ನವದೆಹಲಿ, ಮೇ 26,ನೈಜರ್ ದೇಶದ ಭಾರತೀಯ ರಾಯಭಾರಿಯಾಗಿ ಪ್ರೇಮ್ ಕೆ ನಾಯರ್ ಅವರನ್ನು ನೇಮಕ ಮಾಡಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದೆ.ನಾಯರ್ ಅವರು ಪ್ರಸ್ತುತ ಭಾರತದ ಕಾನ್ಸುಲ್ ಜನರಲ್ ಆಗಿ ಹಂಬಂಟೋಟಾಗೆ ನಿಯುಕ್ತರಾಗಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.ಅವರು ಶೀಘ್ರದಲ್ಲೇ ನೈಜರ್ ರಾಯಭಾರಿಯಾಗಿ ನಿಯೋಜನೆಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದೆ.