ಲೋಕದರ್ಶನವರದಿ
ಮಹಾಲಿಂಗಪುರ : ಸಕರ್ಾರದ ಅಭಿವೃದ್ಧಿ ಕೆಲಸಗಳಿಗೆ ಅತಿವೃಷ್ಟಿ ಹಾಗೂ ಪ್ರವಾಹ ಅಡ್ಡಿಪಡಿಸಿವೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.
ಸಮೀಪದ ರನ್ನಬೆಳಗಲಿಯಲ್ಲಿ ಡಿ. 27 ರಂದು ವ್ಯಾಪಾರ ಮಳಿಗೆಗಳು ಹಾಗೂ ಸಾರ್ವಜನಿಕ ಉದ್ಯಾನವನ ಉದ್ಘಾಟಿಸಿ, ಶಿಲಾನ್ಯಾಸ ಮತ್ತು ವಿವಿಧ ಭೂಮಿ ಪೂಜೆ ನೆರವೇರಿಸಿ, ಸ್ಥಳೀಯ ಮಹಾಲಿಂಗೇಶ್ವರ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಆಗಸ್ಟ್ ತಿಂಗಳಿನಿಂದ ಬಿದ್ದ ಭಾರಿ ಮಳೆಯಿಂದ ಭಯಂಕರ ಪ್ರವಾಹ ತಲೆದೋರಿ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದೂ ಅಲ್ಲದೆ ಲಕ್ಷಾಂತರ ಮನೆಗಳು ನೆಲ ಸಮವಾಗಿ ಅಂದಾಜು 20 ಸಾವಿರ ಕೋಟಿಯಷ್ಟು ಆಸ್ತಿಪಾಸ್ತಿ ನಷ್ಟವಾಗಿ ರೈತರು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದರು.ಆದ್ದರಿಂದ ಸರಕಾರ ಹಾಗೂ ಅಧಿಕಾರಿಗಳು, 03 ರಿಂದ 04 ನಾಲ್ಕು ತಿಂಗಳುಗಳವರೆಗೆ ಇದರ ಪರಿಹಾರೋಪಾಯಕ್ಕಾಗಿ ಕಾಲ ವ್ಯಯಿಸಿದ್ದರಿಂದ ಇತರ ಅಭಿವೃದ್ಧಿ ಕೆಲಸಗಳು ನೆನೆಗುದಿಗೆ ಬಿದ್ದವು ಎಂದು ಸರಕಾರದ ಕೆಲಸ ವಿಳಂಬವಾಗಿರುವುದನ್ನು ಒಪ್ಪಿಕೊಂಡರು.ಮುಂದಿನ ಮೂರೂವರೆ ವರ್ಷಗಳಲ್ಲಿ ನೀರಾವರಿ, ಹೆದ್ದಾರಿಗಳಲ್ಲದೆ ಸಾಕಷ್ಟು ಕೆಲಸಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿ ಪ್ರಧಾನಿ ಮೋದಿಯವರೂ ಸಹ ರೈತರ ಆದಾಯ ದ್ವಿಗುಣಗೊಳ್ಳುವ ಸಲುವಾಗಿ ಅನೇಕ ರೈತ ಪರ ಯೋಜನೆಗಳನ್ನು ಹಮ್ಮಿಕ್ಕೊಂಡಿದ್ದಾರೆ ಎಂದರು.
ಭವಿಷ್ಯದಲ್ಲಿ ಬೆಳಗಲಿ ಜನತೆಗೆ ಕುಡಿಯುವ ನೀರಿನ ಕೊರತೆ ನೀಗಿಸಿ ಶಾಶ್ವತ ಪರಿಹಾರವಾಗಿ ಬೃಹತ್ ಮಹಾರಾಜ ಕೆರೆ ನಿಮರ್ಾಣಕ್ಕಾಗಿ 10 ಕೋಟಿ ರೂ. ಮಂಜೂರಿ ತೆಗೆದುಕೊಂಡಿದ್ದು ಕಾಮಗಾರಿಯನ್ನು ಶೀಘ್ರದಲ್ಲೇ ಟೆಂಡರ್ ಕರೆದು ಕೆಲಸ ಆರಂಭಿಸುವುದಾಗಿ ತಿಳಿಸಿದರು. ನಂತರ ಎಪಿಎಂಸಿ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ ಕುಡಿಯುವ ನೀರು, ಕಾಲುವೆ ನಿಮರ್ಾಣ, ಕೆರೆ ಕಾಮಗಾರಿ, ಉದ್ಯಾನವನ ಮುಂತಾದ 15 ಬೇಡಿಕೆಗಳ ಅಹವಾಲನ್ನು ಉಪಮುಖ್ಯಮಂತ್ರಿಗಳಿಗೆ ಗ್ರಾಮಸ್ಥರ ಪರವಾಗಿ ಸಲ್ಲಿಸಿದರು, ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿದ ಉಪಮುಖ್ಯಮಂತ್ರಿ ಪರಿಹಾರದ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಹನಮಂತ ನಿರಾಣಿ ಮಾತನಾಡಿದರು, ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ಧರೆಪ್ಪ ಸಾಂಗಲಿಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮತ್ತು ಸುನೀಲಗೌಡ ಪಾಟೀಲ, ಪಪಂ ಸ್ಥಾಯಿ ಸಮಿತಿ ಛೇರ್ಮನ್ ಸಿದ್ದುಗೌಡ ಪಾಟೀಲ, ಉಪಾಧ್ಯಕ್ಷ ಅಶೋಕ ಸಿದ್ದಾಪುರ, ರಂಗಪ್ಪ ಒಂಟಗೋಡಿ, ಶ್ರೀಮಂತ ಸಿದ್ಧಾಪುರ, ನ್ಯಾಯವಾದಿ ಬಿ. ಎಚ್. ಪಂಚಗಾಂವಿ, ಕೆ. ಆರ್. ಮಾಚಕ್ಕನವರ, ಧರೆಪ್ಪ ಸಾಂಗಲಿಕರ, ಚಿಕ್ಕಪ್ಪ ನಾಯಕ, ಮೋಹನ್ ಕುಲಕಣರ್ಿ, ಲಕ್ಷ್ಮಣ ಕಲ್ಲೊಳ್ಳೆಪ್ಪಗೋಳ, ಆರ್. ಟಿ. ಪಾಟೀಲ, ಬಾಡಗಿ , ಈರಪ್ಪ ಕಿತ್ತೂರ, ಶಿವನಗೌಡ ಪಾಟೀಲ, ಮಹಾದೇವ ಮುರನಾಳ, ಪಪಂ ಮುಖ್ಯಾಧಿಕಾರಿ ವಿ. ಎಸ್. ಕಲಾದಗಿ, ಮಲ್ಲು ಕ್ವಾಣ್ಯಾಗೋಳ, ಗಣೇಶ ನೀಲನ್ನವರ, ಬಸು ಚಿಕ್ಕನ್ನವರ . ಬಿವಿವಿಎಸ್ ಪ್ರೌಢ ಶಾಲೆಯ ವಿದ್ಯಾಥರ್ಿ ಕು. ಐಶ್ವಯರ್ಾ ಹೂಗಾರ ಮತ್ತು ಸಂಗಡಿಗರು ಪ್ರಾಥರ್ಿಸಿ, ಕು. ರೂಪಾ ಹಿಕಡಿ ಮತ್ತು ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಮುಧೋಳ ತಾಲ್ಲೂಕು ಭಾಜಪ ಘಟಕದ ಉಪಾಧ್ಯಕ್ಷ ಪಂಡಿತ ಪೂಜಾರಿ ಸ್ವಾಗತಿಸಿ, ಶಿಕ್ಷಕ ಕೆ. ಬಿ. ಕುಂಬಾಳೆ ವಂದಿಸಿ, ಶಿಕ್ಷಕ ರಾಘವೇಂದ್ರ ನೀಲನ್ನವರ ನಿರೂಪಿಸಿದರು.