ಬೆಂಗಳೂರು,
ಮಾ.29, ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಈಗಾಗಲೇ ದೇಶವನ್ನೇ
ಲಾಕ್ಡೌನ್ ಮಾಡಲಾಗಿದ್ದು, ಮನೆಯಿಂದ ಯಾರೊಬ್ಬರೂ ಹೊರ ಬರದಂತೆ ಪೊಲೀಸರು ಮನವಿ
ಮಾಡುತ್ತಿದ್ದಾರೆ.ಆದರೆ, ಕೆಲವರು ಲಾಕ್ ಡೌನ್ ಆದೇಶಕ್ಕಾಗಲೀ, ಪೊಲೀಸರ ಮಾತಿಗೂ ಕಿವಿಗೊಡದೆ ಅನಾವಶ್ಯಕವಾಗಿ ರಸ್ತೆಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ತಮ್ಮ
ಆರೋಗ್ಯವನ್ನು ಬದಿಗಿಟ್ಟು ಕಾರ್ಯನಿರ್ವಹಿಸಲೇ ಬೇಕು. ಆದ್ದರಿಂದ ಜನತೆ ಇದನ್ನು
ಅರಿತುಕೊಂಡು ಲಾಕ್ಡೌನ್ಗೆ ಸಹಕರಿಸಬೇಕು ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.ಪೊಲೀಸರು
ಮನೆಯಿಂದ ಹೊರಗೆ ಬಂದು ಕಾರ್ಯನಿರ್ವಹಿಸಬೇಕಾಗಿರುವುದರಿಂದ ಮನೆಗೆ ಹೋದ ನಂತರ
ಕುಟುಂಬಸ್ಥರಿಂದ ದೂರವೇ ಉಳಿಯುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಸಂಚಾರ ವಿಭಾಗದ ಜಂಟಿ
ಪೊಲೀಸ್ ಆಯುಕ್ತ ರವಿಕಾಂತೇಗೌಡ ಬಹಿರಂಗಪಡಿಸಿದ್ದಾರೆ.ದಯವಿಟ್ಟು ಮನೆಯಿಂದ ಹೊರಬರದೆ ನಮಗೆ ಸಹಕರಿಸಿ ಎಂದು ವಿನಂತಿಸಿಕೊಂಡಿದ್ದಾರೆ.ನಿಮ್ಮ
ಸುರಕ್ಷತೆಗಾಗಿ ನಮ್ಮ ತಂದೆ ತಾಯಿ ಹೊರಗೆ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮನೆಗೆ ಬಂದಾಗಲೂ ನಾನು ಅವರ ಸಮೀಪ ನಮಗೆ ತೆರಳಲು ಆಗುತ್ತಿಲ್ಲ. ದಯವಿಟ್ಟು ಮನೆಯಲ್ಲೇ
ಇದ್ದು ಸಹಕರಿಸಿ ಎಂದು ಪೊಲೀಸರ ಮಕ್ಕಳು ಸಾರ್ವಜನಿಕರಲ್ಲಿ ಮನವಿ ಮಾಡುವ
ಸಂದೇಶವೊಂದನ್ನು ಅವರು ಹಂಚಿಕೊಂಡಿದ್ದಾರೆ.