ಲೋಕದರ್ಶನ ವರದಿ
ಬೈಲಹೊಂಗಲ 19: ಸಧೃಢ ಆರೋಗ್ಯಭರಿತ ದೇಶ ನಿರ್ಮಾಣಕ್ಕಾಗಿ ಐದು ವರ್ಷದ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಿಸುವದು ಪಾಲಕರ ಆದ್ಯ ಕರ್ತವ್ಯವಾಗಿರುತ್ತದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ರವಿವಾರ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಮಗುವಿಗೆ ಲಸಿಕೆ ಹಾಕುವದರ ಮೂಲಕ ಪಲ್ಸ್ ಪೋಲಿಯೋ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ, ಪೊಲಿಯೋ ಮುಕ್ತ ರಾಷ್ರ ನಿರ್ಮಾಣ ಮಾಡಲು ಪ್ರತಿಯೊಬ್ಬರು ಪಣ ತೊಡಬೇಕು ಎಂದರು.
ರಾಜಯೋಗಿಣಿ ಬ್ರಹ್ಮಾಕುಮಾರಿ ಪ್ರಭಾ ಅಕ್ಕನವರು ಮಾತನಾಡಿ, ಜಗತ್ತು ಒಂದು ಕಾಲದಲ್ಲಿ ಪೊಲಿಯೋದಿಂದ ತತ್ತರಿಸಿ ಹೊಗಿತ್ತು. ಇದನ್ನರಿತ ಸರಕಾರ, ಸಂಸ್ಥಗಳು ಪೊಲಿಯೋ ಹೊಗಲಾಡಿಸಿ ದೇಶವನ್ನು ಪೊಲಿಯೋ ಮುಕ್ತ ಆರೋಗ್ಯಭರಿತವನ್ನಾಗಿಸಲು ಯಶ ಸಾಧಿಸಿದೆ ಎಚಿದರು.ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್ ಸಿದ್ದನ್ನವರ ಮಾತನಾಡಿ, ತಾಲುಕಿನಾದ್ಯಂತೆ 184 ಭೂತಗಳನ್ನು ಹಾಗೂ 4 ಬಸ್ಸ್ ನಿಲ್ದಾಣಗಳಲ್ಲಿ ಲಸಿಕೆ ಹಾಕುವ ವ್ಯವಸ್ಥೆಯನ್ನು ಮಾಡಲಾಗಿದ್ದು, ತಾಲೂಕಿನಾದ್ಯಂತ 83 ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿ ಆ ಪ್ರದೇಶಗಳಲ್ಲಿರುವ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವ ವ್ಯವಸ್ಥೆ ಮಾಡಲಾಗಿದೆ.
ಒಟ್ಟು ತಾಲೂಕಿನಲ್ಲಿ 40242 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕುವ ಗುರಿಯನ್ನು ಹೊಂದಲಾಗಿದೆ ಎಂದರು. ಸಿ.ಡಿ.ಪಿ.ಓ. ಮಹಾಂತೇಶ ಬಜಂತ್ರಿ, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ನಿರ್ಮಲಾ ಮಹಾಂತಶೆಟ್ಟಿ, ಬಿ.ಎಚ್.ಇ.ಓ. ಎಸ್. ಎಸ್ ಮುತ್ನಾಳ, ಎನ್. ಡಿ ಖಾಡೆ ಆಯ್.ಸಿ.ಡಿ.ಎಸ್ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.