ಅಂತರ್ ಜಲ ಹೆಚ್ಚಿಸುವ ಅಟಲ್ ಭೂಜಲ ಯೋಜನೆಗೆ ಪಿಎಂ ಚಾಲನೆ

ನವದೆಹಲಿ, ಡಿಸೆಂಬರ್ 25,  ಕರ್ನಾಟಕ, ಸೇರಿದಂತೆ ಏಳು ರಾಜ್ಯಗಳಿಗೆ  ವರವಾಗುಗಲಿರುವ  ಮತ್ತು  ಅಂತರ್ ಜಲ,   ರೈತರ ಆದಾಯ ಹೆಚ್ಚಿಸುವ ಮಹತ್ವದ ಗುರಿ  ಹೊಂದಿರುವ ಅಟಲ್ ಭೂಜಲ   ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ  ಚಾಲನೆ ನೀಡಿದ್ದಾರೆ ವಿಜ್ಞಾನ ಭವನದಲ್ಲಿ  ಜರುಗಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 95 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಈಯೋಜನೆಗೆ ಚಾಲನೆ ನೀಡಿ, ಇದು ರಾಷ್ಟ್ರಕ್ಕೆ ಬಹಳ ಮುಖ್ಯವಾದ ಯೋಜನೆಯಾಗಿದ್ದು, ಅಟಲ್ ಜಿ ಗೆ ಸಮರ್ಪಿಸಲಾಗಿದೆ ಎಂದರು. ಅಂತರ್ಜಲ ಸಂಪನ್ಮೂಲ ಕಡಿಮೆಯಾಗುವ ಸಮಸ್ಯೆ ಕೌಟುಂಬಿಕ ಸಮಸ್ಯೆ ಅಥವಾ ವ್ಯಕ್ತಿಯ ಸಮಸ್ಯೆಯಾಗಿ ನೋಡುವುದು,  ಚಿಂತಿಸುವುದಷ್ಟೇ ಅಲ್ಲ, ಇದು ಒಟ್ಟಾರೆ ದೇಶದ ಅಭಿವೃದ್ಧಿಯ ಮೇಲೂ ಪರಿಣಾಮ ಬೀರಲಿದೆ  ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.ಈ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಭಿನ್ನಾಭಿಪ್ರಾಯಗಳು ಇರುವುದರಿಂದ ನೀರಿನ ಸಂರಕ್ಷಣೆಯ  ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ . ಪಿಎಂ ಪ್ರಕಾರ, ಈ ಯೋಜನೆಯು ಅಂತರ್ಜಲ ಸಂಪನ್ಮೂಲ ಈಗಾಗಲೇ ಕಡಿಮೆ ಇರುವ ನಿರ್ದಿಷ್ಟ ಪ್ರದೇಶಗಳು ಅಥವಾ ಪ್ರದೇಶಗಳಿಗೆ ಪ್ರದೇಶಗಳಿಗೆ ಹೆಚ್ಚಿನ ಒತ್ತು ನೀಡಲಿದೆ.ನೀರಿನ ವಿಷಯವು ಬಹಳ ಮುಖ್ಯವಾಗಿತ್ತು ಮತ್ತು ಅಟಲ್ ಜಿ ಅವರ ಹೃದಯಕ್ಕೆ ಹತ್ತಿರವೂ ಅಗಿತ್ತು  ಎಂದು ಪ್ರಧಾನಿ ಹೇಳಿದರು. 2024 ರ ವೇಳೆಗೆ ದೇಶದ ಪ್ರತಿಯೊಂದು ಮನೆಗೂ ನೀರು ಒದಗಿಸುವ ಉದ್ದೇಶದಿಂದ ಈ ಯೋಜನೆ ಒಂದು ಹೆಜ್ಜೆ, ಭಾಗವಾಗಿದೆ .ಜಲ್ ಜೀವನ್ ಮಿಷನ್ ಪ್ರತಿ ಮನೆಗಳಿಗೆ ಕೊಳವೆಗಳ ಮೂಲಕ ನೀರು ಪೂರೈಕೆ ಮಾಡಲು ಸಹಕಾರ ನೀಡಲಿದೆ. ಆದರೆ ಅಟಲ್ ಭುಜಲ್ ಯೋಜನೆ ಅಂತರ್ಜಲ ತುಂಬಾ ಕಡಿಮೆ ಇರುವ ಪ್ರದೇಶಗಳ ಬಗ್ಗೆ ವಿಶೇಷ ಗಮನ ಹರಿಸಲಿದೆ ಎಂದು ಅವರು ಹೇಳಿದರು.ಮಾಜಿ ಪ್ರಧಾನಿ ವಾಜಪೇಯಿ ಅವರ ಹೆಸರಿನ ಮತ್ತೊಂದು ಯೋಜನೆಯ ಬಗ್ಗೆ ಪ್ರಸ್ತಾಪಿಸಿದ ಪಿಎಂ ಮೋದಿ, ಹಿಮಾಚಲ ಪ್ರದೇಶವನ್ನು ಲಡಾಖ್ ಮತ್ತು ಜಮ್ಮು ಕಾಶ್ಮೀರಕ್ಕೆ ಸಂಪರ್ಕಿಸುವ ರೋಹ್ಟಾಂಗ್ ಸುರಂಗ ಮತ್ತು ಮನಾಲಿಯನ್ನು ಲೇಹ್‌ನೊಂದಿಗೆ ಸಂಪರ್ಕಿಸುವುದನ್ನು ಅಟಲ್ ಸುರಂಗ  ಎಂದು ಕರೆಯಲಾಗುವುದು  ಎಂದು ಹೇಳಿದರು.ಮಾಜಿ ಪ್ರಧಾನಿ ಮತ್ತು ಬಿಜೆಪಿಯ  ವಾಜಪೇಯಿ ಹೆಸರನ್ನು ಹೊಂದಿರುವ ಅಟಲ್ ಭುಜಲ್ ಯೋಜನೆ ಸರ್ಕಾರದ  ಮಹತ್ವದ  ಯೋಜನೆಗಳಲ್ಲಿ ಒಂದಾಗಿದೆ ಮತ್ತು ರೈತರಿಗೆ ನೀರಾವರಿ ನೀಡುವ ಪ್ರಮುಖ ಮೂಲಗಳಲ್ಲಿ ಒಂದಾದ ಅಂತರ್ಜಲವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ,  ಉತ್ತೇಜಿಸುವ ಗುರಿಯನ್ನೂ  ಹೊಂದಿದೆ.ಕೇಂದ್ರ ಸಂಪುಟ ಸಭೆ  ಮಂಗಳವಾರ ನಡೆದ ಸಭೆಯಲ್ಲಿ 6,ಸಾವಿರ ಕೋಟಿ ರೂಪಾಯಿಗಳ ಈ ಯೋಜನೆಗೆ ಅನುಮೋದನೆ ನೀಡಿದ್ದು, ಇದನ್ನು ಐದು ವರ್ಷಗಳ ಅವಧಿಯಲ್ಲಿ ಜಾರಿಗೆ ತರಲಾವುದಾಗಿ ಪ್ರಕಟಿಸಿದೆ. ಈ ಯೋಜನೆ ಹರಿಯಾಣ, ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಂತಹ ನಿರ್ದಿಷ್ಟ ಪ್ರದೇಶಗಳನ್ನು ಒಳಗೊಂಡಿರುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಗುರಿ ಹೊಂದಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.