ ಮಾಡಿ  ಆರೋಗ್ಯ  ಕಾಡಿಕೊಳ್ಳಲು ಹೆಚ್ಚಿನ ಕಾಳಜಿ ತೋರಬೇಕು ಎಂದು  ಮನವಿ  ಮಾಡುವುದನ್ನು  ಮುಂದುವರೆಸಿದ್ದಾರೆ. ಇಂದು ಕೆಲವು ಹಿರಿಯ ನಾಗರಿಕರಿಗೆ ಕರೆ ಮಾಡಿ  ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಕಾಳಜಿ ತೋರಬೇಕು ಎಂದೂ ಅವರು ಕಿವಿ ಮಾತು ಹೇಳಿದ್ದಾರೆ ಎನ್ನಲಾಗಿದೆ. ಅವರು ಒಂದು ದಿನದ ಹಿಂದೆ ಕರ್ನಾಟಕದ ಡಿ.ಎಚ್ ಶಂಕರಮೂರ್ತಿ  ಅವರಿಗೂ ಕರೆ ಮಾಡಿ  ಆರೋಗ್ಯದ ಯೋಗಕ್ಷೇಮ ವಿಚಾರಿಸಿದ್ದರು.ಕರೋನ ಸೋಂಕು ಹೆಚ್ಚಾಗಿ ಹಿರಿಯರನ್ನು  ಭಾಧಿಸುವ ಕಾರಣ ಬಹಳ ಕಾಳಜಿ  ವಹಿಸಿ, ಮನೆಯರಿಗೂ  ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ತಿಳಿ ಹೇಳುತ್ತಿದ್ದಾರೆ ಎನ್ನಲಾಗಿದೆ.