ಇಂಡಿ ತಾಲೂಕಿನಾದ್ಯಂತ ಸುವ್ಯವಸ್ಥಿತವಾಗಿ ದ್ವಿತೀಯ ಪಿಯುಸಿ ಪರೀಕ್ಷೆ
ಇಂಡಿ 01: ತಾಲೂಕಿನಾದ್ಯಂತ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ -1ಶನಿವಾರ ಯಶಸ್ವಿಯಾಗಿ ನಡೆದವು. ಕಳೆದ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಆರಂಭಿಸಿದ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ದ್ವಿತೀಯ ಪಿಯುಸಿಗೂ ವಿಸ್ತರಿಸಲಾಗಿತ್ತು. ಮೊದಲ ದಿನ ಇಂದು ಕನ್ನಡ ಮತ್ತು ಅರೇಬಿಕ್ ಭಾಷೆಯ ಪರೀಕ್ಷೆಯ ನಡೆಸಲಾಯಿತು.ಅದರಂತೆ ಇಂಡಿ ತಾಲ್ಲೂಕಿನ ತಡವಲಗಾ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಸಂಗನಬಸವೇಶ್ವರ ಪದವಿ ಪೂರ್ವ ಕಾಲೇಜು ಹೀರೆರೂಗಿ -ಬೊಳೆಗಾಂವ ಪರೀಕ್ಷಾ ಕೇಂದ್ರದಲ್ಲಿ ಕೂಡಾ ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ವಿಯಾಗಿ ನಡಿಸಲಾಯಿತು.ಈ ಬಾರಿ ಬೊಳೆಗಾಂವ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 407 ವಿದ್ಯಾರ್ಥಿಗಳಲ್ಲಿ 400 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.ಅದೆ ರೀತಿ ಪರೀಕ್ಷೆ ಸುಸಜ್ಜಿತ ನಡೆಯಲು ವ್ಯವಸ್ಥೆ ಮಾಡಲಾಗಿತ್ತು.ಎಲ್ಲಾ ಕೊಣೆಯಲ್ಲಿ ಸಿಸಿ ಕ್ಯಾಮರಾ,ಕುಡಿಯು ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಪರೀಕ್ಷಾ ಕೇಂದ್ರದ ನಿಯೋಜಿತ ಅಧಿಕಾರಿ ಎಸ್ ಎಸ್ ಹನಗಂಡಿ ತಿಳಿಸಿದ್ದರು.
ಪರೀಕ್ಷಾ ಸಮಯದಲ್ಲಿ ಕೇಂದ್ರ ಸುತ್ತ 200 ಮೀಟರ್ ಅವರಿಗೆ ನಿಷದೀತ ಎಂದು ಪರಿಗಣಿಸಿ ಜೆರಾಕ್ಸ್, ಸೈಬರ್, ಕಂಪ್ಯೂಟರ್ ಕೇಂದ್ರಗಳನ್ನು ಮಚ್ಚಿಸಲಾಗಿತ್ತು. ಹಾಗೂ ಹೋರ್ತಿ ಪೋಲಿಸ್ ಠಾಣೆ ಪಿಎಸ್‌ಐ ರಾಕೇಶ್ ಬಗಲಿ ಅವರ ನೇತೃತ್ವದಲ್ಲಿ ಯಾವುದೇ ರೀತಿಯ ನಕಲು ಪೂರೈಕೆಯಾಗದಂತೆ ಪರೀಕ್ಷಾ ಕೇಂದ್ರದ ಸುತ್ತ ಸೂಕ್ತ ಪೋಲಿಸ್ ಬಂದು ಬಸ್ತ ಕೈಗೊಳ್ಳಲಾಗಿತ್ತು. ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜನೆ ಮಾಡಲಾಗಿತ್ತು.