ಇಂದು ನಡೆಯಲಿರುವ 5ನೇ ಸಾಹಿತ್ಯ ಸಮ್ಮೇಳನದ ರೂಪರೇಷೆ
ಶಿಗ್ಗಾವಿ 10: ನಾಡಿಗೆ ಭಾವೈಕ್ಯತೆಯ ಸಂದೇಶ ಸಾರಿದ ತಾಲೂಕ ಪ್ರಸಿದ್ದ ಮಹನೀಯರನ್ನು ನಾಡಿಗೆ ಕೊಡುಗೆಯಾಗಿ ನೀಡಿದ ಶಿಗ್ಗಾವಿ ತಾಲೂಕಿನ 5ನೇ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ತಾಲೂಕಿನ ಜನತೆಯಲ್ಲಿ ಸಂತಸವನ್ನು ಮೂಡಿಸಿದೆ.ತಾಲೂಕಿನಲ್ಲಿ ಆರು ವರ್ಷಗಳ ನಂತರ 2025 ರಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆಯಾಗಿ ಪಟ್ಟಣದ ಮಗಳು ಹಾಗೂ ಬೆಳಗಾವಿಯ ಸೊಸೆ ಪ್ರಸ್ತುತ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವೆ ಡಾ.ವಿಜಯಲಕ್ಷ್ಮಿ ತಿರ್ಲಾಪೂರ ಆಯ್ಕೆಯಾಗಿರುವುದು ಮಹಿಳೆಯರಿಗೆ ಪ್ರಾಧ್ಯಾನತೆ ನೀಡಿದಂತಾಗಿದೆ.
ಫೆ. 11 ರಂದು ಮಂಗಳವಾರ ಬೆಳಿಗ್ಗೆ 7.30 ಕ್ಕೆ ಸಂತಕವಿ ಕನಕದಾಸ ವೇದಿಕೆ, ಸಂತ ಶಿಶುವಿನಹಾಳ ಶರೀಫ, ಶಿವಯೋಗಿ ಮಹಾಮಂಟಪ, ಆರಟಾಳ ರುದ್ರಗೌಡ್ರು ಹಾಗೂ ಹಿರೇಮಲ್ಲೂರ ಈಶ್ವರನ್ ಮಹಾದ್ವಾರದಲ್ಲಿ ಡಾ. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ, ತಹಸೀಲ್ದಾರ ರವಿ ಕೊರವರ ಅವರಿಂದ ರಾಷ್ಟ್ರ ಧ್ವಜಾರೋಹಣ, ತಾಲೂಕಾ ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಹಾಗೂ ಪುರಸಭೆಯ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಅವರಿಂದ ನಾಡ ಧ್ವಜಾರೋಹಣ ನೆರವೇರಲಿದೆ. ನಂತರ 8.30 ಕ್ಕೆ ತಾಲೂಕ ಕ್ರೀಡಾಂಗಣದಿಂದ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಶಾಸಕ ಯಾಸೀರಖಾನ್ ಪಠಾಣ ಚಾಲನೆ ನೀಡುವರು.
ಮೆರವಣಿಗೆ ನಂತರ 11 ಗಂಟೆಗೆ ವೇದಿಕೆ ಉದ್ಘಾಟನಾ ಸಮಾರಂಭ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಶ್ರೀ ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ ಮಹಾರಾಜರು ಸಮ್ಮೇಳನ ಉದ್ಘಾಟಿಸುವರು. ಕೇಂದ್ರ ಸಚಿವ ಪಲ್ಲಾದ ಜೋಶಿ, ಬಸವರಾಜ ಹೊರಟ್ಟಿ, ರುದ್ರ್ಪ ಲಮಾಣಿ, ಸಲೀಂ ಅಹ್ಮದ, ಯಾಸೀರಖಾನ ಪಠಾಣ ಸೇರಿದಂತೆ ಇತರ ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಸಮ್ಮೇಳನಾಧ್ಯಕ್ಷೆ ಡಾ. ವಿಜಯಲಕ್ಷ್ಮೀ ತಿರ್ಲಾಪೂರ ಅಧ್ಯಕ್ಷತೆಯ ಭಾಷಣ ಮಾಡಲಿದ್ದಾರೆ. ನಂತರ ವಿವಿಧ ಲೇಖಕರ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.
ಮಧ್ಯಾಹ್ನ ನಡೆಯಲಿರುವ ಘೋಷ್ಠಿಗಳಲ್ಲಿ, ಸಾಮರಸ್ಯ ಮತ್ತು ವಿವಿಧತೆಯಲ್ಲಿ ಏಕತೆ ವಿಷಯ ಕುರಿತು ಚರ್ಚೆ, ವಿಷಯ ಮಂಡನೆ ನಡೆಯ ನಂತರ ತಾಲೂಕಿನ ಕಲಾವಿದರಿಂದ ಹಾಗೂ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆದು, ಸಂಜೆ 7 ರಿಂದ ಸನ್ಮಾನ ಹಾಗೂ ಸಮಾರೋಪ ಸಮಾರಂಭ ನೆರವೇರಲಿದೆ.್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷಭಾಕ್ಸ ಸುದ್ದಿ : ಕನ್ನಡದ ಮನಸುಗಳೆಲ್ಲ ಒಂದಾಗಿ ಸಂಭ್ರಮದಿಂದ 5 ನೇ ತಾಲೂಕ ಸಾಹಿತ್ಯ ಸಮ್ಮೇಳನ ಆಚರಣೆಗೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ಸಮ್ಮೇಳನದಲ್ಲಿ 3 ಗೋಷ್ಠಿ ನಡೆಯಲಿವೆ. ಬೆಳಗ್ಗೆ 7,30ಕ್ಕೆ ಧ್ವಜಾರೋಹಣ, ಬೆಳಗ್ಗೆ 8.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಬೆಳಗ್ಗೆ 11ಕ್ಕೆ ವೇದಿಕೆ ಕಾರ್ಯಕ್ರಮ, ಮಧ್ಯಾಹ್ನ ಗೋಷ್ಠಿಗಳು, ಸಂಜೆ ಸಮಾರೂಪ ಸಮಾರಂಭ ನಡೆಯಲಿದೆ. ಸಮ್ಮೇಳನ ಹಬ್ಬದಂತೆ ಆಚರಿಸಲು ಎಲ್ಲರೂ ಸಹಾಯ, ಸಹಕಾರ ನೀಡುತ್ತಿರುವುದು ಖುಷಿ ತಂದಿದೆ.ನಾಗಪ್ಪ ಬೆಂತೂರು ಕಸಾಪ ತಾಲೂಕ ಅಧ್ಯಕ್ಷರು.್ಷ್ಷ್ಷ