ಬೆಂಗಳೂರು 26: ಬಿಜೆಪಿಯ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸದಾಶಿವನಗರದ ನಿವಾಸವಿಂದು ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು.
ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಕರ್ಾರಕ್ಕೆ ತಲೆನೋವಾಗಿ ಪರಿಣಮಿಸಿರುವ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅವರ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿರುವ ಬೆನ್ನಲ್ಲೇ ರಾಜ್ಯದ ಮೈತ್ರಿ ಸಕರ್ಾರ ಅಸ್ಥಿರದ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ನಿಂದ ಈಗಾಗಲೇ ಕಾಲನ್ನು ಹೊರಗಿಟ್ಟಿರುವ ರಮೇಶ್ ಜಾರಕಿಹೊಳಿ, ಮತ್ತೊಬ್ಬ ಬಂಡಾಯ ಶಾಸಕ ಸುಧಾಕರ್ ಜೊತೆಗೂಡಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ನಡೆಸಿದರು.
ಇದಕ್ಕೂ ಮೊದಲು ಬೆಂಗಳೂರಿನ ಅಜ್ಞಾತ ಸ್ಥಳವೊಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ರಮೇಶ್ ಜಾರಕಿಹೊಳಿ ಭೇಟಿ ಆಗಿದ್ದರು ಎನ್ನಲಾಗಿದೆ. ಮಂಡ್ಯದ ಚುನಾಯಿತ ಸಂಸದೆ ಸುಮಲತಾ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಆರ್.ಅಶೋಕ್ ಎಸ್.ಎಂ.ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದು. ಇದೇ ವೇಳೆ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಸುಧಾಕರ್ ಜೊತೆ ಕೃಷ್ಣ ?ನಿವಾಸದಲ್ಲಿ ಕಾಣಿಸಿಕೊಂಡು ಕುತೂಹಲ ಕೆರಳುವಂತೆ ಮಾಡಿದರು.
ಸುಮಲತಾ, ಎಸ್.ಎಂ.ಕೃಷ್ಣ ಭೇಟಿ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರ್.ಅಶೋಕ್, ಗೋವಿಂದ್ ಕಾರಜೋಳ ಸಹ ಕೃಷ್ಣ ಭೇಟಿ ನಡೆಸಿ ಸುಮಾರು 2 ತಾಸುಗಳಿಗೂ ಹೆಚ್ಚು ಕಾಲ ಮಹತ್ವದ ಚಚರ್ೆ ನಡೆಸಿ ಬಳಿಕ ಅಲ್ಲಿಂದ ತೆರಳಿದರೂ, ಎಸ್.ಎಂ.ಕೆ ನಿವಾಸದಲ್ಲಿ ರಮೇಶ್ ಜಾರಕಿಹೊಳಿ, ಆರ್.ಸುಧಾಕರ್ ತಮ್ಮ ಮಾತುಕತೆ ಮುಂದುವರೆಸಿದರು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸದ್ಯಕ್ಕೆ ತಾವು ಏಕಾಂಗಿ. ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ಶಾಸಕ ಸ್ಥಾನಕ್ಕೆ ಯಾವಾಗ ರಾಜೀನಾಮೆ ಕೊಡುತ್ತೇನೆಂದು ಈಗಲೇ ಹೇಳುವುದಿಲ್ಲ. ರಾಜೀನಾಮೆ ನೀಡುವುದಾದರೆ ಮಾಧ್ಯಮಗಳಿಗೆ ತಿಳಿಸಿಯೇ ನೀಡುತ್ತೇನೆ. ಮಾಧ್ಯಮಗಳು ಕುಟುಕು ಕಾಯರ್ಾಚರಣೆ ನಡೆಸುವ ಮುನ್ನ ಯಾರಿಗೂ ಹೇಳುವುದಿಲ್ಲ ಅದರಂತೆ ನಾನು ಕೂಡ ನನ್ನೊಂದಿಗೆ ಯಾವ ಶಾಸಕರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ನನ್ನೊಂದಿಗೆ ಎಷ್ಟು ಜನ ರಾಜೀನಾಮೆ ಕೊಡುತ್ತಾರೆ ಎನ್ನುವುದನ್ನು ಈಗಲೇ ಹೇಳಲು ಆಗುವುದಿಲ್ಲ. ನನ್ನೊಂದಿಗೆ ರಾಜೀನಾಮೆ ಕೊಡಲು ತಂಡವೊಂದಿದೆ. ತಂಡೋಪತಂಡವಾಗಿ ರಾಜೀನಾಮೆ ಕೊಡುತ್ತೇವೆ. ಅದು ಯಾವಾಗ ಎಂದು ಈಗಲೇ ಹೇಳುವುದಿಲ್ಲ ಎಂದು ನಿಗೂಢವಾಗಿ ಉತ್ತರಿಸಿದರು.
ರಮೇಶ್ ಜಾರಕಿಹೊಳಿ ಜೊತೆಗೆ ಯಾರೂ ಇಲ್ಲ. ಅವನೊಬ್ಬ ಏಕಾಂಗಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, "ನಾನು ಏಕಾಂಗಿ ಎಂದರೆ ಏಕಾಂಗಿ, ಟೀಮ್ ಎಂದರೆ ಟೀಮ್ ಎಂದು ಸೂಚ್ಯವಾಗಿ ಅವರು ತಿಳಿಸಿದರು.
ಎಸ್.ಎಂ.ಕೃಷ್ಣ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಸ್.ಎಂ.ಕೃಷ್ಣ ನಮ್ಮ ನಾಯಕರು. ರಾಜಕೀಯದಲ್ಲಿ ಹಿರಿಯರಾಗಿರುವ ಕಾರಣ ಅವರ ಯೋಗಕ್ಷೇಮ ವಿಚಾರಿಸಲು ಬಂದಿದ್ದೇನೆ. ರಾಜಕೀಯ ಕುರಿತು ಅವರ ಜೊತೆ ಯಾವುದೇ ಚಚರ್ೆ ನಡೆಸಿಲ್ಲ ಎಂದು ಹೇಳಿದರಾದರೂ ಯಡಿಯೂರಪ್ಪ ಹಾಗೂ ಆರ್.ಅಶೋಕ್ ಜೊತೆಗೆ ನಡೆದ ಚಚರ್ೆಯನ್ನು ಬಹಿರಂಗಪಡಿಸಲು ಅವರು ಮುಂದಾಗಲಿಲ್ಲ.
ಸುಧಾಕರ್ ಮಾತನಾಡಿ, ಬಿಜೆಪಿಯಲ್ಲಿದ್ದರೂ ಕೃಷ್ಣ ಅವರದ್ದು ಆದರ್ಶ ವ್ಯಕ್ತಿತ್ವ. ತಂದೆಯ ಸಮಾನರು ರಾಜಕೀಯದಲ್ಲಿ ಗುರುಗಳು ಆಗಿರುವ ಅವರ ಆರೋಗ್ಯ ವಿಚಾರಿಸಲು ಆಗಮಿಸಿದ್ದೇನೆ. ಇದು ನನ್ನ ವೈಯಕ್ತಿಕ ಭೇಟಿ. ರಮೇಶ್ ಜಾರಕಿಹೊಳಿ ನಮ್ಮ ಮನೆಗೆ ಬಂದಂತಹ ಸಂದರ್ಭದಲ್ಲಿ ಕೃಷ್ಣ ಭೇಟಿ ಬಗ್ಗೆ ಪ್ರಸ್ತಾಪಿಸಿದ್ದರು. ಹೀಗಾಗಿ ನಾನು ವೈಯಕ್ತಿಕವಾಗಿ ಅವರ ಭೇಟಿಗೆ ಆಗಮಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಯಡಿಯೂರಪ್ಪ ಅವರ ಜೊತೆಗಾಗಲೀ, ಕೃಷ್ಣ ಅವರ ಜೊತೆಗಾಗಲಿ ಬಿಜೆಪಿ ಸೇರ್ಪಡೆ ಬಗ್ಗೆ ಚಚರ್ೆ ನಡೆಸಿಲ್ಲ. ನಾವು ರಾಜಕೀಯ ಚಚರ್ೆ ಮಾಡಿಲ್ಲ. ಮಾಧ್ಯಮದವರು ನಮ್ಮ ಭೇಟಿಯನ್ನು ಯಾವುದೇ ರೀತಿಯಲ್ಲಿ ಬೇಕಾದರೂ ವಿಶ್ಲೇಷಿಸಬಹುದು. ಸ್ವಲ್ಪ ಕಾದು ನೋಡಿ ಎಂದು ಸುಧಾಕರ್ ಒಗಟಾಗಿ ಹೇಳಿದರು.
ಯಡಿಯೂರಪ್ಪ ಮಾತನಾಡಿ, ಸಕರ್ಾರವನ್ನು ಅಸ್ಥಿರಗೊಳಿಸಲು ಆಪರೇಷನ್ ಕಮಲ ನಡೆಯುತ್ತಿಲ್ಲ. ರಮೇಶ್ ಜಾರಕಿಹೊಳಿ ಹಾಗೂ ಸುಧಾಕರ್ ಕೃಷ್ಣ ಅವರ ಅಭಿಮಾನಿಗಳು. ಹೀಗಾಗಿ ಕೃಷ್ಣ ಅವರ ಭೇಟಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಭೇಟಿ ಕಾಕತಾಳೀಯವೇ ಹೊರತು ಇದರಲ್ಲಿ ಯಾವುದೇ ತಂತ್ರವಿಲ್ಲ. ರಮೇಶ್ ನಮ್ಮೊಂದಿಗೆ ಮಾತನಾಡಿಲ್ಲ ಎಂದರು. ಪಕ್ಷದ ವಿಚಾರವಾಗಿ ಚಚರ್ಿಸಲು ಕೃಷ್ಣ ಅವರನ್ನು ಭೇಟಿಯಾಗಿದ್ದೇವೆ. ರಮೇಶ್ ಜಾರಕಿಹೊಳಿ, ಸುಧಾಕರ್ ಅವರಿಗಾಗಲೀ ನನಗಾಗಿ ಯಾವುದೇ ಸಂಪರ್ಕವಿಲ್ಲ. ಕೃಷ್ಣ ಭೇಟಿಗೆ ಅವರು ಬಂದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಆರ್.ಅಶೋಕ್ ಸ್ಪಷ್ಟಪಡಿಸಿದರು. ಒಟ್ಟಾರೆ ಎಸ್.ಎಂ.ಕೃಷ್ಣ ಅವರ ನಿವಾಸದಲ್ಲಿ ರೆಬೆಲ್ ಶಾಸಕರು ಬಿಜೆಪಿ ನಾಯಕರ ಜೊತೆಗೆ ಕಾಣಿಸಿಕೊಂಡಿರುವುದು ಮೈತ್ರಿ ನಾಯಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸುಮಲತಾ ಜೊತೆ ಬಂಡಾಯ ಶಾಸಕರು ಸಹ ಬಿಜೆಪಿ ಸೇರ್ಪಡೆ ವಿಚಾರ ಕುರಿತು ಬಿಜೆಪಿ ನಾಯಕರ ಜೊತೆ ಚಚರ್ಿಸಿದ್ದಾರೆ ಎನ್ನಲಾಗಿದೆಯಾದರೂ ರೆಬೆಲ್ ನಾಯಕರು ತಮ್ಮ ಭೇಟಿಯ ಗುಟ್ಟನ್ನು ಮಾತ್ರ ಬಿಟ್ಟುಕೊಡದಿರುವುದು ರಾಜ್ಯ ರಾಜಕೀಯದಲ್ಲಿ ಹಲವು ಚಚರ್ೆಗೆ ಎಡೆಮಾಡಿಕೊಟ್ಟಿದೆ.