ನಮ್ಮೂರ ಶಾಲೆ ನಮ್ಮಯ ಕಣ್ಮಣಿ-ವನಹಳ್ಳಿ ಪೋಷಕರು-ಗ್ರಾಮಸ್ಥರ ಪ್ರತಿರೋದ ಚಳುವಳಿ

ನಮ್ಮೂರ ಶಾಲೆ ನಮ್ಮಯ ಕಣ್ಮಣಿ-ವನಹಳ್ಳಿ ಪೋಷಕರು-ಗ್ರಾಮಸ್ಥರ ಪ್ರತಿರೋದ ಚಳುವಳಿ  Our school is our vision - Vanahalli parents-villagers' resistance movement

ಲೋಕದರ್ಶನ ವರದಿ 

ಧಾರವಾಡ 16 : ಜಿಲ್ಲೆಯ ವನಹಳ್ಳಿ ಗ್ರಾಮದಲ್ಲಿ  “ನಮ್ಮೂರ ಶಾಲೆ ನಮ್ಮಯ ಕಣ್ಮಣಿ” ಎಂದು ಹೆಸರಿರುವ ಬ್ಯಾನರ್ ಅನ್ನು ಎಸ್‌ಡಿಎಮ್‌ಸಿ ಪದಾಧಿಕಾರಿಗಳು, ಪೋಷಕರು, ಗ್ರಾಮಸ್ಥರು ಹಾಗೂ ಶಿಕ್ಷಣ ಉಳಿಸಿ ಸಮಿತಿ ಸದಸ್ಯರು ಊರಿನ ಶಾಲಾ ಮುಂಭಾಗದಲ್ಲಿ ಕಟ್ಟುವ ಮುಖಾಂತರ ಎಲ್ಲ ವಿದ್ಯಾರ್ಥಿಗಳಿಗೂ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸುತ್ತಾ, ನಮ್ಮೂರ ಶಾಲೆ ಮುಚ್ಚಲು ನಾವು ಎಂದಿಗೂ ಬಿಡುವುದಿಲ್ಲ ಎಂದು ಘೋಷಣೆ ತೆಗೆದುಕೊಂಡು, ಪ್ರತಿರೋಧ ಚಳುವಳಿಗೆ ಚಾಲನೆ ನೀಡಿದರು. 

ನಂತರ ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿಗಳಾದ ಶಶಿಕಲಾ ಮೇಟಿ ಅವರು, ನಮ್ಮೂರ ಶಾಲೆ ಉಳಿಯಬೇಕು ಮತ್ತು ಕೆಪಿಎಸ್ ಯೋಜನೆ ರದ್ದಾಗಬೇಕೆಂದು ಆಗ್ರಹಿಸಿ  ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಿಕೊಂಡು ಕಳೆದ 5 ತಿಂಗಳಿಂದ ಗ್ರಾಮಸ್ಥರು ಹಾಗೂ ಪೋಷಕರು ಹೋರಾಟ ನಡೆಸಿದ್ದೇವೆ. ಗ್ರಾಮ ಮಟ್ಟದಿಂದ ಆರಂಭಿಸಿ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ವರೆಗೂ ಪ್ರತಿಭಟನೆ ಹಾಗೂ ಸಮಾವೇಶಗಳನ್ನು ನಡೆಸಿದ್ದೇವೆ. ನಾಡಿನ ಹೆಸರಾಂತ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು ನಮ್ಮೊಂದಿಗೆ ಧ್ವನಿಗೂಡಿಸಿದ್ದಾರೆ. 

ಈಷ್ಟೆಲ್ಲ ಹೋರಾಟ, ಪ್ರತಿಭಟನೆ ನಡೆದರೂ ರಾಜ್ಯ ಸರ್ಕಾರ ನಾಡಿನ ಪೋಷಕರ, ಶಿಕ್ಷಣ ತಜ್ಞರ, ಸಾಹಿತಿಗಳ ಮಾತನ್ನು ಕೇಳದೆ ಹಠಮಾರಿತನ ಧೋರಣೆ ತಾಳುತ್ತಿದೆ. ಬಡವರ ರೈತ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾದರೂ ಪರವಾಗಿಲ್ಲ ಏಕಖ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಬಜೆಟ್ ನಲ್ಲಿ ಘೋಷಿಸಿರುವಂತೆ  ಜೂನ್ ನಿಂದಲೇ ಹೊಸ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಇಲ್ಲಿ 3ರಿಂದ 5 ಕಿ. ಮೀ ವ್ಯಾಪ್ತಿಯ ಶಾಲೆಗಳನ್ನು ವೀಲೀನಗೊಳಿಸಲಾಗುವುದೆಂದು 15 ಅಕ್ಟೋಬರ್ 2025ರ ಆದೇಶವು ತಿಳಿಸುತ್ತದೆ.  

ಈ ಕುರಿತು ಪಟ್ಟಿ ಕೂಡ ದೊರೆತಿದೆ ಹಾಗೂ ಮುಂದುವರೆದು ರಾಜ್ಯ ಸರ್ಕಾರವು ಮೂರು ವರ್ಷಗಳಲ್ಲಿ ದೇಶದಲ್ಲೇ ಅತ್ಯುತ್ತಮ ಸರ್ಕಾರಿ ಶಾಲೆ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ನೆಪ ಹೇಳುತ್ತಾ, ಎಂಟು ಶಿಕ್ಷಣದ ಗ್ಯಾರಂಟಿಗಳನ್ನು ಘೋಷಿಸುತ್ತಾ ರಾಜ್ಯದ ಜನತೆಗೆ  ವಿಶ್ವಾಸದ್ರೋಹ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಕೆಪಿಎಸ್ ಶಾಲೆಗಳನ್ನು ಮಾತ್ರ ಅಭಿವೃದ್ಧಿಪಡಿಸಿ, ನಮ್ಮೂರ ಶಾಲೆಗಳನ್ನು ತಾವಾಗಿಯೇ ಮುಚ್ಚುವಂತೆ ಮಾಡಲು ಹೊರಟಿದ್ದಾರೆಯೇ ಎಂದು ಪ್ರಶ್ನೆ ಕೇಳುತ್ತಾ ನಮ್ಮೂರ ಶಾಲೆಗಳನ್ನು ಉಳಿಸಿಕೊಳ್ಳಲು ಪ್ರತಿರೋಧ ಚಳುವಳಿಗೆ ನಾವು  ಧುಮುಕಬೇಕು ಎಂದು ಕರೆಕೊಟ್ಟರು. ಸಭೆಯಲ್ಲಿ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷರಾದ ವೀರಭದ್ರಯ್ಯ ಚಿಕ್ಕಮಠ್, ಸದಸ್ಯರಾದ , ನಿಂಗಪ್ಪ ನಂಬಿಬಿಸಾಬ್, ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.