ಲೋಕದರ್ಶನ ವರದಿ
ಚಿಕ್ಕೋಡಿ 01: ತಾಲೂಕಿನ ಶೀಪರ್ೇವಾಡಿ ಎಂಬ ಗ್ರಾಮದಲ್ಲಿ ನವಭಾರತ ಕಂಪನೀಯ ವತಿಯಿಂದ ಹಾಗೂ ರಾವಸಾಹೇಬ ಶಿಂಪುಕೋಡಿ ಎಂಬುವರ ತೋಟದಲ್ಲಿ ಸಾವಯುವ ಕ್ಷೇತ್ರೋತ್ಸವ ಎಲ್ಲ ಊರಿನ ರೈತನ ಸಮ್ಮುಖದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಂಪನೀಯ ಶಾಖಾಧಿಕಾರಿಯಾದ ಶಿವಲಿಂಗಪ್ಪ ಎಚ್. ಮಾತನಾಡಿ ಇಂದಿನ ದಿನಮಾನಗಳಲ್ಲಿ ರಾಸಾಯನಿಕ ಗೊಬ್ಬರಗಳ ಉಪಯೋಗ ಹೆಚ್ಚಾಗಿದ್ದು, ರಾಸಾಯನಿಕ ಗೊಬ್ಬರವನ್ನು ಉಪಯೋಗಿಸುವದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ. ಹಾಗೂ ಮನುಷ್ಯನಿಗೆ ಇನ್ನಿತರ ಜೀವಿಗಳಿಗೆ ರೋಗ ರುಜುನಗಳು ಬರುತ್ತವೆ. ಆದ್ದರಿಂದ ಎಲ್ಲಾ ರೈತ ಬಾಂಧವು ಸಾವಯವ ಮತ್ತು ಜೈವಿಕ ಗೊಬ್ಬರವನ್ನು ಉಪಯೋಗಿಸಿದರಿಂದ ಒಳ್ಳೆಯ ಆಹಾರ ಮತ್ತು ರೋಗ ರುಜುನಗಳನ್ನು ಕಡಿಮೆಗೊಳಿಸಬಹುದು ಎಂದು ಎಲ್ಲಾ ನೆರೆದ ರೈತರಿಗೆ ವಿತರಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಪ್ರಗತಿಪರ ರೈತರಾದ ಅಣ್ಣಾಸಾಹೇಬ ಶಿಂಪುಕುಡಿ ಮಾತನಾಡಿ ಎಲ್ಲಾ ರೈತರು ಸಾವಯುವ ಗೊಬ್ಬರ ಉಪಯೋಗಿಸುವದರಲ್ಲಿ ಮಣ್ಣಿನ ಫಲವತ್ತತೆ ಸುಧಾರಿಸಬಹುದು ಹಾಗೂ ಒಳ್ಳೆಯ ಇಳುವರಿ ಪಡೆಯಬಹುದು. ಆದ್ದರಿಂದ ಎಲ್ಲಾ ರೈತರು ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ ಜೈವಿಕ ಮತ್ತು ಸಾವಯವ ಗೊಬ್ಬರವನ್ನು ಉಪಯೋಗಿಸಬೇಕು ಎಂದು ಅಲ್ಲಿ ನೆರೆದ ರೈತರಿಗೆ ವಿವರಿಸಿ ಕಂಪನೀಯ ಇನ್ನೋರ್ವ ಅಧಿಕಾರಿಯಾದ ಅನೀಲ ಅಸೊದೆ ಮಾತನಾಡಿ ನವಭಾರತ ಕಂಪನೀಯ ಉತ್ಪನ್ನಗಳ ಅಲ್ಲಿ ನೆರೆದ ರೈತರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಊರಿನ ರೈತರಾದ ಬಾಬು ಶಿಂಪುಕುಡೆ, ಬಾಳು ಜಾಧವ, ನಾಗೇಶ ಹಿಂಪುಕುಡಿ, ಪ್ರಸಾದ ಪಾಟೀಲ, ಸಂಜಯ ಹಿರೋಳೆ ಪ್ರಭಾಕರ, ಹಿಂಪುಕುಡಿ, ದತ್ತಾ ವಡಗಾವೆ, ಸುಭಾಷ ಮಾನೆ, ಅನ್ನಾಸೆ ಮಗದುಮ ಹಾಗೂ ಕಂಪನೀಯ ಅಧಿಕಾರಿಯಾದ ಬಿ.ಎಚ್. ಕುದರಿ, ಶಿವಲಿಂಗಪ್ಪ ಹುಲ್ಲೂರ, ಅನಿಲ ಅಸೂದೆ ಮತ್ತು ದೇವಾನಂದ ಸೂರ್ಯವಂಶಿ ಹಾಗೂ ಊರಿನ ಎಲ್ಲಾ ರೈತ ಬಾಂಧವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೇವಾನಮದ ಸೂರ್ಯವಂಶಿ ನಡೆಸಿಕೊಟ್ಟರು.