ಬೆಂಗಳೂರು 07: ಬಿಜೆಪಿಯವರು ನಮ್ಮ ಪಕ್ಷದ ಶಾಸಕರನ್ನು ಸೆಳೆಯುವ ಪ್ರಯತ್ನ ಮುಂದುವರಿಸಿದ್ದು, ಯಾರು ಆ ಕಾರ್ಯ ಮಾಡುತ್ತಿದ್ದಾರೆ ಎಂದು ಬಹಿರಂಗ ಪಡಿಸುವುದಾಗಿ ಸಚಿವ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾರು ಯಾರು ಯಾರ ಯಾರ ಹತ್ತಿರ ಮಾತಾಡಿದ್ದಾರೆ. ಏನೇನು ಮಾತನಾಡಿದ್ದಾರೆ ಎನ್ನುವುದು ಗೊತ್ತು. ಬಿಜೆಪಿಯ 5 ಮಂದಿಗೆ ಬೇರೆ ಕೆಲಸವೇ ಇಲ್ಲ. ಅವರು ನಮ್ಮ ಪಕ್ಷದವರನ್ನು ಟಚ್ ಮಾಡಿ ಮಾತುಕತೆ ಆಡುತ್ತಿದ್ದಾರೆ,ಆಮಿಷ ಒಡ್ಡಿದ್ದಾರೆ ಎಂದರು.
ಯಾರ ಹತ್ತಿರ ಮಾತನಾಡಿದ್ದಾರೆ ಎನ್ನುವುದನ್ನು ಈಗ ಹೇಳುವುದಿಲ್ಲ ಸೂಕ್ತ ಕಾಲ ಬಂದಾಗ ಮಾತನಾಡಿದವರ ಮೂಲಕವೇ ಬಹಿರಂಗ ಪಡಿಸುವುದಾಗಿ ತಿಳಿಸಿದರು. ಪೋಟೊ 3