ಡಾ.ಬಿ. ಆರ್.ಅಂಬೇಡ್ಕರ್ ಪ್ರೌಢಶಾಲೆ :1999-2000 ನೇ ಸಾಲಿನ ವಿದ್ಯಾರ್ಥಿಗಳ ಧನ್ಯ ಮಿಲನ ಸಮಾರಂಭ
Dr. B. R. Ambedkar High School: Convocation ceremony of the students of the year 1999-2000
ರಾಣೇಬೆನ್ನೂರು : ಹಿಂದಿನ ಇತಿಹಾಸದ ಗುರುಕುಲ ಮಾದರಿ ಶಿಕ್ಷಣ ಇಂದಿನ ಅಗತ್ಯವಿದೆ ಎಂದು ನಿವೃತ್ತ ಶಿಕ್ಷಕ ಜಿ.ಬಿ. ಮಾಸಣಗಿ ಹೇಳಿದರು. ಅವರು ವಿದ್ಯಾನಗರದ ಡಾ ಬಿ. ಆರ್. ಅಂಬೇಡ್ಕರ ಪ್ರೌಢಶಾಲೆ 1999-2000 ಸಾಲಿನ ವಿದ್ಯಾರ್ಥಿಗಳ ಗುರುವಂದನಾ ಮತ್ತು ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅಂದಿನ ಶಿಕ್ಷಣದಲ್ಲಿ ಸೇವೆಯ ಜೊತೆಗೆ, ಶಿಕ್ಷಣ ದೊರಕುತ್ತಿತ್ತು. ಇಂದಿನ ಶಿಕ್ಷಣದಲ್ಲಿ ಸೇವೆಯು ಇಲ್ಲ, ನೈತಿಕತೆ ಇಲ್ಲ ಎಲ್ಲಕ್ಕಿಂತ ಹೆಚ್ಚಾಗಿ ಸಂಸ್ಕಾರವಿಲ್ಲ ಹೀಗಾದರೆ ನಮ್ಮ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಗತಿ ಏನು ಎನ್ನುವ ಚಿಂತನೆ ಕಾಡುತ್ತಿದೆ ಎಂದು ವಿಷಾದಿಸಿದರು.
ಇನ್ನೋರ್ವ ನಿವೃತ್ತ ಶಿಕ್ಷಕ ಎಚ್.ಪಿ.ಬಣಕಾರ ಅವರು, ಆಧುನಿಕ ಶಿಕ್ಷಣದಲ್ಲಿ ಎಲ್ಲ ರೀತಿಯ ಬದಲಾವಣೆ ಕಾಣುತ್ತಿದ್ದೇವೆ. ಕೋವಿಡ್ ನಂತರ ಗುರು ಮತ್ತು ಶಿಷ್ಯರ ಪರಂಪರೆ ಮಾಯವಾಗಿದೆ. ಮಾನವೀಯ ಸಂಬಂಧಗಳು ಮರೆಯಾಗಿವೆ. ವಿದ್ಯಾರ್ಥಿ- ಶಿಕ್ಷಕ ಮತ್ತು ಪಾಲಕರು ಈ ಮೂರು ತ್ರಿವೇಣಿ ಸಂಗಮವಾಗಿ ಶಿಕ್ಷಣ ಪಡೆದವರು ಮಾತ್ರ ಅದೃಷ್ಟಶಾಲಿಗಳಾಗಿದ್ದಾರೆ ಎಂದು ವಿಶ್ಲೇಷಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಮೂಲಕ ಗುರು ಮತ್ತು ಶಿಷ್ಯರು ಕೂಡುವ ಸಂಪ್ರದಾಯ ಹಾಕಿಕೊಟ್ಟಿದ್ದು ಶಾಲೆಯ ಶಿಕ್ಷಕ ಸಮುದಾಯಕ್ಕೆ ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.
ನಿವೃತ್ತ ಶಿಕ್ಷಕರಾದ ಡಾ. ಮಾಲತೇಶ್ ಸಿ.ಎಂ, ಎಚ್. ಎಮ್. ನಂದಿಹಳ್ಳಿ, ಆರ್.ಎಚ್. ಬಣಕಾರ, ರಮೇಶ್ ಚಲವಾದಿ, ಎಸ್. ಆರ್.ತೇವರಿ, ಮೊದಲಾದವರು ಸಂಸ್ಕೃತಿ ಸಂಸ್ಕಾರ ಮತ್ತು ಗುರು ಶಿಷ್ಯ ಪರಂಪರೆ ಕುರಿತು ಮಾತನಾಡಿದರು.
ಪ್ರೌಢಶಾಲಾ ಮುಖ್ಯ ಗುರು ಎಸ್.ಎಲ್. ಹೊಸಮನಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಹಳೆ ವಿದ್ಯಾರ್ಥಿಗಳಾದ, ಸಿ. ಆರ್. ಪಿ. ಮಾಲತೇಶ್ ಕಾಕೋಳ, ಡಾ. ಸಂತೋಷ್ ಕ್ಯಾತಪ್ಪ ನವರ ತಮ್ಮ ಅನುಭವ ಹಂಚಿಕೊಂಡರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕರಾದ ಎಸ್. ಎಸ್. ಸೋಮನಹಳ್ಳಿ, ಬಿ.ವಿ. ಅಂಚೇರ, ಎಸ್. ವಿ. ನಾರಾಯಣಿ, ಎಸ್.ಎಂ. ಖತಿಬ್, ಎಂ. ಬಿ. ಶಿವಾನಂದ, ಜಯಲಲೀತಾ ಹೊಸಮನಿ, ಪಿ.ವಿ. ದೊಡ್ಡಮನಿ, ಜ್ಯೋತಿ ಸಾವಂತಲವರ, ಕಾಂತರಾಜ್, ಎಸ್. ಎಸ್. ಕೋರಿಶೆಟ್ಟರ, ಬಸವರಾಜ ನೆಲವಾಗಲ, ಸೇರಿದಂತೆ ಮತ್ತಿತರರನ್ನು ಹಳೆಯ ವಿದ್ಯಾರ್ಥಿ ಸಮುದಾಯ, ಇತಿಹಾಸದ ಗುರು ಶಿಷ್ಯ ಪರಂಪರೆ ಮಾದರಿಯಲ್ಲಿ ವಿಶೇಷವಾಗಿ ಸನ್ಮಾನಿಸಿದರು. ಅಲ್ಲದೆ ದಿವಂಗತರ ಕುಟುಂಬದವರಿಗೂ ಸಹಾ ಬರಮಾಡಿಕೊಂಡು ಗೌರವಿಸಿ,ಅಭಿನಂದಿಸಿ ಧನ್ಯತೆ ಪಡೆದರು.
ಅತ್ಯಂತ ಭಾವನಾತ್ಮಕವಾಗಿ ನಡೆದ ಗುರು ಶಿಷ್ಯ ಪರಂಪರೆಯ ಗುರುವಂದನಾ ಧನ್ಯ ಮಿಲನ ಸಮಾರಂಭವು ಸಾರ್ವಜನಿಕರ ಗಮನ ಸೆಳೆದು, ಭವಿಷ್ಯದ ಶಿಷ್ಯ ಪರಂಪರೆಗೆ ಅವೀಸ್ಮರಣೀಯ ಮಾದರಿಯಾಯಿತು. ಕವಿತಾ ಬಣಕಾರ ಪ್ರಾರ್ಥಿಸಿದರು.
ವೆಂಕಟೇಶ್ ಎನ್. ಸ್ವಾಗತಿಸಿ, ಚಿದಾನಂದ ಬೆನಕನಕೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಗುಡ್ಡಪ್ಪ ಮಾಳಗುಡ್ಡಪ್ಪನವರ ನಿರೂಪಿಸಿ, ಸಂಘಟನೆಯ ಮುಂಚೂಣಿ ನಾಯಕ ಸಂತೋಷ್ ಬಲ್ಲೂರ ವಂದಿಸಿದರು.
ಕಾರ್ಯಕ್ರಮದಲ್ಲಿ ಅಂದಿನ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, ನಾಗರಿಕರು ಮತ್ತು ಶಾಲೆಯ ಇಂದಿನ ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ನಡೆದ ಹಳೆಯ ಮತ್ತು ಹೊಸ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವು ಸಾರ್ವಜನಿಕರ ಗಮನ ಸೆಳೆದವು. ಅಲ್ಲದೆ ಕಲಾವಿದರಾದ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 