ಬ್ಯಾಡಗಿ24: ಜನೇವರಿ 31 ರಂದು ನಡೆಯಲಿರುವ ಪಿ.ಎಲ್.ಡಿ ಬ್ಯಾಂಕಿನ ಆಡಳಿತ ಮಂಡಳಿಯ 14 ಕ್ಷೇತ್ರಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ಗುರುವಾರದವರೆಗೆ ಒಟ್ಟು 26 ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದಂತಾಗಿದೆ.
ಕಾಂಗ್ರೆಸ್ ಧೂಳಿಪಟ...
ಈಗಾಗಲೇ 6 ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯಥರ್ಿಗಳು ಗೆಲುವಿನ ನಗೆಯನ್ನು ಬೀರಿದ್ದಾರೆ. ಇನ್ನುಳಿದ ಎಂಟು ಕ್ಷೇತ್ರಗಳಲ್ಲಿ ಚುನಾವಣಾ ಲೆಕ್ಕಾಚಾರ ನೋಡಿದರೆ ಬಿಜೆಪಿಯ ಮುಂದೆ ವಿರೋಧ ಪಕ್ಷಗಳು ಧೂಳಿಪಟವಾಗುವುದು ನಿಶ್ಚಿತವಾಗಿದೆ.
ತಾಲೂಕಿನ ಮೋಟೆಬೆನ್ನೂರ ಸಾಮಾನ್ಯ ಕ್ಷೇತ್ರದಿಂದ ಸುರೇಶ ಯತ್ನಳ್ಳಿ, ಬುಡುಪನಹಳ್ಳಿ ಪರಿಶಿಷ್ಟ ಪಂಗಡದ ಕ್ಷೇತ್ರದಿಂದ ಪ್ರಶಾಂತ ಮುದಕಮ್ಮನವರ, ಚಿಕ್ಕಬಾಸೂರ ಸಾಮಾನ್ಯ ಕ್ಷೇತ್ರದಿಂದ ಅರುಣಕುಮಾರ ಕರಡೇರ, ಶಿಡೇನೂರ ' ಅ ' ವರ್ಗದ ಕ್ಷೇತ್ರದಿಂದ ಸಂಕೇತಗೌಡ ಪಾಟೀಲ, ಹಿರೇಅಣಜಿ ಸಾಮಾನ್ಯ ಕ್ಷೇತ್ರದಿಂದ ಶಿವಯೋಗಿ ಉಕ್ಕುಂದ ಹಾಗೂ ಬ್ಯಾಡಗಿ ತಾಲೂಕಾ ಬಿನ್ ಸಾಲಗಾರರ ಕ್ಷೇತ್ರದಿಂದ ಜಯಪ್ಪ ಎಲಿ ಅವರನ್ನು ಹೊರತು ಪಡಿಸಿದರೆ ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇರುವ ಕಾರಣ ಇವರ ಅವಿರೋಧ ಆಯ್ಕೆ ಖಚಿತವಾಗಿದ್ದು, ಬಿಜೆಪಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.