ವಿವಿಧ ದೇವಸ್ಥಾನಗಳ ಉದ್ಘಾಟನೆ

ಲೋಕದರ್ಶನವರದಿ

ಬ್ಯಾಡಗಿ09: ಧಾರ್ಮಿಕ  ಕಾರ್ಯಕ್ರಮಗಳು ಮಾನವನ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತರುವ ಸತ್ಕಾರ್ಯಗಳಾಗಿವೆ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ಪಟ್ಟಣದ ಶಬರಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಅಯ್ಯಪ್ಪ ಸ್ವಾಮಿ, ವರಸಿದ್ಧಿ ವಿನಾಯಕ ಹಾಗೂ ಅನ್ನಪೂಣರ್ೆಶ್ವರಿ ದೇವಿ ದೇವಸ್ಥಾನಗಳ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣವನ್ನು   ನೆರವೇರಿಸಿ ಮಾತನಾಡಿದ ಅವರು ದೈವದ ಹೆಸರಿನಲ್ಲಿ ಯಾವುದೇ ಅಧರ್ಮದ ಕೆಲಸಕ್ಕೆ ಮುಂದಾಗದೆ ಧರ್ಮ ಕಾರ್ಯಗಳನ್ನು ಗೌರವಿಸಿ ಅನುಸರಿಸಬೇಕಲ್ಲದೆ  ಪ್ರತಿಯೊಬ್ಬರೂ ಧರ್ಮ ಜಾಗೃತಿಗೆ ಮುಂದಾಗಬೇಕಿದೆ ಎಂದು ತಿಳಿಸಿದರು. 

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ನೆಗಳೂರಿನ ಷ. ಬ್ರ. ಗುರು ಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಧರ್ಮದ ದಾರಿಯಲ್ಲಿ ನಡೆಯುವ ಪ್ರತಿಯೊಬ್ಬರಿಗೂ ದೇವರ ಶ್ರೀರಕ್ಷೆ ಸದಾ ಇರುತ್ತದೆ. ಜೊತೆಗೆ ಅವರ ಜೀವನವೂ ಪ್ರಶಂತಾಮಯವಾಗಿ ಸಾಗುತ್ತದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಮುಪ್ಪಿನಸ್ವಾಮಿ ಮಠದ ಚೆನ್ನಮಲ್ಲಿಕಾಜರ್ುನಸ್ವಾಮಿ, ಅಂಕಸಾಪೂರದ ಈಶ್ವರಾನಂದಸ್ವಾಮಿ, ಹಾಗೂ ರಾಚಯ್ಯ ಶಾಸ್ತ್ರಿ, ಧರ್ಮದಶರ್ಿ ಮಂಜುನಾಥ ಮಣೆಗಾರ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಸುರೇಶಗೌಡ್ರ ಪಾಟೀಲ, ಬಸವರಾಜ ಶಿವಣ್ಣನವರ, ಸಂಜೀವ ನೀರಲಗಿ, ಆರ್ ನಾಗರಾಜ, ಜಯದೇವ ಶಿರೂರು, ರಾಜು ಮೋರಗೇರಿ, ಸುರೇಶ ಪಾಟೀಲ, ಬಸಣ್ಣ ಕಡೇಕೊಪ್ಪ, ಟಿ. ಮಂಜಣ್ಣ, ಎಸ್.ಎಸ್. ಹಿರೇಮಠ, ಸುರೇಶ ಡಂಬಳ, ಪರಶುರಾಮ ಉಜನಿಕೊಪ್ಪ ಉಪಸ್ಥಿತರಿದ್ದರು.