ಪಿಕೆಪಿಎಸ್: ಜ್ಯೋತಿಕುಮಾರ ಪಾಟೀಲ ಗುಂಪಿಗೆ ಜಯ

ಲೋಕದರ್ಶನ ವರದಿ

ಕಾಗವಾಡ 01: ಸನ್ 1919ರಲ್ಲಿ ಕಾಗವಾಡದ ಗೌಡರಾದ ಭಾವುಸಾಹೇಬ ಪಾಟೀಲ ಇವರು ಪ್ರಾರಂಭಿಸಿದ್ದ ಪಿಕೆಪಿಎಸ್ ಸಂಸ್ಥೆ 101 ವರ್ಷದ ಶತಮಾನೋತ್ಸವ ಪೂರ್ಣಗೊಳಿಸಿದ್ದು. ಆಡಳಿತ ಮಂಡಳೀಯ ಚುನಾವಣೆಯಲ್ಲಿ ಅವರ ಮರಿಮಗ ಜ್ಯೋತಿಕುಮಾರ ಸಿದ್ದಗೌಡಾ ಪಾಟೀಲ ಇವರ ನೇತೃತ್ವದ ಗುಂಪಿಗೆ ಬಹುಮತ ಲಭಿಸಿದೆ.

ಶುಕ್ರವಾರ ರಂದು ಮತಚಲಾಯಿಸಿ ತಡರಾತ್ರಿ ಫಲಿತಾಂಶ ಲಭಿಸಿದೆ. ಇದರಲ್ಲಿ ಜ್ಯೋತಿಕುಮಾರ ಸಿದ್ದಗೌಡಾ ಪಾಟೀಲ ಇವರ ನೇತೃತ್ವದ ಗುಂಪಿಗೆ ಬಹುಮತ ಲಭಿಸಿದೆ. ಈ ಗುಂಪಿಗೆ ಇನ್ನೂಳಿದ ಚುನಾಯಿತಗೊಂಡ ಸದಸ್ಯರು ಅವಿರೋಧವಾಗಿ ಆಯ್ಕೆಯಾದ ಸದಸ್ಯ ಬಸವರಾಜ ಉಪ್ಪಾರ ಸಂಸ್ಥೆ ಅಭಿವೃದ್ಧಿಗಾಗಿ ಕೈಜೋಡಿಸಿದ್ದಾರೆ.

ಚುನಾವಣೆಯಲ್ಲಿ ಜ್ಯೋತಿಕುಮಾರ ಪಾಟೀಲ, ಚಿನಗೌಡಾ ಪಾಟೀಲ, ಬಸಗೌಡಾ ಪಾಟೀಲ, ಕುಮಾರ ಪೂಜಾರಿ, ಸತ್ಯಗೌಡಾ ಪಾಟೀಲ, ಅನೀಲ ಮಾಳಿ, ಗೌಸ್ ಸೈಯದ್, ಕವೀತಾ ಅನೀಲ ಮಗದುಮ್, ಮಾಲುತಾಯಿ ಅಪ್ಪಾಸಾಹೇಬ ಪೂಜಾರಿ, ಅನೀಲ ಭಜಂತ್ರಿ, ಚುನಾಯಿತಗೊಂಡಿದ್ದು. ಬಸವರಾಜ ಉಪ್ಪಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಸಂಸ್ಥೆಯ ಮುಂಭಾಗದಲ್ಲಿ ವಿಜಯೋತ್ಸವ ಆಚರಿಸಿದರು.

ಚುನಾವಣೆಯಲ್ಲಿ ಚುನಾಯಿತಗೊಂಡ ಜ್ಯೋತಿಕುಮಾರ ಪಾಟೀಲ ಇವರು ಶತಮಾನೋತ್ಸವ ಪೂರ್ಣಗೊಳಿಸಿದ ಸಂಸ್ಥೆಗೆ ಸದಸ್ಯರಾಗಿ ಆಯ್ಕೆಯಾಗಿದ್ದು, ಇದು ಹೆಮ್ಮೆಯ ಸಂಗತಿ. ಇದಲ್ಲದೇ ನಮ್ಮ ಮುತ್ತಜ್ಜ್ ಭಾವುಸಾಹೇಬ ಪಾಟೀಲ ನೂರು ವರ್ಷ ಹಿಂದೆ ಸ್ಥಾಪಿಸಿದ್ದ ಸಂಸ್ಥೆಗೆ ಮರಿಮಗನಾದ ನಾನು ಸದಸ್ಯನಾಗಿದ್ದೇನೆ ಇದು ನನ್ನ ಭಾಗ್ಯ. ಈ ಸಂಸ್ಥೆ ಅಭಿವೃದ್ಧಿಗಾಗಿ ಪಕ್ಷ, ಭೇದ ಮರೆತು ಎಲ್ಲರೂ ಶ್ರಮಿಸುತ್ತೇವೆ ಎಂದು ನೂತನ ಸದಸ್ಯ ಹಾಗೂ ರಾಜ್ಯ ಸಕರ್ಾರದಿಂದ "ಅತ್ಯುತ್ತಮ ಕಬ್ಬು ಬೆಳೆಗಾರ ರೈತ"ವೆಂದು ಪ್ರಶಸ್ತಿ ಪಡೆದ ಜ್ಯೊತಿಕುಮಾರ ಪಾಟೀಲ ಹೇಳಿದರು.ಈ ವೇಳೆ ಎಲ್ಲ ಚುನಾಯಿತ ಸದಸ್ಯರು ಪಾಲ್ಗೊಂಡಿದ್ದರು.