ಕೊಪ್ಪಳ 22: ಜನೆವರಿ-2020 ರಲ್ಲಿ ನಡೆಯುವ ಆನೆಗುಂದಿ ಉತ್ಸವಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಸಮಿತಿಗಳನ್ನು ನೇಮಕ ಮಾಡಲಾಗಿದೆ. ಅದರಂತೆ ಎಲ್ಲ ಸಮಿತಿಗಳೂ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು (ನ. 21) ಆನೆಗುಂದಿ ಉತ್ಸವ-2020ರ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆನೆಗುಂದಿ ಉತ್ಸವಕ್ಕೆ ಸುಮಾರು ರೂ. 02 ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ. ಅದರಲ್ಲಿ ಸಕರ್ಾರ ರೂ. 01 ಕೋಟಿಯನ್ನು ನೀಡುತ್ತದೆ. ರೂ. 50 ಲಕ್ಷದಿಂದ ರೂ. 01 ಕೋಟಿಯವರೆಗೂ ಸಿಎಸ್ಆರ್ ಮೂಲಕ ನೀಡಲಾಗುವುದು. ಉತ್ಸವದ ವ್ಯವಸ್ಥಿತ ನಿರ್ವಹಣೆಗೆ ಸ್ವಾಗತ ಸಮಿತಿ, ಸಾಂಸ್ಕೃತಿಕ ಸಮಿತಿ, ಆಹಾರ ಸಮಿತಿ, ಕ್ರೀಡಾ ಸಮಿತಿ, ವಸತಿ ಸಮಿತಿ, ಸಾರಿಗೆ ಸಮಿತಿ, ಮೆರವಣಿಗೆ ಸಮಿತಿ, ಆರೋಗ್ಯ ಸಮಿತಿ, ಭದ್ರತಾ ಸಮಿತಿ, ಮಾಹಿತಿ ಮತ್ತು ಸಹಾಯವಾಣಿ ಹಾಗೂ ದೂರು ನಿರ್ವಹಣಾ ಸಮಿತಿ, ಪ್ರಚಾರ ಮತ್ತು ಮಾಧ್ಯಮ ಸಮಿತಿ, ಮೂಲಭೂತ ಸೌಕರ್ಯಗಳ ಸಮಿತಿ, ವಸ್ತುಪ್ರದರ್ಶನ ಸಮಿತಿ, ಸಂಘಟನಾ ಸಮಿತಿ, ವಿದ್ಯುತ್ ಸರಬರಾಜು ಸಮಿತಿ, ಆಮಂತ್ರಣ ಪತ್ರಿಕೆ ಸಮಿತಿ, ಹಣಕಾಸು ಸಮಿತಿ ಸೇರಿದಂತೆ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಸಮಿತಿಗಳನ್ನು ನೇಮಕ ಮಾಡಲಾಗಿದೆ. ಎಲ್ಲ ಸಮಿತಿಗಳಿಗೂ ಒಬ್ಬ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗುತ್ತದೆ. ಅದರಂತೆ ನಿದರ್ಿಷ್ಟ ಸಮಿತಿಗೆ ನೇಮಕ ಮಾಡುವ ಅಧಿಕಾರಿಗಳು ತಮ್ಮ ಸಮಿತಿಗೆ ಸಂಬಂಧಿಸಿದ ಎಲ್ಲ ಕಾರ್ಯಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಅಧಿಕಾರಿಗಳು ಪರಸ್ಪರ ಸಂಪರ್ಕದಲ್ಲಿದ್ದು, ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು.
ಉತ್ಸವದ ಅಂಗವಾಗಿ ವಿವಿಧ ಸ್ಪಧರ್ೆಗಳನ್ನು, ಕಾರ್ಯಕ್ರಮಗಳನ್ನು ಏರ್ಪಡಿಸುವ ಕುರಿತು ಸಂಬಂಧಿಸಿದ ಸಮಿತಿಯವರು ಸಾಧ್ಯತೆ ಹಾಗೂ ಪ್ರಸ್ತುತತೆ ಅನುಗುಣವಾಗಿ ರೂಪುರೇಷೆ ತಯಾರಿಸಬೇಕು. ಯಾವುದೇ ಸ್ಪರ್ದೇಗಳು ಆನೆಗುಂದಿಯ ಇತಿಹಾಸ, ಸಂಸ್ಕೃತಿಯನ್ನು ಬಿಂಬಿಸಬೇಕು. ಉತ್ಸವದ ಮುಖ್ಯಭಾಗವಾಗಿ ಲೋಗೋ ತಯಾರಿಸಲು ಕ್ರಮ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ತಿಳಿಸಿದರು. ಉತ್ಸವದ ಅಂಗವಾಗಿ ನಡೆಯುವ ಮೆರವಣಿಗೆಯಲ್ಲಿ ಇತರೆ ಜಿಲ್ಲೆಯ ಕಲಾತಂಡಗಳು ಭಾಗವಹಿಸುವುದರಿಂದ ಅವರ ವಸತಿ ಹಾಗೂ ಸಾರಿಗೆ ವ್ಯವಸ್ಥೆ ಕುರಿತು ಹೆಚ್ಚಿನ ಗಮನ ನೀಡಿ. ಉತ್ಸವದಲ್ಲಿ ನಡೆಯುವ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಬೇಕು. ಉಳಿದಂತೆ ಸಮಿತಿಗಳ ಅಚ್ಚುಕಟ್ಟು ಕಾರ್ಯ ನಿರ್ವಹಣೆಗೆ ಎಲ್ಲರೂ ಕ್ರಮ ವಹಿಸಿ ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಪ್ರೊಬೆಷನರಿ ಅಧಿಕಾರಿ ನೇಹಾ ಜೈನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.