ದೆಹಲಿ ಪೊಲೀಸರಿಂದ ಪಿ ಎಫ್ ಐ ಅಧ್ಯಕ್ಷ ಪರ್ವೇಜ್, ಕಾರ್ಯದರ್ಶಿ ಇಲ್ಯಾಸ್ ಬಂಧನನವದೆಹಲಿ

ದೆಹಲಿ  ಪೊಲೀಸರಿಂದ  ಪಿ ಎಫ್ ಐ  ಅಧ್ಯಕ್ಷ  ಪರ್ವೇಜ್,  ಕಾರ್ಯದರ್ಶಿ ಇಲ್ಯಾಸ್  ಬಂಧನನವದೆಹಲಿ, ಮಾ ೧೨ (ಯುಎನ್ಐ)  ಪಾಪ್ಯುಲರ್ ಫ್ರಂಟ್  ಆಫ್  ಇಂಡಿಯಾ (ಪಿಎಫ್ ಐ)   - ಶಾಹೀನ್  ಬಾಗ್ ನಲ್ಲಿ  ನಡೆಯುತ್ತಿರುವ   ಸುದೀರ್ಘ  ಪ್ರತಿಭಟನೆಗೆ ಪ್ರಚೋದನೆ ಆರೋಪ    ಸಂಬಂಧ  ದೆಹಲಿ ವಿಶೇಷ ದಳ ಪೊಲೀಸರು  ಪಾಪ್ಯುಲರ್ ಫ್ರಂಟ್  ಆಫ್  ಇಂಡಿಯಾ ( ಪಿಎಫ್ಐ)  ಅಧ್ಯಕ್ಷ  ಪರ್ವೇಜ್  ಹಾಗೂ ಕಾರ್ಯದರ್ಶಿ ಇಲಿಯಾಸ್  ಅವರನ್ನು ಬಂಧಿಸಿದೆ.ಸುದ್ದಿಗಾರರೊಂದಿಗೆ ಮಾತನಾಡಿದ  ದೆಹಲಿ ಪೊಲೀಸ್  ಸಾರ್ವಜನಿಕ ಸಂಪರ್ಕಾಧಿಕಾರಿ  ಎಂ.ಎಸ್. ರಾಂಧ್ವಾ,  ದೆಹಲಿ  ಗಲಭೆಗಳ  ಸಂಬಂಧ   ಈವರೆಗೆ  ಪೊಲೀಸರು ೭೧೨ ಎಫ್ ಐ ಆರ್ ಗಳನ್ನು ದಾಖಲಿಸಿದ್ದು,  ದೆಹಲಿಯಲ್ಲಿನ  ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಸಂಪೂರ್ಣ ಸಹಜ ಸ್ಥಿತಿಗೆ  ಬಂದಿದೆ ಎಂದು ಹೇಳಿದರು.ಪೌರತ್ವ ತಿದ್ದುಪಡಿ  ಕಾಯ್ದೆ    ವಿರೋಧಿ ಪ್ರತಿಭಟನೆ  ಹೆಸರಿನಲ್ಲಿ  ಜನರನ್ನು ಪ್ರಚೋಧಿಸುವಂತಹ   ದ್ವೇಷದ ಕರಪತ್ರ   ಹಂಚಿಕೆ   ಮಾಡಿದ್ದ   ಆರೋಪ ಸಂಬಂಧ ದೆಹಲಿ  ವಿಶೇಷ ದಳ ಪೊಲೀಸರು  ಪಿ ಎಫ್ ಐ ನ    ಗುಪ್ತಚರ ನಿಗ್ರಹ ವಿಭಾಗದ ಮುಖ್ಯಸ್ಥ  ಡ್ಯಾನಿಷ್  ಎಂಬ ವ್ಯಕ್ತಿಯನ್ನು  ಕಳೆದ ೯ ರಂದು   ಬಂಧಿಸಿದ್ದರು