ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

ಮುಧೋಳ13: ಮಾಧ್ಯಮ ಕ್ಷೇತ್ರ ಈಗ ಸಾಕಷ್ಟು ಬದಲಾವಣೆಯಾಗಿದೆ, ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕ್ಷಣಾರ್ಧದಲ್ಲಿಯೇ ಸುದ್ದಿಯನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ, 

  ಇಂತಹ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಶಿಕ್ಷಣ ಮತ್ತು ತರಬೇತಿ ಅತಿ ಅವಶ್ಯಕವಾಗಿದೆ ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಪದವಿ ಕಾಲೇಜುಗಳಲ್ಲಿ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ಎಂಬ ಐಚ್ಚಿಕ ವಿಷಯ ಆರಂಭಿಸುವ ಮೂಲಕ ಮಾಧ್ಯಮ

ಕ್ಷೇತ್ರಕ್ಕೆ ಪ್ರವೇಶಿಸುವ ವಿದ್ಯಾರ್ಥಿ ಗಳಿಗೆ ಶಿಕ್ಷಣ ಮತ್ತು ತರಬೇತಿ ನೀಡುತ್ತೀರುವುದರಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಹೆಚ್ಚು ಅನುಕೂಲವಾಗಲಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. 

  ಮಂಗಳವಾರ ಬಾಗಲಕೋಟ ಬಿ.ವ್ಹಿ.ವ್ಹಿ ಸಂಘದ ಸ್ಥಳೀಯ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿ ಇಂದು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶಿಕ್ಷಣ ಮತ್ತು ತರಬೇತಿ ಜೊತೆಗೆ ತಮ್ಮದೆಯಾದ ವಿಶಿಷ್ಟ ಕೌಶಲ್ಯ ಹೊಂದಿರಬೇಕು.

 ಈ ಮೊದಲು ಪತ್ರಿಗಳಿಗೆ ಕೈಬರಹ ಮೂಲಕವೇ ಸುದ್ದಿ ಕಳಿಸಲಾಗುತ್ತಿತ್ತು ಆದರೆ ಈಗ ಕಂಪ್ಯೂಟರ್ ಬಂದ ನಂತರ ಕೈಬರಹ ಮೂಲಕ ಕಳಿಸುವುದು ನಿಂತು ಹೋಗಿದೆ ಈಗ ಏನಿದ್ದರೂ ಕಂಪ್ಯೂಟರ್ ಇಲ್ಲವೆ ಮೊಬೈಲ್ ಮೂಲಕವೇ ಸುದ್ದಿಯನ್ನು ಕಳಿಸುವುದು ಅನಿವಾರ್ಯ ಮತ್ತು ಅವಶ್ಯಕವಾಗಿದೆ ಹೀಗಾಗಿ ಮಾಧ್ಯಮ ಕ್ಷೇತ್ರದಲ್ಲಿ ಪ್ರವೇಶ ಮಾಡುವ ವಿದ್ಯಾಥರ್ಿಗಳಿಗೆ ಕಂಪ್ಯೂಟರ್ ಮತ್ತು ಮೊಬೈಲ್ ಉಪಯೋಗ ಮತ್ತು ಅವುಗಳ ಬಳಕೆ ಕುರಿತು ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

  ಬಿ.ವ್ಹಿ.ವ್ಹಿ ಸಂಘವು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾಥರ್ಿಗಳಿಗೆ ಬೇಕಾಗುವ ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್, ಕ್ಯಾಮರಾ ದಂತಹ ಸೌಲಭ್ಯಗಳನ್ನು ಒದಿಗಿಸಿ ಕೊಟ್ಟಿದೆ ಅವುಗಳನ್ನು ಪ್ರತಿಯೊರ್ವ ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಂಡು ಶ್ರೇಷ್ಠ ಪತ್ರಕರ್ತರಾಗಿ ಹೊರಹೊಮ್ಮಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

  ಬಿ.ವ್ಹಿ.ವ್ಹಿ ಸಂಘದ ಗೌರವ ಕಾರ್ಯದರ್ಶಿ  ಮಹೇಶ ಎನ್.ಅಥಣಿ, ಬಿ.ವ್ಹಿ.ವ್ಹಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾಯರ್ಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ವಿಧಾನ ಪರಿಷತ್ ಸದಸ್ಯ ಹಣಮಂತ ಆರ್.ನಿರಾಣಿ, ಪ್ರಾಚಾರ್ಯ ಡಾ.ಎನ್.ಬಿ.ಇಂಗನಾಳ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ವಿಶ್ವನಾಥ ಎಸ್.ಮುನವಳ್ಳಿ, ಗಣ್ಯರಾದ ಬಿ.ಎಚ್.ಪಂಚಗಾಂವಿ, ಗುರುರಾಜ ಕಟ್ಟಿ, ಕೆ.ಆರ್.ಮಾಚಪ್ಪನವರ, ಪತ್ರಿಕಾಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.

  ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾಥರ್ಿ-ವಿದ್ಯಾಥರ್ಿನಿಯರು ಡಿಸಿಎಂ ಗೋವಿಂದ ಕಾರಜೋಳ ಅವರ ಜೊತೆ ಛಾಯಾಚಿತ್ರ ತೆಗೆಸಿಕೊಂಡರು.