ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನ 2024-25
ಧಾರವಾಡ: ಗುರುಗಳು ನಮ್ಮ ಶಕ್ತಿ, ಅವಕಾಶ ನೀಡಿದ ವ್ಯಕ್ತಿಗಳಿಗೆ ನಾವು ಯಾವತ್ತು ಋಣಿಯಾಗಿರಬೇಕು, ಉತ್ತಮ ಶಿಕ್ಷಕರು ಮತ್ತು ಸ್ನೇಹಿತರಿದ್ದರೆ ಸಾಧನೆ ಸಾಧ್ಯ. ಪ್ರತಿಯೊಬ್ಬರಲ್ಲಿಯು ಅಡಕವಾಗಿರುವ ವಿಶೇಷವಾದ ಕೌಶಲ್ಯದಿಂದ ನಮ್ಮ ಗುರಿಯನ್ನು ಸಾಧಿಸಬಹುದು ಎಂದು ಕರ್ನಾಟಕ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾಗಿರುವ ಪ್ರೊ ಬಿ. ಎಂ ರತ್ನಾಕರ ರವರು ಹೇಳಿದರು.
ಜೆ.ಎಸ್.ಎಸ್ ಎಸ್. ಎಮ್.ಪಿ.ಯು.ಕಾಲೇಜಿನ 2024-25ನೇ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಗುರಿಯಿಂದ ವಿಚಲಿತರಾಗದೆ ಒತ್ತಡ ಮುಕ್ತರಾಗಿ ಧ್ಯರ್ಯದಿಂದ ಪರೀಕ್ಷೆಗಳನ್ನು ಎದುರಿಸಬೇಕೆಂದು ಕಿವಿ ಮಾತು ಹೇಳಿದರು. ಸಿಕ್ಕಂತಹ ಅವಕಾಶಗಳ ಸದುಪಯೋಗ ಪಡಿಸಿಕೊಂಡು ಯಶಸ್ಸನ್ನು ಕಾಣಬೇಕು ಹಾಗೂ ತಂದೆ ತಾಯಿ, ಶಿಕ್ಷಕರು ತಾವು ಕಲಿತಂತಹ ಸಂಸ್ಥೆಯನ್ನು ಸದಾ ಗೌರವಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದ ರವರು ಜೆ.ಎಸ್.ಎಸ್ ಎಸ್. ಎಮ್.ಪಿ.ಯು. ವಿದ್ಯಾಲಯ ಬೆಳೆದುಬಂದ ಹಾದಿಯನ್ನು ವಿವರಿಸುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯು ಸುಂದರವಾದ ಭವಿಷ್ಯದ ಕನಸು ಕಾಣಬೇಕು ಆ ಕನಸನ್ನು ನನಸಾಗಿಸಲು ಧೃಡಸಂಕಲ್ಪ ಹೊಂದಿ ಅವಿರತವಾಗಿ ಶ್ರಮಿಸಬೇಕು. ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜೆ.ಎಸ್.ಎಸ್ ಎಸ್.ಎಮ್.ಪಿ. ಯು. ಕಾಲೇಜಿನ ಪ್ರಾಚರ್ಯರಾದ ಶ್ರೀ ರವಿವರ್ಮ ಜೋಶಿಯವರು ಸ್ವಾಗತಿಸಿದರು. ವಿಧ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಡಾ. ಎಸ್. ಕೆ. ನಡುವಿನಕೇರಿ ಅವರು ಕಾರ್ಯಕ್ರಮದ ಅತಿಥಿ ಹಾಗೂ ಅಧ್ಯಕ್ಷರನ್ನು ಪರಿಚಯಿಸಿದರು. ಕುಮಾರಿ ಪಲ್ಲವಿ ಪಾಟೀಲ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕ್ರೀಡಾ ನಿರ್ದೇಶಕರಾದ ಪವನ ಗೊರವರ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ರಕ್ಷಿತಾ ಚೌಕಿಮಠ ಹಾಗೂ ಜಂಟಿ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ನಾಯ್ಕ ರವರು ವೇದಿಕೆ ಮೇಲೆ ಉಪಸ್ಥಿತರಿದ್ದರು, ಕುಮಾರಿ ಅನುಶ್ರೀ ಹಾಗೂ ದೀಪಾ ಕಾರ್ಯಕ್ರಮ ನಿರೂಪಿಸಿದರು. ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನಗದು ಬಹುಮಾನ ವಿತರಿಸಿದರು.