ಲೋಕದರ್ಶನವರದಿ
ಮಹಾಲಿಂಗಪುರ೨೬: ಗ್ರಾಹಕರನ್ನು ಮತ್ತು ಸಾಲಗಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ದರ್ಪದಿಂದ ದಬ್ಬಾಳಿಕೆ ನಡೆಸಿದ್ದನ್ನು ಖಂಡಿಸಿ ಬ್ಯಾಂಕ್ ಮ್ಯಾನೇಜರ್ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಮಂಗಳವಾರ ಮಹಾಲಿಂಗಪುರದಲ್ಲಿ ಸಂಭವಿಸಿದೆ.
ಸ್ಥಳೀಯ ಬಸವೇಶ್ವರ ವೃತ್ತದಲ್ಲಿರುವ ವಿಜಯಾ ಬ್ಯಾಂಕ್ ಮ್ಯಾನೇಜರ್ ಸುನೀಲ ಪಾಟೀಲ ಅವರ ವರ್ತನೆ ವಿರುದ್ಧ ಸಂಗಾನಟ್ಟಿಯ ರೈತರು, ಗ್ರಾಹಕರು ಸೇರಿ ಸ್ಥಳೀಯ ಪೊಲೀಸ್ ಠಾಣೆ ದೂರು ನೀಡಿದ್ದಾರೆ. ಇಂಥ ಒರಟು ಮ್ಯಾನೇಜರ್ರನ್ನು ವಿಚಾರಣೆಗೊಳಪಡಿಸಬೇಕು ಮತ್ತು ವಗರ್ಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಸಂಗಾನಟ್ಟಿ ಗ್ರಾಮದ ಪುಂಡಲೀಕ ಚನ್ನಬಸಪ್ಪ ಹುದ್ದಾರ, ಬಸಪ್ಪ ಚನ್ನಬಸಪ್ಪ ಹುದ್ದಾರ, ರಾಮಪ್ಪ ಮಹಾಲಿಂಗಪ್ಪ ಯಲ್ಲಟ್ಟಿ, ಮಾರುತಿ ರಾಮಪ್ಪ ಇಟ್ನಾಳ ಸೇರಿದಂತೆ ಹಲವರು ಈ ಬ್ಯಾಂಕ್ನಲ್ಲಿ ಕೃಷಿ ಸಾಲ ಪಡೆದಿದ್ದು, ಅವರ ಸಾಲಕ್ಕೆ ಕೆ.ಎಂ.ಅವರಾದಿ ಜಾಮೀನು ಸಹಿ ಮಾಡಿದ್ದಾರೆ. ಸಾಲ ಮರು ಪಾವತಿಗಾಗಿ ಕ್ರಮ ಕೈಗೊಳ್ಳುವಾಗ ಶಾಖಾಧಿಕಾರಿ ತಮ್ಮ ಸಿಬ್ಬಂದಿಯೊಂದಿಗೆ ಗ್ರಾಹಕರ ಮನೆಗೆ ತೆರಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ದಲ್ಲದೇ ತಮ್ಮ ದೌಲತ್ತಿನ ದರ್ಪದ ಮಾತನಾಡಿ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ನಾಲಾಯಕ್ ಸರಕಾರ?
ಈ ಬಗ್ಗೆ ಪತಯ್ರಿಕಾ ಹೇಳಿಕೆ ನೀಡುರುವ ಸಂತ್ರಸ್ತರು ಬರಗಾಲದಲ್ಲಿ ರೈತರು ಕಂಗಾಲಾಗಿ ಆತ್ಮಹತ್ಯಗೆ ಯತ್ನಿಸುತ್ತಿರುವ ಈ ದಿನಗಳಲ್ಲಿ ಸಾಲ ವಸೂಲಾತಿಗೆ ಸೌಜನ್ಯದ ಕ್ರಮ ಮರೆತು ಖಾಸಗಿ ಫೈನಾನ್ಸ್ನವರು ವಸೂಲಿ ಮಾಡಿದಂತೆ ತುಂಬಾ ಒರಟಾಗಿ, ಆಕ್ರಮಣಕಾರಿ ವರ್ತನೆ ತೋರುತ್ತಿದ್ದಾರೆ ಎಂದು ದೂರಿದರು. ಸರಕಾರ ಸಾಲ ಮನ್ನಾ ಚಿಂತನೆಯಲ್ಲಿದೆ.
ರೈತರ ಸಾಲ ಮರುಪಾವತಿಗೆ ಸಡಿಲಿಕೆ ಮತ್ತು ಗಡುವು ಇದೆ ಸಾಹೆಬ್ರೇ ಎಂದು ಮನವಿ ಮಾಡಿಕೊಂಡ ಹಿರಿಯರಿಗೂ ಏಕವಚನದಲ್ಲೇ ದಬಾಯಿಸಿದ್ದಲ್ಲೇ ಯಾವ ಸರಕಾರ? ನಾಲಾಯಕ್ ಸರಕಾರ? ಅದ್ಯಾವ್ ಸಿಎಂ ಸಾಲ ಮನ್ನಾ ಮಾಡ್ತಾರೆ? ನಾನು ವಸೂಲಿ ಮಾಡೇ ಮಾಡ್ತೀನಿ. ಎಲ್ಲಿ ಹೋಗ್ತೀರೋ ಹೋಗಿ, ನನ್ನನ್ನ ಯಾರೂ ಏನೂ ಮಾಡ್ಕೊಳ್ಳೊಕಾಗಲ್ಲ ಎಂದು ಗಜರ್ಿಸುತ್ತಾರೆ ಎಂಬ ನೇರ ಆರೋಪಗಳು ರೈತರಿಂದ ಬಂದವು.
ಪಿಂಚಣಿ ಖಾತೆ ಲಾಕ್ ಮಾಡಿದ್ದಾರೆ:
ರೈತನ ಸಾಲಕ್ಕೆ ಜಾಮೀನು ಸಹಿ ಹಾಕಿದ ಪದವಿ ಕಾಲೇಜಿನ ಪ್ರಾಧ್ಯಾಪಕರಿಗೂ ಆವಾಜ್ ಹಾಕಿ ಅತಿಶಯವಾಗಿ ವರ್ತಿಸಿದ್ದಾರೆ. ಅವರ ಬ್ಯಾಂಕ್ ಖಾತೆಯನ್ನೂ ಲಾಕ್ ಮಾಡಿದ್ದಾರೆ. ನಮ್ಮ ತಂದೆಯವರಾದ ಬಸಪ್ಪ ಚನ್ನಬಸಪ್ಪ ಹುದ್ದಾರ ನಿವೃತ್ತ ಪಿಡಬ್ಲೂಡಿ ರೂಲಲ್ ಡ್ರೈವರ್ ಆಗಿದ್ದು, ಅವರ ಪಿಂಚಣಿ ಅಕೌಂಟ್ ಕೂಡ ಲಾಕ್ ಮಾಡಿದ್ದಾರೆ.
ನೂರಾರು ಕೋಟಿ ಸಾಲ ಮಾಡಿ ದೇಶ ಬಿಟ್ಟವರನ್ನೇ ಬಿಟ್ಟ ಬ್ಯಾಂಕ್ನವರು ನಮ್ಮಂಥ ಪ್ರಾಮಾಣಿಕ ಬಡ ರೈತರ ಸಾಲ ವಸೂಲಿಗೆ ಹದ್ದು ಮೀರಿ ಧಮ್ಕಿ ಹಾಕುತ್ತಿರುವುದು ಖಂಡನೀಯ. ಇಂಥ ಶಾಖಾಧಿಕಾರಿಯನ್ನು ಕೂಡಲೇ ಠಾಣೆಗೆ ಕರೆಸಿ ವಿಚಾರಣೆ ನಡೆಸಬೇಕು ಮತ್ತು ಬೇರೆ ಕಡೆ ವಗರ್ಾವಣೆ ಮಾಡಬೇಕು.
ಈ ಬಗ್ಗೆ ಠಾಣೆಗೂ ಮತ್ತು ಎಸಿ ಕಚೇರಿಗೂ ದೂರು ನೀಡಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಹಿರಿಯರಾದ ಪರಪ್ಪ ಹುದ್ದಾರ, ನ್ಯಾಯವಾದಿ ಸುರೇಶ ಹೊಸಪೇಟಿ, ಉಮೇಶ ಮೇಟಿ, ಮುತ್ತಪ್ಪ ಉಳ್ಳಾಗಡ್ಡಿ, ರಾಜು ಸೈದಾಪೂರ, ಲಕ್ಷ್ಮಣ ಇಟ್ನಾಳ, ಬಸವರಾಜ ನಾಗನೂರ, ಮುತ್ತಪ್ಪ ಯಲ್ಲಟ್ಟಿ, ಮಾರುತಿ ಇಟ್ನಾಳ, ರಾಮಪ್ಪ ಯಲ್ಲಟ್ಟಿ, ಹಣಮಂತ ಇಟ್ನಾಳ, ಮಲ್ಲಪ್ಪ ಮಾಂಗ, ಪುಂಡಲೀಕ ಚನ್ನಬಸಪ್ಪ ಹುದ್ದಾರ, ಬಸಪ್ಪ ಚನ್ನಬಸಪ್ಪ ಹುದ್ದಾರ, ರಾಮಪ್ಪ ಮಹಾಲಿಂಗಪ್ಪ ಯಲ್ಲಟ್ಟಿ, ಮಾರುತಿ ರಾಮಪ್ಪ ಇಟ್ನಾಳ ಇದ್ದರು.