ತುಂಬಿ ಹರಿಯುತ್ತಿರುವ ಬೇಡ್ತಿ ನದಿ


ಯಲ್ಲಾಪುರ: ಕಳೆದ ಮೂರನಾಲ್ಕು ವರ್ಷದಿಂದ ಬರಗಾಲದಿಂದ ಬರಗೆಟ್ಟಿದ್ದ ತಾಲ್ಲೂಕಿನಲ್ಲಿ ಈಗ ಕಳೆದ ಒಂದು ವಾರದಿಂದ ಭಾರಿ ಮಳೆ ಸುರಿಯುತ್ತಿದ್ದು, .ನಾಕಾರು ವರ್ಷಗಳಲ್ಲಿ ಕಂಡರಿಯದ ಮಳೆ ಕಳೆದ ನಾಲ್ಕೈದು ದಿನಗಳಲ್ಲಿ ಸುರಿದಿದೆ.ಮಂಗಳವಾರ 88 ಮೀ. ಮಳೆ ಸುರಿದಿದ್ದು ಇಲ್ಲಿಯವರೆಗೆ 1394 ಮಿ,ಮೀ ಮಳೆಯಾಗಿದೆ.ಬೆಡ್ತಿನದಿ, ಹಳ್ಳ ,ಕೊಳ್ಳಗಳು ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.ಮಳೆ ಗಾಳಿಗೆ ಗೋವಿನಜೋಳ, ಅಡಕೆ,ಬಾಳೆ, ಮರಗಳು ನೆಲ ಕಚ್ಚಿದ್ದು ಅಪಾರ ಹಾನಿಯಾಗಿದೆ.ಗಾಳಿ ಮಳೆಗೆ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಪಟ್ಟಣದಲ್ಲಿ ವಿದ್ಯುತ ತಂತಿಗಳ ಮೇಲೆ ಮರ,ಟೊಂಗೆಗಳು ಬಿದ್ದು ವಿದ್ಯುತ್ ವ್ಯತ್ಯಯವಾಗಿ ಕಣ್ಣು ಮುಚ್ಚಾಲೆ ಆಡುತ್ತಿದ್ದು, ಇಡೀ ದಿನ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. 

    ಸುರಿಯುತ್ತಿರುವ ಭಾರಿ ಮಳೆ ಗಾಳಿಗೆ ತಾಲೂಕಿನ ಕಿರವತ್ತಿ ಹಾಗೂ ಮದನೂರು ಪಂಚಾಯ್ತಿಯ ಗ್ರಾಮೀಣ ಭಾಗದಲ್ಲಿ ಗೋವಿನಜೋಳ ಬೆಳೆ ನೆಲಸಮವಾಗಿದೆ.ಸುಮಾರು ಸಾವಿರ ಎಕರೆಯಷ್ಟು ಗೋವಿನಜೋಳ ಬೆಳೆಯಲಾಗುತ್ತಿದ್ದು,ಹತ್ತಿ ಬೆಳೆಯುತ್ತಿದ್ದ ರೈತರು ಬೆಲೆ ಕುಸಿತದಿಂದ ಈ ಬಾರಿ ಗೋವಿನಜೋಳ ಬೆಳೆಯುವ ಕಡೆ ಮುಖ ಮಾಡಿದ್ದಾರೆ.ಇದೀಗ ರೈತರು ಕಂಗಾಲಾಗಿದ್ದಾರೆ.ಮದನೂರು ಪಂಚಾಯ್ತಿ ವ್ಯಾಪ್ತಿಯ ಕಳಸೂರು,ಡೋಮಗೇರಿ,ಹುಣಶೆಟ್ಟಿಕೊಪ್ಪ ಭಾಗದಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ.

ಪಟ್ಟಣದ ರವೀಂದ್ರನಗರದಲ್ಲಿ ಸಕ್ಕುಬಾಯಿ ಗಣಪತಿ  ಕಲಾಲ ಅವರ ವಾಸ್ತವ್ಯದ ಮನೆಯ ಗೋಡೆ ಕುಸಿದಿರುತ್ತದೆಯಲ್ಲದೇ, ತಾಲ್ಲೂಕಿನ ಆನಗೋಡು ಗ್ರಾಮ ಪಂಚಾಯ್ತಿಯ ಗೇರಾಳದಲ್ಲಿ ತಿಮ್ಮಣ್ಣ ಸಣ್ಣತಮ್ಮ ಗೌಡ ಅವರ ಮನೆ ಮಳೆಯಿಂದ ಬಿದ್ದು ಹಾನಿಯಾಗಿದೆ. ವಜ್ರಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಳಚೆಯಲ್ಲಿ ವಿಶ್ವೇಶ್ವರ ಶಂಕರ ಹೆಗಡೆ ಇವರ ಮಳೆಯಿಂದ ಕೊಟ್ಟಿಗೆ ಬಿದ್ದು ಹಾನಿಿಯಾಗಿದೆ. ಮಾಗೋಡು ಗ್ರಾಮದ ಸುಜಾತಾ ಶಂಕರ ಸಿದ್ದಿ ಇವರ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಸ್ಥಳಕ್ಕೆ ತಹಶೀಲ್ದಾರ ಡಿ ಜಿ ಹೆಗಡೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪಟ್ಟಣದ  ಉಪಖಜಾನೆಯ ಎದುರು ಮರ ಬಿದ್ದಿದೆಯಲ್ಲದೇ,ಹಾಗೂ ಇಡಗುಂದಿ ವಲಯ ಅರಣ್ಯಾಧಿಕಾರಿಗಳ ನಿವಾಸದ ಎದುರು  ಮರ ಬಿದ್ದು ಹೊಟೆಲ್ ಒಂದಕ್ಕೆ 

ಹಾನಿಯಾಗಿದೆ.