ವಿರೋಧಪಕ್ಷ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ: ಸಿ ಎಸ್ ನಾಡಗೌಡ

Opposition is working to misguide people: CS Nad Gowda
ಮುದ್ದೇಬಿಹಾಳ 02: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಸರಕಾರ ಐದು ಬಹುಮುಖ್ಯ ಅತ್ಯವಶ್ಯಕವಿರುವ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಉತ್ತಮ ಜನಪರ ಆಡಳಿತ ನಡೆಸುತ್ತಿರುವುದನ್ನು ವಿರೋಧಪಕ್ಷದವರಿಗೆ ಸಹಿಸಿಕೊಳ್ಳಲು ಸಾಧ್ಯವಾಗದೇ ಸರಕಾರದ ಬಗ್ಗೆ ಇಲ್ಲಸಲ್ಲದ ಆರೋಪಿಸುತ್ತಲೇ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಕಾರಣ ಇಂತಹ ಸುಳ್ಳು ಟೀಕೆಗಳಿಗೆ ಕಿವಿಗೊಡದೇ ಜನರು ಜಾಗೃತರಾಗಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು. ತಾಲೂಕಿನ ಮೂದೂರ, ಯರಝರಿ, ಬಳಬಟ್ಟಿ, ಹಂಡರಗಲ್ಲ, ನಾಗರಾಳ, ಚಿರ್ಚನಕಲ್ಲ, ಕಂದಗನೂರ, ಗ್ರಾಮಗಳಲ್ಲಿ ಶನಿವಾರ ನಡೆದ ಗ್ರಾಮ ಸಭೆ ಯಲ್ಲಿ ಆಯಾ ಗ್ರಾಮಗಳ ಜನರ ಕುದುಕೊರತೆ ಆಲಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಈ ಹಿಂದಿನ ಸರಕಾರ ಚುನಾವಣೆ ಸಮೀಸುತ್ತಿದೆ ಎಂಬುದನ್ನು ಗಮನಿಸಿ ಸರಕಾರದ ಖಜಾನೆಯಲ್ಲಿ ಹಣವಿಲ್ಲದೇ ಹೆಚ್ಚುವರಿ ಆದೇಶ ಮಾಡಿ ಸುಮ್ಮ ಸುಮ್ನೇ ಆ ಕೇಲಸ ಈ ಕೆಲಸ ಎಂದು ಸಂಪೂರ್ಣ ಖಜಾನೆಯನ್ನೇ ಖಾಲಿ ಮಾಡಿದ್ದಾರೆ. ನಮ್ಮ ಸರಕಾರ ಬಂದಮೇಲೆ ಚುನಾವಣೆಯಲ್ಲಿ ಘೋಷಿಸಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಾವಿರಾರು ಕೋಟಿ ಜನರ ಒಳಿತಕ್ಕಾಗಿ ಸಾಮಾಜಿಕ ನ್ಯಾಯದಡಿಯಲ್ಲಿ ಖರ್ಚು ಮಾಡಲಾಗುತ್ತಿದೆ. ಈ ನಿಟ್ಟಿನಿಲ್ಲಿ ರಾಜ್ಯದ ಎಲ್ಲ ಮತಕ್ಷೇತ್ರಲ್ಲಿ ಸ್ವಲ್ಪ ಹಣಕಾಸಿನ ತೊಂದರೆಯಾಗಿರುವುದು ನಿಜ ಆದರೇ ಅಭಿವೃದ್ಧಿ ಆಗುತ್ತಿಲ್ಲ ಎಂಬ ಹೇಳಕೆ ಸುಳ್ಳು, ಎಲ್ಲೇಲ್ಲಿ ಯಾವ್ಯಾವ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿತ್ತೋ ಅಲ್ಲಲ್ಲಿ ನಡೆಯುತ್ತಲೆ ಇವೇ ಅಭಿವೃದ್ಧಿಯ ವಿಷಯದಲ್ಲಿ ಹಿಂದೇ ಬೀಳುವ ಸರಕಾರ ನಮ್ಮದಲ್ಲ. ಈ ಬಾರಿ ಮತಕ್ಷೇತ್ರದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಬಿತ್ತನೆ ಮಾಡಿಕೊಂಡಿದ್ದಾರೆ. ಈ ವೇಳೆ ರೈತರಿಗೆ ಸಮರ​‍್ಕ ಬೀಜ, ಗೊಬ್ಬರ ಹೀಗೆ ಇತ್ಯಾದಿ ರೈತರಿಗೆ ಅನುಕೂಲವಾಗುವ ಕೃಷಿ ಆದಾರಿತ ಚಟುವಟಿಕೆಗಳಿಗೆ ಯಾವೂದೇ ತೊಂದರೆಯಾಗದಂತೆ ನೋಡಿಕೊಂಡಿದೆ. ಅದರಲ್ಲೂ ತೋಟಗಾರಿಕೆ ಇಲಾಖೆಯಿಂದ ಈ ಹಿಂದಿನ ಸರಕಾರ ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಶೇಕಡಾ 75 ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು ಆದರೇ ನಮ್ಮ ಸರಕಾರದ ಅವಧಿಯಲ್ಲಿ ಶೇಕಡಾ 90 ರಷ್ಟು ಸಬ್ಸಿಡಿ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ತಾಲೂಕಾ ಮಟ್ಟದ ಅಧಿಕಾರಿಗಳು ಗ್ರಾಮೀಣ ಜನರ ಕುಂದುಕೊರತೆ ಆಲಿಸುವುದರೊಂದಿಗೆ ಸರಕಾರದ ಸೌಲಭ್ಯಗಳನ್ನು ನಿಗದಿತ ಸಮಯದೊಳಗೆ ಸಮರ​‍್ಕವಾಗಿ ತಲುಪಿಸುವಂತೆ ಮಾಡಬೇಕು. ಸಾರ್ವಜನಿಕರಿಗೆ ಪದೆ ಪದೆ ಕಚೇರಿಗಳಿಗೆ ಅಲೇದಾಡಿದಂತೆ ನೋಡಿಕೊಳ್ಳಬೇಕು ಸರಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮಾದರಿಯ ಮತಕ್ಷೇತ್ರ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಅಧಿಕಾರಿಗಳಿಗೆ ಸಲಹೇ ನೀಡಿದರು. ತಾಂತ್ರಿಕ ತೊಂದರೆಯಿಂದ ಅರ್ಧಕ್ಕೆ ನಿಂತ ಚಿಮ್ಮಲಗಿ ಏತ ನಿರಾವರಿ ಯೋಜನೆ ಸಂಪೂರ್ಣ ಗೊಳಿಸಲು ಮತ್ತು ಜನಸಾಮಾನ್ಯರ ಸಂಚಾರಕ್ಕೆ ತೀವೃ ತೊಂದರೆ ಇರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ನಮ್ಮ ಸರಕಾರ ತಿರ್ಮಾನಿಸಿದೆ ಮುಂಬರುವ ಅಧಿವೇಶನದ ನಂತರ ಮತಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗಾಗಿ ಸರಕಾರದಿಂದ ಮತಕ್ಷೇತ್ರಕ್ಕೆ ಸಾಕಷ್ಟು ಹರಿದು ಬರಲಿದೆ. ಈ ವೇಳೆ ಶಾಲಾ ಮಕ್ಕಳಿಗೆ ಮೊಟ್ಟೆ, ಹಾಗೂ ಮದ್ಯಾಹ್ನದ ಬಿಸಿಯೂಟ ಸರಿಯಾಗಿ ನೀಡುವ ಮೂಲಕ ಅಪೌಷ್ಠಿಕತೆಯಿಂದ ಬಳಲದಂತೆ ನೋಡಿಕೊಳ್ಳಬೇಕು. ಎಂದರು ನದೀ ತೀರದ ಬಹುತೇಕ ಗ್ರಾಮಗಳ ಜಮೀನುಗಳು ಸವಳು ಜವಳುಗೊಂಡು ರೈತರು ಸಂಕಷ್ಟದಲ್ಲಿದ್ದಾರೆ ಎಂಬದುನ್ನು ಸರಕಾರಕ್ಕೆ ತಿಳಿಸಲಾಗಿದೆ ನಮ್ಮ ಸರಕಾರವೂ ಸಹ ಇಂತಹ ಸವಳು ಜವಳು ಭೂಮಿಗಳನ್ನು ಅಭಿವೃದ್ಧಿ ಪಡಿಸಲು ಚಿಂತನೆ ನಡೆಸುತ್ತಿದೆ ಆದರೂ ಸಹಿತ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯುತ್ತೇನೆ ಎಂದರು. ಈ ವೇಳೆ ಈ ಗಾಗಲೇ ಮತಕ್ಷೇತ್ರದಲ್ಲಿನ ಸುಮಾರು 57 ಹೊಸ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಇಲಾಖೆ ತಿರ್ಮಾನಿಸಿದೆ ಜೊತೆಗೆ ಇನ್ನು ತೀರಾ ತೊಂದರೆ ಇರುವ ಅಂಗನವಾಡಿ ಕೇಂದ್ರದ ಕೋಠಡಿಯಿಲ್ಲದೆ ತೊಂದರೆ ಅನುಭವಿಸುತ್ತಿರುವ ಕೇಂದ್ರಗಳ ಬಗ್ಗೆ ಮಾಹಿತಿ ಪಡೆದು ಹೆಚ್ಚವರಿಯಾಗಿ ಅಂಹತವ ಅಂಗನವಾಡಿ ಕೇಂದ್ರಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದು ಸಿಡಿಪಿಓ ಶಿವಮೂರ್ತಿ ಕುಂಬಾರ ಹೇಳಿದರು. ಗ್ರಾಮೀಣ ಭಾಗದ ಜನರ ಆರೋಗ್ಯ ಸಮಸ್ಯೆಗೆ ತಾಲೂಕಾ ಆರೋಗ್ಯ ಇಲಾಖೆ ಸದಾ ಸಿದ್ದವಿದೇ ಆದರೇ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿಕೊಳ್ಳಬೇಕು ಬಿಪಿ ಹಾಗೂ ಶುಗರ್ ಇರುವವರು ಜಾಗೃತಿಯಿಂದ ಇರಬೇಕು ಸಮಯಕ್ಕೆ ತಕ್ಕಂತೆ ಚಿಕತ್ಸೆ ಪಡೆದುಕೊಳ್ಳಬೇಕು ಸಧ್ಯ ಆಯುಷ್ಯ್ಮಾಭಾರತ ಆರೋಗ್ಯ ಕರ್ನಾಟಕ ಮುಖ್ಯಮಂತ್ರಿ ಯೋಜನೆಯಡಿಯಲ್ಲಿ 5 ಲಕ್ಷರೂಗಳವರಿಗೆ ಹೃದಯ ರೋಗ ಚಿಕಿತ್ಸೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ತಾಲೂಕಾ ಆರೊಗ್ಯಾಧಿಕಾರಿ ಸತೀಶ ತಿವಾರಿ ಹೇಳಿದರು. ಈ ವೇಳೆ ತಾಲೂಕಾ ಕೃಷಿ ಇಲಾಖೆ ಅಧಿಕಾರಿ ಸುರೇಶ ಭಾವಿಕಟ್ಟಿ, ಕೃಷಿ ಅಧಿಕಾರಿ ಅರವಿಂದ ಹೂಗಾರ,ತಾಲೂಕಾ ಪಂಚಾಯಿತಿ ಖೂಬಾಸಿಂಗ್ ಚವ್ಹಾಣ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಪಿ ಎಲ್ ಡಿ ಬ್ಯಾಂಕಿ ಅಧ್ಯಕ್ಷ ಬಿ ಕೆ ಬಿರಾದಾರ, ಬಸವರಾಜ ಚಲವಾದಿ, ಮುತ್ತಪ್ಪ ಚಲವಾದಿ, ಶಿವಪ್ಪ ಚಲವಾದಿ, ಮುದುಕಪ್ಪ ಚಲವಾದಿ, ಚಂದ್ರಕಾಂತ ಚಲವಾದಿ, ಬಸವರಾಜ ಪವಾಡೆಪ್ಪ ಚಲವಾದಿ, ಪಕೀರ​‍್ಪ ಚಲವಾದಿ, ಮಹಾಂತೇಶ ಹೆಬ್ಬಾಳ, ಶಿವಲಿಂಗಪ್ಪ ಮೂರಾಳ. ಶರೀಪಸಾಬ ದೊಡಮನಿ, ಬಿಯಪ್ಪ ಗಂಗೂರ, ಹಣಮಂತ ಗಂಗೂರ ಸೇರಿದಂತೆ ಹಲವರು ಇದ್ದರು.