ಕೊಪ್ಪಳ: ಮಕ್ಕಳು ಹಿರಿಯರೊಂದಿಗೆ ಹೊಂದಾಣಿಕೆ ಮನೋಭಾವದಿಂದ ಇರಬೇಕು. ಹಿರಿಯರಲ್ಲಿ ಕೀಳರಿಮೆ ಬರದಂತೆ ವರ್ತಿಸಬೇಕು. ನಮ್ಮ ವರ್ತನೆ ಹಿರಿಯರನ್ನು ನಕಾರಾತ್ಮಕ ಯೋಚನೆಗೆ ದೂಡಬಾರದು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ನಿವೃತ್ತ ನೌಕರರ ಸಂಘ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ನ ಜೆ. ಹೆಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಿವೆ. ಹಿರಿಯರಿಲ್ಲದ ಮನೆ ತಲೆ ಇಲ್ಲದ ದೇಹದಂತೆ. ಹಿರಿಯರು ಕಿರಿಯರಿಗೆ ಮಾರ್ಗದರ್ಶಕರಾಗಿರುತ್ತಾರೆ. ವಯಸ್ಸು ಅರವತ್ತು ದಾಟುತ್ತಿದ್ದಂತೆ ಬಹುತೇಕರು ಮನೋವ್ಯಾಕುಲತೆಗೆ ತುತ್ತಾಗಿ ಚಿಕ್ಕ ಮಗುವಿನ ಹಾಗೆ ವತರ್ಿಸಲು ಆರಂಭಿಸುತ್ತಾರೆ. ಅಂತಹವರನ್ನು ನಾವು ನಮ್ಮ ಮಕ್ಕಳಂತೆ ಕಾಳಜಿ ವಹಿಸಿ ಆರೈಕೆ ಮಾಡಬೇಕು. ನಮ್ಮೊಂದಿಗೆ ಅವರು ಬೆರೆತು ಬಾಳುವಂತಾಗಬೇಕು. ಅಂತಹ ಪರಿಸರ ನಿರ್ಮಾ ಣ ಮಾಡಲು ಎಲ್ಲರೂ ಮುಂದಾಗಬೇಕು. ಹಿರಿತನಕ್ಕೆ ಗೌರವ ಕೊಟ್ಟು, ಅವರ ಸಲಹೆ ಸೂಚನೆಗಳನ್ನು ಪಾಲಿಸುತ್ತಾ ಹಿರಿಯರೊಂದಿಗೆ ಸಮೃದ್ಧ ಜೀವನ ನಡೆಸಬೇಕು. ಹಿರಿಯರೂ ಕೂಡ ಇಂದಿನ ಪೀಳಿಗೆಯ ಜೀವನ ಶೈಲಿಗೆ ಹೊಂದಿಕೊಳ್ಳುವ ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಹಿರಿಯರು ಹಾಗೂ ಕಿರಿಯರ ನಡುವಿನ ಅಂತರ ಕಡಿಮೆಯಾಗಲು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಇಂದು ನಾವೆಲ್ಲರೂ ಯುವಕರಿರಬಹುದು ಆದರೆ ಮುಂದೊಂದು ದಿನ ನಾವೂ ಕೂಡ ವೃದ್ಧರಾಗುತ್ತೇವೆ. ನಮ್ಮ ದೇಶದಲ್ಲಿ ವ್ಯಕ್ತಿಯ ಜೀವಿತಾವಧಿ 75 ವರ್ಷಗಳಿಗೆ ಬಂದು ನಿಂತಿದೆ. ನಾವು ಸೇವಿಸುವ ಆಹಾರ, ಗಾಳಿ ಮತ್ತು ನೀರು ಎಲ್ಲವೂ ವಿಷಪೂರಿತವಾಗಿವೆ. ಅನಿವಾರ್ಯವಾಗಿ ಪ್ರತಿನಿತ್ಯ ನಾವು ಅವುಗಳನ್ನೇ ಸೇವಿಸುವುದರಿಂದ ನಮ್ಮ ಆರೋಗ್ಯ ಬೇಗನೇ ಹಾಳಾಗುತ್ತದೆ. ಹಿಂದಿನ ಕಾಲದಲ್ಲಿ ಆರೋಗ್ಯಯುತ ಆಹಾರ, ಪರಿಸರದಿಂದ ಬಾಳಿದ ಹಿರಿಯರು ಸಕಾರಾತ್ಮಕ ಯೋಚನೆ ಹೊಂದಿರುತ್ತಾರೆ. ಎಷ್ಟೋ ಸಮಸ್ಯೆಗಳಿಗೆ ಅವರು ನೀಡುವ ಸಲಹೆಗಳು ಪರಿಣಾಮಕಾರಿಯಾಗಿರುತ್ತವೆ. ನಮ್ಮ ದೇಶದದಲ್ಲಿರುವ ಸಂಸ್ಕೃತಿ, ಆಧ್ಯಾತ್ಮಿಕತೆ, ಕೌಟುಂಬಿಕ ಪರಿಸರವನ್ನು ಬೇರೆ ದೇಶದಲ್ಲಿ ಕಾಣಲು ಸಾಧ್ಯವಿಲ್ಲ. ನಮ್ಮ ಸಂಸ್ಕೃತಿಯನ್ನು ಹೇಗೆ ಪೂಜಿಸುತ್ತೇವೆಯೋ ಹಾಗೆಯೇ ನಮ್ಮ ಹಿರಿಯರನ್ನೂ ಪೂಜಿಸುವುದು ನಮ್ಮ ಕರ್ತವ್ಯ. ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳು ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕು. ವಯೋವೃದ್ಧರಿಗೆ ಕೇಂದ್ರ ಮತ್ತು ರಾಜ್ಯ ಸಕರ್ಾರದಿಂದ ಇರುವ ಹಲವಾರು ಸವಲತ್ತುಗಳನ್ನು ಅವರಿಗೆ ತಲುಪಿಸಬೇಕು. ಅವರಿಗೆ ಗುರುತಿನ ಚೀಟಿಯನ್ನು ಕೊಟ್ಟು ಬಸ್ಸು ಹಾಗೂ ರೈಲುಗಳಲ್ಲಿ ಪ್ರಯಾಣಿಸಲು ಸುಲಭವಾಗುವಂತೆ ಮಾಡಬೇಕು ಎಂದು ಅವರು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಹಿರಿಯ ವೈದ್ಯರಾದ ಡಾ. ಕೆ. ಜಿ. ಕುಲಕಣರ್ಿ ಮಾತನಾಡಿ, ವೃದ್ಧಾಪ್ಯ ಎಂಬುದು ಜೀವನದ ಅವಿಭಾಜ್ಯ ಅಂಗ. ನಾವು ಆರೋಗ್ಯವಾಗಿದ್ದಾಗ ಮಾತ್ರ ಕಾನೂನಿನ ಎಲ್ಲಾ ರೀತಿಯ ಯೋಜನೆಗಳ ಲಾಭ ಪಡೆದುಕೊಳ್ಳಲು ಸಾಧ್ಯ. ಅರವತ್ತು ವರ್ಷ ದಾಟಿದ ನಂತರ ನಮ್ಮ ದೇಹದಲ್ಲಿ ಏರು-ಪೇರಾಗದಂತೆ ನೋಡಿಕೊಳ್ಳಬೇಕು. ಜಗತ್ತಿನಲ್ಲಿ ವಿಶೇಷವಾಗಿ ಜಪಾನ, ಚೀನಾದಂತಹ ದೇಶಗಳಲ್ಲಿ ಮರಣದ ವಯಸ್ಸು ಅಲ್ಲಿರುವ ವಾತಾವರಣ ಮತ್ತು ಹವಾಮಾನದ ಮೇಲೆ ಅವಲಂಬಿತವಾಗಿರುತ್ತದೆ. ಹಿರಿಯರಿಗೆ ಬರುವ ಕೀಲು ನೋವು, ಮಂಡಿ ನೋವುಗಳನ್ನು ಬಹು ಬೇಗ ಗುರುತಿಸಬಹುದು. ನಮ್ಮ ಹಿರಿಯರ ಆಹಾರ ಪದ್ಧತಿಯಲ್ಲಿ ರೋಗ ನಿರೋಧಕತೆಯನ್ನು ಹೆಚ್ಚಿಸುವ ಅಂಶಗಳು ಹೆಚ್ಚಿದ್ದವು. ಆದ್ದರಿಂದ ಇಂದು ನಾವುಗಳು ಕೂಡ ಅವರ ಆಹಾರ ಪದ್ಧತಿಯನ್ನು ಅರಿತು ಪಾಲಿಸಬೇಕು. ವಯಸ್ಸು ಹೆಚ್ಚಾದಂತೆ ವೃದ್ಧರಲ್ಲಿ ಮಾನಸಿಕ ತೊಂದರೆಗಳು ಹೆಚ್ಚಾಗಿ ಹೃದಯ ರೋಗಗಳು ಬರುತ್ತವೆ. ಆದ್ದರಿಂದ ನಮ್ಮ ಮನಸ್ಸನ್ನು ಸಾಧ್ಯವಾದಷ್ಟು ಉಲ್ಲಸಿತವಾಗಿ, ಧನಾತ್ಮಕ ಯೋಚನೆಗಳಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಹಿರಿಯರು ಸಕಾರಾತ್ಮಕ ಯೋಚನೆ ಮಾಡುವುದರಿಂದ ಕುಟುಂಬದಲ್ಲಿ ಎಲ್ಲರೂ ಸಂತೋಷದಿಂದ ಇರಬಹುದು. ಇಷ್ಟು ದಿನಮಾನದಲ್ಲಿ ನಮ್ಮಲ್ಲಿ ವೃದ್ಧಾಶ್ರಮಗಳಿರಲಿಲ್ಲ ಆದರೆ ಇಂದು ವೃದ್ಧಾಶ್ರಮ ಹೆಚ್ಚಾಗಿವೆ. ಹಿರಿಯರು ಒಳ್ಳೆಯ ಪುಸ್ತಕಗಳನ್ನು ಓದುವುದರ ಜೊತೆಗೆ ಲಘು ವ್ಯಾಯಾಮ ಮಾಡಬೇಕು. ನಮ್ಮಷ್ಟಕ್ಕೆ ನಾವು ಆರೋಗ್ಯವಂತರಾಗಬೇಕೆಂದರೆ ನಾವು ದಿನನಿತ್ಯ ಯೋಗ, ವ್ಯಾಯಾಮ ಮಾಡುತ್ತಾ ಆರೋಗ್ಯವಂತರಾಗಿರಬೇಕು. ನಾವು ಇನ್ನೊಬ್ಬರಿಗೆ ಮಾದರಿಯಾಗಿರಬೇಕು. ಅಂದಾಗ ಇಡೀ ಸಮಾಜದಲ್ಲಿ ನಾವು ಯುವಕರಿಗೆ ಮಾದರಿಯಾಗಿರಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಅಧಿಕಾರಿ ಡಾ. ಡಿ. ಎನ್. ಮೂಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪವಿಭಾಗಾಧಿಕಾರಿ ಸಿದ್ರಾಮೇಶ್ವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಈರಣ್ಣ ಪಂಚಾಳ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ. ವಿ. ಜಡಿಯವರ, ಮಲ್ಲಿಕಾಜರ್ುನ, ಶರಣಪ್ಪ ಸಿಂದೋಗಿ ಹಾಗೂ ಹಿರಿಯ ನಾಗರಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.