ಶಶಿಧರ ಶಿರಸಂಗಿ
ಶಿರಹಟ್ಟಿ 29: ಗದಗ ಜಿಲ್ಲೆಯಲ್ಲಿಯೇ ಹೆಸರವಾಸಿಯಾದ ತಾಲೂಕಿನ ಮಾಗಡಿ ಕೆರೆ ಇದೀಗ ಎಲ್ಲಿಲ್ಲದ ಹೆಸರು ಮಾಡುತ್ತಿದೆ. ಏಕೆಂದರೆ ಪ್ರತೀ ವರ್ಷ ಇಲ್ಲಿಗೆ ತಮ್ಮ ಸಂತಾನೋತ್ಪತ್ತಿಗಾಗಿ ದೇಶ ವಿದೇಶಗಳಿಂದ ಅಪರೂಪದ ಅತಿಥಿಗಳಾಗಿ ನಾನಾ ರೀತಿಯ ಸವಿರಾರು ವಿದೇಶೀ ಪಕ್ಷಿಗಳು ಆಗಮಿಸುತ್ತವೆ.
ಪ್ರತೀ ವರ್ಷ ನವೆಂಬರದಲ್ಲಿ ಪ್ರಾರಂಭವಾಗುವ ಚಳಿಗಾಲಕ್ಕೆ ತಪ್ಪದೇ ಸರಿಯಾದ ಸಮಯಕ್ಕೆ ಮಾಗಡಿ ಕೆರೆಗೆ ಈ ವಿದೇಶೀ ಪಕ್ಷಿಗಳು ಆಗಮಿಸುತ್ತ್ತವೆ. ಈ ಚಳಿಗಾಲದ ಅತಿಥಿಗಳೆಲ್ಲ ಹಂಸಗಳ ಜಾತಿಗೆ ಸೇರಿದ್ದು, ಇವುಗಳಲ್ಲಿ ಲಾಂಗ ಹೆಡೆಡ್ ಗೂಸ್, ಬ್ರಾಹ್ಮಿಣಿ ಡಕ್, ಪೇಂಟೆಡ್ ಸ್ಪಾರ್ಕ, ಬಾರ ಹೆಡೆಡ್ ಗೂಸ್, ಬ್ಲ್ಯಾಕ ಬಿಸ್, ವೈಟ್ ಬಿಸ್, ಬ್ಲ್ಯಾಕ್ ನೆಕೆಡ್ ಸ್ಪಾರ್ಕ, ವೈಟ್ ನೆಕೆಡ್ ಸ್ಪಾರ್ಕ, ಸ್ಕ್ಯಾಪ್ ಡಕ್, ಗ್ರೇ ಡಕ್ ಕೂಟ್, ಲಿಟಿಲ್ ಕಾರ್ಮೋರೆಂಟ ಸ್ಪಾಟ್ ಬಿಲ್ ಹಲವಾರು 16 ಜಾತಿಯ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಈ ಬಾರಿ ಕೇವಲ 8 ಜಾತಿಯ ಪಕ್ಷಿಗಳು ಮಾತ್ರ ಆಗಮಿಸಿದ್ದು ಇವುಗಳಲ್ಲಿ ಬಾರ ಹೆಡೆಡ್ ಗೂಸ್, ಬ್ರಾಹ್ಮಿಣಿ ಡಕ್ ಹೆಚ್ಚಿನ ಸಂಖ್ಯೆಗಳಲ್ಲಿ ಆಗಮಿಸಿವೆ.
ಪ್ರತೀ ವರ್ಷ ಜಮ್ಮು ಕಾಶ್ಮೀರದ ಲಡಾಕ, ಲೇಹ್, ಮಲೇಷಿಯಾ, ರಶಿಯಾ, ಆಸ್ಟ್ರೇಲಿಯಾ, ಟಿಬೇಟ್, ಸೈಬಿರಿಯಾಗಳಿಂದಾ ವಲಸೆ ಬರುತ್ತವೆ. ಲಡಾಕ, ಲೇಹ್, ಟಿಬೇಟ್ಗಳಲ್ಲಿ ವಿಪರೀತ ಚಳಿಗಾಲವಿರುವದರಿಂದ ನವೆಂಬರದಿಂದಾ ಮಾರ್ಚವರೆಗೆ ಅಲ್ಲಿನ ಸರೋವರಗಳು ಹೆಪ್ಪುಗಟ್ಟುವುದರಿಂದ ಅಲ್ಲಿನ ಪಕ್ಷಿಗಳು ತಮಗೆ ವಾಸಕ್ಕೆ ಅಲ್ಲಿ ಹವಾಮಾನ ಸರಿ ಹೊಂದದೇ ಇರುವುದರಿಂದ ನವೆಂಬರದಿಂದ ಫೆಬ್ರುವರಿವರೆಗೆ ಈ ಮಾಗಡಿ ಕೆರೆಗೆ ಬಂದು ತಮ್ಮ ವಂಶೋದ್ದಾರ ಮಾಡಿಕೊಂಡು ಮರಳುತ್ತವೆ.
ಈ ಅಪರೂಪದ ವಿದೇಶಿ ಅತಿಥಿಗಳು ಈ ಕೆರೆಗೆ ನವ್ಹಂಬರ ತಿಂಗಳಿನಲ್ಲಿ ಬಂದಿಳಿದು ಫೆಬ್ರುವರಿ ತಿಂಗಳಲ್ಲಿ ತಮ್ಮ ದೇಶಗಳಿಗೆ ಮರಳುತ್ತವೆ. ಒಟ್ಟು ನಾಲ್ಕು ತಿಂಗಳುಗಳ ಕಾಲ ಈ ಕೆರೆಯಲ್ಲಿ ಬೀಡು ಬಿಡುವ ಈ ಪಕ್ಷಿಗಳು ಮುಂಜಾವಿನಲ್ಲಿ ನೆರೆಯ ಹಾವೇರಿ, ಧಾರವಾಡ, ಬಳ್ಳಾರಿ ಹಾಗೂ ಗದಗ ಜಿಲ್ಲೆಗಳ ಅನೇಕ ದೂರದ ಹೊಲಗಳಿಗೆ ಆಹಾರ ಅರಸಿ ಹೋಗುತ್ತವೆ. ಇವುಗಳು ಮುಖ್ಯ ಆಹಾರ, ಭತ್ತ, ಕಡಲೆ ಮತ್ತು ಶೇಂಗಾ. ಬೆಳ್ಳಂಬೆಳಿಗ್ಗೆನೇ ಆಹಾರ ಅರಸಿ ಹೋಗಿ ಮತ್ತೇ 3 ಘಂಟೆಗಳಲ್ಲೇ ಕೆರೆಗೆ ವಾಪಸ್ಸಾಗುತ್ತವೆ. ಸಾಯಂಕಾಲದವೆರೆಗೆ ನೀರಲ್ಲಿ ವಿಶ್ರಮಿಸಿ ಸೂರ್ಯಾಸ್ತದ ಸಮಯದಲ್ಲಿ ಮತ್ತೇ ಹಾರಿ ಹೋಗಿ ಹೊಟ್ಟೆ ತುಂಬಿಸಿಕೊಂಡು ಬರುತ್ತವೆ. ಇದು ದಿನನಿತ್ಯದ ವಲಸೆ ಪಕ್ಷಿಗಳ ಆಹಾರ ಹಾಗೂ ವಲಸೆ ದಿನಚರಿ.
ಕೆರೆಯ ಒಟ್ಟು 134 ಎಕರೆ ವಿಸ್ತೀರ್ಣತೆಯನ್ನು ಹೊಂದಿರುತ್ತದೆ. ಈ ವರ್ಷವಿಡೀ ಆದ ಮಳೆಯಿಂದ ಕೆರೆಯು ಸಂಪೂರ್ಣ ತುಂಬಿಕೊಂಡು ನೋಡುಗರಿಗೆ ಎರಡು ಕಣ್ಣು ಸಾಲದು ಅನ್ನು ಹಾಗೆ ಅನ್ನಿಸುತ್ತದೆ.
ಈ ವರ್ಷ ಕೆರೆಯ ಸುತ್ತಲೂ ಇಂಟರ್ಲಾಕ್ ಸಿಸ್ಟಮ ಇಟಿಗೆಗಳನ್ನು ಜೋಡಿಸಿ, ಅಲ್ಲಲ್ಲಿ ಪಕ್ಷಿಪ್ರಿಯರಿಗೆ ಕುಲಿತುಕೊಂಡು ನೋಡಲಯ ಸಿಮೆಂಟ್ ಮಂಚಗಳ ವ್ಯವಸ್ಥೆ, ದನಕರುಗಳ ಹಾಗೂ ಪುಂಡಪೋಕರಿಗಳ ಹಾವಳಿ ತಪ್ಪಿಸಲು ತಂತಿ ಬೇಲಿಯ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ದೂರದಿಂದ ನೋಡಲು ಟವರ್ ವ್ಯವಸ್ಥೆ, ಬೈನಾಕ್ಯೂಲರ್ ವ್ಯವಸ್ಥೆ, ಕೆರೆಯನ್ನು ಸ್ವಚ್ಚವಾಗಿರಿಸಿಕೊಳ್ಳಲು ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಚತೆಗೆ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದ್ದು ನೋಡಿದರೆ ಈ ಪಕ್ಷಿಧಾಮ ನಿಜವಾಗಲೂ ನಮ್ಮ ಉತ್ತರ ಕರ್ನಾಟಕದ ಒಂದು ಹೆಮ್ಮೆಯ ಪಕ್ಷಿಧಾಮವೆಂದರೆ ಸಾಲದು. ಒಟ್ಟಾರೆ ಇಲ್ಲಿಗೆ ಬೆಂಗಳೂರು, ಮೈಸೂರು, ಬಾಗಲಕೋಟೆ ಹಾಗೂ ರಾಜ್ಯದ ಹಲವಾರು ದೂರದ ಜಿಲ್ಲೆಗಳಿಂದ ಪಕ್ಷಿಪ್ರಿಯರು ನಮ್ಮ ಕೆರೆಗೆ ಬರುತ್ತಿರುವುದು ನಮ್ಮ ತಾಲೂಕಿನ ಪುಣ್ಯವಾಗಿದೆ.