ನಮ್ಮ ಶಾಸಕರಿಗೆ ಮಾಡಲು ಬೇರೆ ಕೆಲಸವಿರುತ್ತದೆ : ರಮೇಶ್ ಕುಮಾರ್ ವ್ಯಂಗ್ಯ

ಬಾಗಲಕೋಟೆ,ಅ 13:    ನಮಗೆ ನಮ್ಮ ಜವಾಬ್ದಾರಿಗಳ ಅರಿವಿರ ಬೇಕು .ರಾಜ್ಯದ ಜನರ ನಂಬಿಕೆಯ ವಾರಸುದಾರರು.ಆ ಶ್ರದ್ಧೆ ನಮಗೆ ಇರಬೇಕು.ಅದನ್ನು ಬಿಟ್ಟು ನಮಗೆ ಕೆಲಸ ಇತ್ತು ಅಲ್ಲಿಗೆ ಹೋಗಬೇಕು ಇಲ್ಲಿಗೆ ಹೋಗಬೇಕು ಅಂದರೆ ನಾವೇನು ಮಾಡೋಕಾಗುತ್ತೆ ಎಂದು ವಿಧಾನ ಸಭೆ ಕಲಾಪಕ್ಕೆ ಗೈರಾದ ಶಾಸಕರ ನಡೆಯನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಖಂಡಿಸಿದ್ದಾರೆ.    

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮ್ಮ ಶಾಸಕರಿಗೆ ಮಾಡಲು ಬೇರೆ ಬೇರೆ ಕೆಲಸ ಇರುತ್ತವಲ್ಲವೇ. ಶಾಸನ ಸಭೆಗೆ ಆಹ್ವಾನ ಬಂದ ಮೇಲೆ.ಮನೆಯಿಂದ ಹೊರಟ ಮೇಲೆ ಪ್ರವಾಸ ಭತ್ಯ ಕೊಡುತ್ತಾರೆ.ಅಲ್ಲಿ ಹೋಗಿ ಇರಲಿಕ್ಕೆ  ಖರ್ಚಿಗೆ ದಿನಕ್ಕೆ ಇಂತಿಷ್ಟು ಎಂದು ಹಣ ಪಾವತಿ ಮಾಡಲಾಗುತ್ತದೆ. ಸದನದಲ್ಲಿ ಹಾಜರಿಗೆ ಸರ್ಕಾರ ಹಣ ಪಾವತಿಸುತ್ತದೆ.ಶಾಸಕರಿಗೆ ಎಲ್ಲವೂ ಇರುತ್ತದೆ.     

ರಾಜ್ಯದ ಏಳು ಕೋಟಿ ಜನಸಂಖ್ಯೆಯ ಪ್ರತಿನಿಧಿಯಾಗಿ ವಿಧಾನಸೌಧದಲ್ಲಿ 224 ಶಾಸಕರು ಇದ್ದೇವೆ. ನಮಗೆ ನಮ್ಮ ಜವಾಬ್ದಾರಿ ಗೊತ್ತಿರಬೇಕು. ರಾಜ್ಯದ ಜನರ ನಂಬಿಕೆಯ ವಾರಸುದಾರರು ಎಂದರು.    

ನೆರೆಯ ವಿಚಾರದಲ್ಲಿ ನಾನು ರಾಜಕೀಯ ಮಾತನಾಡುವುದಿಲ್ಲ.ತಾಯಿ ಇದ್ದರೆ ತಾನೇ ಮಲತಾಯಿ.ಪ್ರಧಾನಿ ಮೋದಿಗೆ ತಾಯಿ ಹೃದಯವೂ ಇಲ್ಲ.ಮಲತಾಯಿ ಆದರೂ ಪರವಾಗಿಲ್ಲ. ಮಲತಾಯಿ ಮನೆಯಲ್ಲಾದರೂ ಇಟ್ಟಕೊಳ್ಳುತ್ತಾಳೆ.ಇದು ಅದಕ್ಕಿಂತ ಅದ್ವಾನವಾಗಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.    

ನೆಪೋಲಿಯನ್ ಚಕ್ರವರ್ತಿ ಮಾತು ಉದಾಹರಿಸಿ ಸ್ಪೀಕರ ನಿರ್ಧಾರವನ್ನು ಕಟು ವಾಗಿ ಟೀಕಿಸಿದರು.ಪ್ರೇಮ ಮತ್ತು ಲವ್ ವಿಭಿನ್ನ ಲಿಂಗಗಳಿಗೆ ಸೇರಿದ್ದು,ಪ್ರೇಮ ವ್ಯವಹಾರ ಹೊರಗಡೆ ಮಾಡಬಾರದು. ರಾಜ್ಯಕ್ಕೆ ಸಂಬಂಧಿಸಿದ ವ್ಯವಹಾರ ಖಾಸಗಿಯಾಗಿ ಮಾಡಬಾರದು. ಹೊರಗೆ ಪಾರದರ್ಶಕವಾಗಿ ಮಾಡಬೇಕು. ಕ್ಯಾಮರಾ ಒಳಗಡೆ ತರಬೇಡಿ ಎಂಬ ನಿರ್ಣಯ ಬಹಳ ದುಃಖಕರವಾಗಿದೆ ಎಂದು ಅವರು ಸ್ಪೀಕರ್ ನಡೆಯನ್ನು ವ್ಯಂಗ್ಯವಾಡಿದರು.