ಪ್ರತ್ಯೇಕ ಕನರ್ಾಟಕ ರಾಜ್ಯ ಹೋರಾಟಕ್ಕೆ ವಿರೋಧ, ಪ್ರತಿಭಟನೆ


ಲೋಕದರ್ಶನ ವರದಿ

ಬೆಳಗಾವಿ : ಪ್ರತ್ಯೇಕ ಕನರ್ಾಟಕ ಹೋರಾಟವನ್ನು ವಿರೋಧಿಸಿರುವ ಸಮಗ್ರ ಉತ್ತರ ಕನರ್ಾಟಕ ಅಭಿವೃದ್ದಿಗಾಗಿ ಒತ್ತಾಯಿಸಿ ಕನರ್ಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡುವದರ ಮೂಲಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿಯೊಂದನ್ನು ಸಲ್ಲಿಸಿದರು.

ಬುಧವಾರ ದಿನದಂದು ಕನರ್ಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಜಮಾವಣೆಗೊಂದು ಪ್ರತಿಭಟನೆ ನಡೆಸಿದರು. ಬಳಿಕ ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳಿ ಕಚೇರಿಗೆ ಆಗಮಿಸಿದ ಕಾರ್ಯಕರ್ತರು ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸಕರ್ಾರಕ್ಕೆ ಮನವಿಯೊಂದನ್ನು ಸಲ್ಲಿಸಿ, ಉತ್ತರ ಕನರ್ಾಟಕದ ಜಿಲ್ಲೆಗಳಿಗೆ ಮೊಸವಾಗುತ್ತಲೇ ಬಂದಿದೆ. ಹಾಗೂ ಅಭಿವೃದ್ದಿ ವಿಷಯದಲ್ಲಾಗಲಿ, ಅನುದಾನ ಕೊಡುವದಾಗಿರಲಿ, ಯೋಜನೆಗಳನ್ನು ಜಾರಿಗೆ ಗೊಳಿಸುದಾಗಿರಲಿ ಇನ್ನುಳಿದ ರಾಜ್ಯಗಳಲ್ಲಿನ ಜಿಲ್ಲೆಗೆ ಹೊಲಿಸಿದಾಗ ಉತ್ತರ ಕನರ್ಾಟಕ ಜಿಲ್ಲೆಗಳಿಗೆೆ ಅನ್ಯಾಯವಾಗುತ್ತಿದೆ ಎಂದು ಹೇಳಿರುವ ಕಾರ್ಯಕರ್ತರು ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಬೆಂಬಲವಿಲ್ಲ ಅದರ ಬದಲಾಗಿ ಸಮಗ್ರ ಉತ್ತರ ಕನರ್ಾಟಕದ ಅಭಿವೃದ್ದ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ರಾಜ್ಯ ಸಕರ್ಾರದ ಕಿವಿ ಹಿಂಡುವ ಮೂಲಕ ಹಾಗೂ ಉತ್ತರ ಕನರ್ಾಟಕದಿಂದ ಚುನಾಯಿತರಾದ ಜನಪ್ರತಿನಿಧಿಗಳಿಗೆ ಒತ್ತಾಯಪಡಿಸುವ ಮೂಲಕ ಉತ್ತರ ಕನರ್ಾಟಕದ ಜಿಲ್ಲೆಗಳಿಗಳಲ್ಲಿ ನೆನೆಗುದಿ ಬಿದ್ದಿರುವ ಎಲ್ಲ ಯೋಜನೆಗಳನ್ನು ಜಾರಿಗೆ  ತರಬೇಕು. ಈ ನಿಟ್ಟಿನಲ್ಲಿ ನ್ಯಾಯಯುತವಾದ ಹೋರಾಟಗಳನ್ನು ಉತ್ತರ ಕನರ್ಾಟದ ಜನತೆ ಒಗ್ಗಟ್ಟಿನಿಂದ ಮಾಡುವದರ ಮೂಲಕ ಕೇಂದ್ರ ಸರಕಾರದ ಗಮನವನ್ನು ಸೆಳೆಯಬಹುದು ಎಂದು ಹೇಳಿದರು.

ಪ್ರತ್ಯೇಕ ರಾಜ್ಯದ ಹೋರಾಟವನ್ನು ಅಲ್ಲಗಳಿಯುತ್ತ ಹಾಗೂ ಕನರ್ಾಟಕದ ಏಕೀಕರಣಕ್ಕೆ ಧಾರವಾಡ, ಬೆಳಗಾವಿ ಚಿಂತಕರು, ಸಾಹಿತಿಗಳು, ವಾಗ್ಮಿರಿಗಳು ಜೊತೆಗೆ ಪ್ರಜ್ಞಾವಂತ ಜನತೆ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸುತ್ತಾ ಕನರ್ಾಟಕ ಸ್ವಾಭಿಮಾನಿ ಬಣ ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳ ಮೆಲೆ ಪ್ರಭಾವ ಬೀರುವ ನ್ಯಾಯಯುತ ಹೋರಾಟಗಳನ್ನು ರಾಜ್ಯಾದ್ಯಕ್ಷರಾದ ಪಿ, ಕೃಷ್ಣೇಗೌಡರ ನೆತೃತ್ವದಲ್ಲಿ ಮಾಡುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.