ಇಟ್ಟಿಗೆ ತಯಾರಿಕೆ ಸಂಪೂರ್ಣವಾಗಿ ಸ್ಥಗಿತೊಳಿಸಲು ಆದೇಶ

ಲೋಕದರ್ಶನ ವರದಿ

ರಾಯಬಾಗ 05: ತಾಲೂಕಿನ ಜಲಾಲಪೂರ ಗ್ರಾಮದ ಜನವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಇಟ್ಟಂಗಿ ಭಟ್ಟಿಗೆ ದಿ.4ರಂದು ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಭೇಟಿ ನೀಡಿ, ಇಟ್ಟಿಗೆ ತಯಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತೊಳಿಸಲು ಆದೇಶ ಮಾಡಿದ್ದಾರೆ. 

ಜನಪ್ರದೇಶದಲ್ಲಿರುವ ಈ ಇಟ್ಟಂಗಿ ಭಟ್ಟಿಯಿಂದ ಸ್ಥಳೀಯರಿಗೆ ಚರ್ಮರೋಗ ಮತ್ತು ಉಸಿರಾಟದ ತೊಂದರೆಗಳಿಂದ ಬಳಲುವಂತಾಗಿದೆ. ಸುತ್ತಮುತ್ತ ಇರುವ ಬೆಳೆಗಳ ಮೇಲೆ ಬೂದಿ ಕೂಡ್ರುವದರಿಂದ ಬೆಳೆ ಸರಿಯಾಗಿ ಬರುತ್ತಿಲ್ಲ. ಕೊಳವೆ ಬಾವಿ ನೀರುಕಲುಷತಗೊಂಡಿದ್ದರಿಂದ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲವೆಂದು ಆರೋಪಿಸಿದ ಸ್ಥಳೀಯರು, ಕೂಡಲೇ ಇಟ್ಟಿಂಗಿ ಭಟ್ಟಿಯನ್ನು ಬಂದ್ ಮಾಡಿಸಬೇಕೆಂದು ತಹಶೀಲ್ದಾರರನ್ನು ಒತ್ತಾಯಿಸಿದರು.

ಪ್ರಕರಣ ಹಿನ್ನಲೆ: ತಾಲೂಕಿನ ಜಲಾಲಪೂರ ಗ್ರಾಮದಲ್ಲಿ ಕಲ್ಲಪ್ಪ ಕಾಡಾಪೂರೆ ಎಂಬುವರು ತಮ್ಮ ಜಮೀನದಲ್ಲಿ ಅನಧಿಕೃತವಾಗಿ ಇಟ್ಟಂಗಿ ಭಟ್ಟಿ ನಡೆಸುತ್ತಿದ್ದರು. ಇದು ಜನ ವಸತಿ ಪ್ರದೇಶವಾಗಿದ್ದರಿಂದ ಮತ್ತು ಸುತ್ತಮುತ್ತ ಸುಮಾರು 40 ಕುಟುಂಬಗಳು ವಾಸಿಸುತ್ತಿರುವುದರಿಂದ, ಇಟ್ಟಿಂಗಿ ಭಟ್ಟಿಯಿಂದ ಹಾರುವ ಧೂಳ ಮತ್ತು ಹೊಗೆಯಿಂದ ಇಲ್ಲಿನ ನಿವಾಸಿಗಳಿಗೆ ನೀರಿನ ಮತ್ತು ಆರೋಗ್ಯ ಸಮಸ್ಯೆ ಸೇರಿದಂತೆ ನಾನಾ ರೀತಿಯ ತೊಂದರೆ ಅನುಭವಿಸುತ್ತಿದ್ದರು.

ಇಟ್ಟಂಗಿ ಭಟ್ಟಿ ನಡೆಸುತ್ತಿದ್ದ ಮಾಲೀಕರ ವಿರುದ್ಧ ಗ್ರಾಮದ ಸಜರ್ೇರಾವ್ ಕಾಂಬಳೆ ಹಾಗೂ ಸ್ಥಳೀಯರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ, ಜಿಲ್ಲಾಧಿಕಾರಿಗಳಿಗೆ ಮತ್ತು ತಹಶೀಲ್ದಾರರವರಿಗೆ ಲಿಖಿತವಾಗಿ ಮನವಿ ಸಲ್ಲಿಸಿದ್ದರು.ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದ್ದರಿಂದ ಕಳೆದ ವಾರರಾಯಬಾಗಕಂದಾಯ ನಿರೀಕ್ಷಕರು ಮತ್ತು ಸಿಬ್ಬಂದಿ ಭೇಟಿ ನೀಡಿಇಟ್ಟಂಗಿ ಭಟ್ಟಿ ಸ್ಥಗಿತಗೊಳಿಸುವಂತೆ ತಿಳಿಸಿದ್ದರು.ಆದರೆಇದಕ್ಕೆಜಗ್ಗದಅದರ ಮಾಲೀಕ ನಿರಂತರವಾಗಿಇಟ್ಟಿಗೆತಯಾರಿಕೆ ಮಾಡುವುದನ್ನು ಮುಂದುವರೆಸಿದ್ದರು.

ದಿ.4ರಂದು ರಾಯಬಾಗ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಸ್ಥಳೀಯರ ದೂರುಗಳನ್ನು ಆಲಿಸಿ, ಅನಧಿಕೃತವಾಗಿ ನಡೆಸುತ್ತಿರುವ ಇಟ್ಟಂಗಿ ಭಟ್ಟಿಯನ್ನು ಕೂಡಲೇ ಸ್ಥಗೀತಗೊಳಿಸುವಂತೆ ಆದೇಶಿಸಿದರು. 

ಕಂದಾಯ ನಿರೀಕ್ಷಕ ಆರ್.ಎಮ್.ಡಬ್ಬಗೋಳ, ಗ್ರಾಮಲೇಕ್ಕಾಧಿಕಾರಿ ಪದ್ಮಾಚಲೇಕರ, ಸಜರ್ೇರಾವ ಕಾಂಬಳೆ, ದಿನಕರ ಪೊಕಳೆ, ಸದಾಶಿವ ಕಾಂಬಳೆ, ಮಹಾವೀರ ಕಾಂಬಳೆ, ದಯಾನಂದ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.