ಹಿರಿಯ ನಾಗರಿಕರ ಸ್ವಾಭಿಮಾನದ ಬದುಕಿಗೆ ನಮ್ಮ ಸರ್ಕಾರದ ಬೆಂಬಲ ಸದಾ ಇರುತ್ತದೆ: ಪ್ರಲ್ಹಾದ ಜೋಶಿ

Our government's support will always be there for senior citizens to live a dignified life: Pralhad

ಧಾರವಾಡ ಜ.19: ಭಾರತ ಸರಕಾರದ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ ದಿವ್ಯಾಂಗರಿಗೆ ಅಗತ್ಯವಿರುವ ಆಧುನಿಕ ಉಪಕರಣಗಳನ್ನು ಉಚಿತವಾಗಿ ನೀಡಲಾಗುತ್ತದೆ. ದಿವ್ಯಾಂಗರ ಸ್ವಾಲಂಬಿ ಬದುಕಿಗೆ ಮತ್ತು ಹಿರಿಯನಾಗರಿಕರ ಸ್ವಾಭಿಮಾನದ ಬದುಕಿಗೆ ನಮ್ಮ ಸರ್ಕಾರದ ಬೆಂಬಲ ಸದಾ ಇರುತ್ತದೆ. ಅಗತ್ಯ ಸಹಾಯ, ಸಾಧನ ಸಲಕರಣೆಗಳನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ನಾಗರೀಕ ಸರಬರಾಜು ಮತ್ತು ಆಹಾರ, ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ಸಚಿವರಾದ ಪ್ರಲ್ಹಾದ ಜೋಶಿ ಅವರು ಹೇಳಿದರು.  

ಅವರು ಇಂದು (ಜ.19) ಬೆಳಿಗ್ಗೆ ಧಾರವಾಡ ನಗರದ ಜೆ.ಎಸ್‌.ಎಸ್ ಕಾಲೇಜು ಸಭಾಂಗಣದಲ್ಲಿ ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಅಂಗವಿಕಲ ವ್ಯಕ್ತಿಗಳಿಗೆ ನೆರವು (ADIP) ಯೋಜನೆಯಡಿಯಲ್ಲಿ 1051 ದಿವ್ಯಾಂಗ ಜನರಿಗೆ ಮತ್ತು ರಾಷ್ಟ್ರೀಯ ವಯೋಶ್ರೀ (RVY) ಯೋಜನೆಯಡಿಯಲ್ಲಿ 576 ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ, ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಈ ಶಿಬಿರದಲ್ಲಿ ಉಚಿತವಾಗಿ ಅರ್ಹರಿಗೆ ಸಾಧನ ಸಲಕರಣೆಗಳನ್ನು ಉಚಿತವಾಗಿ ವಿತರಿಸಲು ಕೇಂದ್ರ ಸರಕಾರ ಅಧೀನದ ಆರ್ಟಿಫಿಶಿಯಲ್ ಲಿಂಬ್ಸ್‌ ಮ್ಯಾನುಫ್ಯಾಕ್ಚರಿಂಗ್ ಕಾರ​‍್ೊರೇಷನ್ ಆಫ್ ಇಂಡಿಯಾ (ALIMCO) ಸಂಸ್ಥೆಯ ಮೂಲಕ ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಧಾರವಾಡ ಜಿಲ್ಲಾಡಳಿತದ ಸಹಯೋಗದಲ್ಲಿ ದಿವ್ಯಾಂಗರಿಗೆ ಹಾಗೂ ಹಿರಿಯ ನಾಗರಿಕರಿಗೆ ಹಲವಾರು ತಪಾಸಣಾ ಶಿಬಿರಗಳನ್ನು ಆಯೋಜಿಸಿ, ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಇಂದಿನ ವಿತರಣಾ ಕಾರ್ಯಕ್ರಮದಲ್ಲಿ ಅಡಿಪ್  (ADIP)

ಯೋಜನೆಯಡಿಯಲ್ಲಿ ಒಟ್ಟು 1051 ಫಲಾನುಭವಿಗಳಿಗೆ ವಿವಿಧ ವರ್ಗಗಳ 2019 ಸಂಖ್ಯೆಯ ಸಹಾಯಕ ಸಾಧನಗಳನ್ನು ಒದಗಿಸಲಾಗಿದ್ದು, ಅವುಗಳ ಮೌಲ್ಯ ಅಂದಾಜು ರೂ. 136.06 ಲಕ್ಷಗಳು ಆಗಿದೆ ಮತ್ತು ರಾಷ್ಟ್ರೀಯ ವಯೋಶ್ರೀ (RVY)  ಯೋಜನೆಯಡಿಯಲ್ಲಿ 576 ಫಲಾನುಭವಿಗಳಿಗೆ ವಿವಿಧ ವರ್ಗಗಳಿಗೆ 3191 ಸಂಖ್ಯೆಯ ಸಹಾಯಕ ಸಾಧನಗಳನ್ನು ಒದಗಿಸಲಾಗಿದೆ. ಇವುಗಳ ಮೌಲ್ಯ ಅಂದಾಜು ರೂ. 54.77 ಲಕ್ಷಗಳು ಆಗಿದೆ ಎಂದು ಸಚಿವರು ತಿಳಿಸಿದರು.  

ಅಡಿಪ್(ADIP)  ಯೋಜನೆಯ ಅಡಿಯಲ್ಲಿ ಇಂದು, 80 ಮೋಟರೀಕೃತ ಟ್ರೈಸಿಕಲ್‌ಗಳು, 285 ಟ್ರೈಸಿಕಲ್‌ಗಳು, 175 ವೀಲ್ ಚೇರ್‌ಗಳು, 390 ಊರುಗೋಲುಗಳು, 56 ರೋಲೇಟರ್‌ಗಳು, 34 ಸಿಪಿ ಚೇರ್‌ಗಳು, 39 ಸುಗಮ್ಯ ಕೇನ್‌ಗಳು, 198 ವಾಕಿಂಗ್ ಸ್ಟಿಕ್‌ಗಳನ್ನು ವಿತರಿಸಲಾಗಿದೆ. ರಾಷ್ಟ್ರೀಯ ವಯೋಶ್ರೀ (ಖಗಿಙ) ಯೋಜನೆಯಡಿಯಲ್ಲಿ 13 ಬ್ರೈಲ್ ಕಿಟ್‌ಗಳು, 7 ಸ್ಮಾರ್ಟ್‌ ಫೋನ್‌ಗಳು ಮತ್ತು 187 ಪ್ರೋಸ್ಥೆಸಿಸ್ ಮತ್ತು ಕ್ಯಾಲಿಪರ್‌ಗಳು, 266 ವಾಕಿಂಗ್ ಸ್ಟಿಕ್‌ಗಳು, 144 ವೀಲ್ ಚೇರ್‌ಗಳು (ಕಮೋಡ್), 184 ಕುರ್ಚಿಗಳು,ಸ್ಟೂಲ್‌ಗಳು (ಕಮೋಡ್), 10 ಊರುಗೋಲುಗಳು, 40 ವೀಲ್ ಚೇರ್‌ಗಳು, 40 ವೀಲ್ ಚೇರ್‌ಗಳು, ವಾಕರ್‌ಗಳು, 487 ಎಲ್‌.ಎಸ್ ಬೆಲ್ಟ್‌ಗಳು, 1000 ನೀ ಬ್ರೇಸ್‌ಗಳು, 365 ಸಿಲಿಕಾನ್ ಫೋಮ್ ಕುಶನ್, 11 ಸ್ಪೈನಲ್ ಸಪೋರ್ಟ್‌ಗಳು ಮತ್ತು 404 ಬಿಟಿಇ(BTE) ಶ್ರವಣ ಸಾಧನಗಳನ್ನು ವಿತರಿಸಲಾಯಿತು ಎಂದು ಸಚಿವ ಪ್ರಲ್ಹಾದ ಜೋಶಿ ಅವರು ತಿಳಿಸಿದರು. *ಕಿಮ್ಸ್‌ ಆಸ್ಪತ್ರೆಯಲ್ಲಿ ಅಲಿಂಮಕೊ ಪ್ರಧಾನ ಮಂತ್ರಿ ದಿವ್ಯಾಶ ಕೇಂದ್ರ ಆರಂಭ:* ಅನೇಕ ಸಂದರ್ಭಗಳಲ್ಲಿ ದಿವ್ಯಾಂಗರಿಗೆ ಸೂಕ್ತ ಸಹಾಯಕ ಸಲಕರಣೆ ಅಥವಾ ಇತರ ಸೌಲಭ್ಯಗಳು ಅಗತ್ಯವಿದ್ದಾಗ ಬೇಕಾಗುವ ದಿವ್ಯಾಂಗ ಪ್ರಮಾಣಪತ್ರ ಅವರಿಗೆ ತಕ್ಷಣಕ್ಕೆ ಸೀಗುವದಿಲ್ಲ. ಈ ಸಮಸ್ಯೆಯನ್ನು ಹೊಗಲಾಡಿಸಲು ಇಂದು ಹುಬ್ಬಳ್ಳಿಯ ಕೆಎಂಸಿಆರ್ ಐ (ಕಿಮ್ಸ್‌) ಆಸ್ಪತ್ರೆ ಆವರಣದಲ್ಲಿ ಅಲಿಂಮಕೊ ಪ್ರಧಾನ ಮಂತ್ರಿ ದಿವ್ಯಾಶ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಇನ್ನು ಮುಂದೆ ಧಾರವಾಡ ಜಿಲ್ಲೆಯ ದಿವ್ಯಾಂಗರು ಈ ಕೇಂದ್ರದಲ್ಲಿ ತೋರಿಸಿ, ತಪಾಸಣೆ ಮಾಡಿಸಿಕೊಂಡು ಅಗತ್ಯ ಸಹಾಯಕ ಉಪಕರಣವನ್ನು ಉಚಿತವಾಗಿ ಅಲ್ಲಿಂದಲೇ ಪಡೆದುಕೊಳ್ಳಬಹುದು. ಅಲಿಂಮಕೊ ಕೇಂದ್ರದ ಶಾಖೆಯನ್ನು ಜಿಲ್ಲೆಯಲ್ಲಿ ತೆರೆಯಬೇಕೆಂಬ ಬಹುದಿನಗಳ ಬೇಡಿಕೆಯು ಈಗ ಇಡೆರಿದೆ. ದಿವ್ಯಾಂಗರು, ಹಿರಿಯ ನಾಗರಿಕರು ಇದರ ಸದುಪಯೋಗ ಪಡೆಯಬಹುದು ಎಂದು ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು.  

ಕೇಂದ್ರ ಗ್ರಾಹಕ ವ್ಯವಹಾರಗಳ ಮತ್ತು ಆಹಾರ ಮತ್ತು ನಾಗರೀಕ ಪೂರೈಕೆ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವರಾದ ಬನವಾರಿ ಲಾಲ್ ವರ್ಮಾ ಅವರು ಮಾತನಾಡಿ, ದಿವ್ಯಾಂಗರ ಸ್ವಾಲಂಬಿ ಜೀವನಕ್ಕೆ ಅಗತ್ಯವಿರುವ ಎಲ್ಲ ಸಹಕಾರ, ಸೌಲಭ್ಯಗಳನ್ನು ಕೇಂದ್ರ ಸರಕಾರ ನೀಡುತ್ತಿದೆ. ದಿವ್ಯಾಂಗರಿಗೆ ಉದ್ಯೋಗದಲ್ಲಿ ಶೇ.3 ಬದಲಿಗೆ ಶೇ.4 ರಷ್ಟು ಮೀಸಲು ನಿಗದಿಪಡಿಸಿ, ಪ್ರಾಧನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಈಗಾಗಲೇ ಆದೇಶಿಸಿದೆ. ಸರಕಾರದ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಶೇ.5 ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಅವರು ಮಾತನಾಡಿ, ಸರಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಮನೋಭಾವ ಜನಪ್ರತಿನಿಧಿಗಳಲ್ಲಿ, ಅಧಿಕಾರಿಗಳಲ್ಕಿ ಇರಬೇಕು. ಅಂದಾಗ ಮಾತ್ರ ಇಂತಹ ಬೃಹತ್ ಕಾರ್ಯಕ್ರಮಗಳು ಆಗಲು ಸಾಧ್ಯವಾಗುತ್ತದೆ. ಸಣ್ಣಪುಟ್ಟ ಸಹಾಯಕ್ಕಾಗಿ ಜನಪ್ರತಿನಿಧಿ, ಅಧಿಕಾರಿಗಳ ಬಳಿ ಅಲಿಯುವ ದಿವ್ಯಾಂಗರಿಗೆ ಉಚಿತವಾಗಿ ಅಗತ್ಯ ಸಾಧನ ಸಲಕರಣೆಗಳನ್ನು ನೀಡುತ್ತಿರುವುದು ಸಂತಸ ತಂದಿದೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ವೈಯಕ್ತಿಕ ಕಾಳಜಿ, ಕಳಕಳಿ ಮತ್ತು ಶ್ರಮದಿಂದ ಇಂದು ಒಂದೇ ಸ್ಥಳದಲ್ಲಿ ಸಾವಿರಾರು ಜನ ದಿವ್ಯಾಂಗರಿಗೆ, ನೂರಾರು ಜನ ಹಿರಿಯ ನಾಗರೀಕರಿಕರಿಗೆ ಸೌಲಭ್ಯ ನೀಡುತ್ತಿರುವುದು ಅವರ ಜನಪರ ನೀತಿಗೆ ಸಾಕ್ಷಿ ಆಗಿದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಸ್ವಾಗತಿಸಿದರು. ಅಲಿಂಮಕೊ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಅಜೇಯ ಚೌದರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನಿರ್ದೇಶಕಿ ಡಾ.ಎಚ್‌.ಎಚ್‌.ಕುಕನೂರ ವಂದಿಸಿದರು. ಇಂದಿನ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ, ರಾಜ್ಯ ಆಯುಕ್ತ ದಾಸ ಸೂರ್ಯವಂಶಿ, ಧಾರವಾಡ ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಜನತಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಅಜೀತ ಪ್ರಸಾದ, ಮಹಾನಗರಪಾಲಿಕೆ ಸದಸ್ಯರು, ವಿವಿಧ ಜನಪ್ರತಿನಿಧಿಗಳು, ಜಿಲ್ಲೆಯ ಅಧಿಕಾರಿಗಳು, ದಿವ್ಯಾಂಗರು, ಹಿರಿಯನಾಗರಿಕರು ಮತ್ತು ಅವರ ಕುಟುಂಬ ಸದಸ್ಯರು, ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.