ಲೋಕದರ್ಶನ ವರದಿ
ಬೆಳಗಾವಿ 17, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವಿಭಾಗವಾದ ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲೀಷ ಬೆಳಗಾವಿಯ ಡಾ. ಬಾಬಾಸಾಹೇಬ ಅಂಬೇಡ್ಕರ್ ಎಜುಕೇಶನ ಸೊಸೈಟಿಯಲ್ಲಿ ಹೊಸ ಕೇಂಬ್ರಿಡ್ಜ್ ಇಂಗ್ಲೀಷ ಪರೀಕ್ಷಾಕೇಂದ್ರ ಪ್ರಾರಂಭಿಸಿದೆ. ಉದ್ಘಾಟನಾ ಸಮಾರಂಭದಲ್ಲಿ ಅಸೆಸ್ಮೆಂಟ್ ಇಂಗ್ಲೀಷನ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿದರ್ೇಶಕ ಟಿ.ಕೆ.ಅರುಣಾಚಲಂ ಡಾ. ಬಾಬಾಸಾಹೇಬ ಅಂಬೇಡ್ಕರ ಎಜುಕೇಶನ ಸೊಸೈಟಿಯ ಅಧ್ಯಕ್ಷ ರಾಜ್ ಶಾಮಾ ಘಾಟೇಜ್ ಕೇಂಬ್ರಿಡ್ಜ್ ಇಂಗ್ಲೀಷನ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕ ಸ್ಯಾಮುಯೆಲ್ ಆನಂದರಾಜ್ ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲೀಷನ ಭಾರತದ ಕನ್ಸಲ್ಟೆಂಟ್ ಡಿ.ಎಸ್.ಭರತ ಅಯ್ಯರ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಎಜುಕೇಶನ ಸೊಸೈಟಿಯ ಪ್ರಾಂಶುಪಾಲರಾದ ಲಕ್ಷ್ಮೀ ಇಂಚಲ ಭಾಗವಹಿಸಿದ್ದರು.
ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲೀಷ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿದರ್ೇಶಕ ಟಿ,ಕೆ,ಅರುಣಾಚಲಂ ಅವರು ಮಾತನಾಡಿ ಡಾ. ಬಾಬಾಸಾಹೇಬ ಅಂಬೇಡ್ಕರ ಎಜುಕೇಶನ ಸೊಸೈಟಿಯೊಂದಿಗೆ ಸಂಬಂಧ ಹೊಂದಲು ಸಂತಸವಾಗುತ್ತಿದೆ. ಮತ್ತು ಮುಂದೆ ಬಹಳ ಫಲಪ್ರದ ಪಾಲುದಾರಿಕೆಯನ್ನು ಎದುರು ನೋಡುತ್ತಿದ್ದೇವೆ. ವಿದ್ಯಾಥರ್ಿಗಳಿಗೆ ಅವರ ಭಾಷೆ ಮತ್ತು ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಂತಾರಾಷ್ಟ್ರೀಯ ಪ್ರಾಶಸ್ತ್ಯ ಪಡೆಯಲು ಸಹಾಯ ಮಾಡುವ ವೇದಿಕೆಯನ್ನು ಒದಗಿಸುವ ವಿದ್ಯಾಸಂಸ್ಥೆಯ ಈ ಉಪಕ್ರಮವನ್ನು ಶ್ಲಾಘಿಸುತ್ತೇವೆ ಎಂದು ಹೇಳಿದರು.
ಡಾ. ಬಾಬಾಸಾಹೇಬ ಅಂಬೇಡ್ಕರ ಎಜುಕೇಶನ ಸೊಸೈಟಿಯ ಅಧ್ಯಕ್ಷ ರಾಜ್ ಶಾಮಾ ಘಾಟೇಜ್ ಅವರು ಮಾತನಾಡಿ ಯುವ ಪೀಳಿಗೆಯನ್ನು ಪೋಷಿಸಲು ಬದ್ಧರಾಗಿದ್ದೇವೆ ಮತ್ತು ನಮ್ಮ ವಿದ್ಯಾಥರ್ಿಗಳ ಕೌಶಲ್ಯವನ್ನು ಹೆಚ್ಚಿಸಲು ಉತ್ತಮ ವೇದಿಕೆ ಒದಗಿಸುತ್ತೇವೆ ಕೇಂಬ್ರಿಡ್ಜ್ ಇಂಗ್ಲೀಷ ಅರ್ಹತೆಗಳಿಗೆ ಸಂಬಂಧಿಸಿದಂತೆ ಅಧಿಕೃತ ಕೇಂದ್ರವಾಗಲು ನಮಗೆ ತುಂಬಾ ಸಂತೋಷವಾಗಿದೆ. ಉತ್ತರ ಕನರ್ಾಟಕ ಪ್ರದೇಶದ ಮೊದಲ ಅಧಿಕೃತ ಕೇಂದ್ರವಾಗಲು ಹೆಮ್ಮೆಪಡುತ್ತೇವೆ ಮತ್ತು ಪ್ರತಿಯೊಬ್ಬರಿಗೂ ಈ ಪ್ರಯೋಜನ ಲಭಿಸುವಂತಾಗಲು ಕೇಂಬ್ರಿಡ್ಜ್ ಇಂಗ್ಲೀಷ ಪರೀಕ್ಷೆಗಳನ್ನು ಈ ಪ್ರದೇಶದ ಪ್ರತಿಯೊಂದು ನಗರ ಮತ್ತು ಪಟ್ಟಣಗಳಿಗೆ ಕೊಂಡೊಯ್ಯಲು ಯೋಜಿಸಿದ್ದೇವೆ ಎಂದು ಹೇಳಿದರು.
ಕೇಂಬ್ರಿಡ್ಜ್ ಇಂಗ್ಲೀಷ ಪರೀಕ್ಷೆಗಳು ಅಧ್ಯಯನ ಉದ್ಯೋಗ ಅಥವಾ ಪ್ರಯಾಣದ ಅವಕಾಶಗಳ ಜಗತ್ತನ್ನು ತೆರೆಯಬಹುದು. ಈ ಉನ್ನತ ಗುಣಮಟ್ಟದ ಅಂತಾರಾಷ್ಟ್ರೀಯ ಪರೀಕ್ಷೆಗಳನ್ನು ವೃತ್ತಿ ಮತ್ತು ಅಧ್ಯಯನದ ಯಶಸ್ಸಿಗಾಗಿ ಪ್ರಾಯೋಗಿಕ ಇಂಗ್ಲೀಷ ಭಾಷಾ ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ವಿಶ್ವದ ಮಾನ್ಯತೆ ಪಡೆದ ಅತಿದೊಡ್ಡ ಭಾಷಾ ಸಂಶೋಧನಾ ತಂಡಗಳ ಮೂಲಕ ಇದನ್ನು ವ್ಯಾಪಕವಾಗಿ ಸಂಶೋಧಿಸಲಾಗಿದೆ. ಈ ಪರೀಕ್ಷೆಗಳು ಉನ್ನತ ಶಿಕ್ಷಣಕ್ಕೆ ಬಾಗಿಲು ತೆರೆಯುತ್ತವೆ. ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುತ್ತವೆ. ಮತ್ತು ವಿದ್ಯಾಥರ್ಿಗಳಿಗೆ ಅಧ್ಯಯನ ಅಥವಾ ಉದ್ಯೋಗದ ಆಯ್ಕೆಯನ್ನು ಹೆಚ್ಚಿಸುತ್ತವೆ. ಕೇಂಬ್ರಿಡ್ಜ್ ಇಂಗ್ಲೀಷ ಪ್ರಮಾಣಪತ್ರದೊಂದಿಗೆ ವಿದ್ಯಾಥರ್ಿಯು ಆತನ/ ಆಕೆಯ ಇಂಗ್ಲೀಷ ಭಾಷಾ ಕೌಶಲ್ಯವನ್ನು ವಿಶ್ವದಾದ್ಯಂತ ವಿಶ್ವವಿದ್ಯಾಲಯಗಳು ಉದ್ಯೋಗದಾತರು ಮತ್ತು ಸಕರ್ಾರಗಳಿಗೆ ಸಾಬೀತುಪಡಿಸಲು ಸಾಧ್ಯವಾಗುತ್ತದೆ.
ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲೀಷ: ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲೀಷ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಒಂದು ಭಾಗವಾಗಿದೆ. ಇದು ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದ್ದು ವಿಶ್ವದಾದ್ಯಂತ ಇಂಗ್ಲೀಷ ಕಲಿಯುವವರ ಮತ್ತು ಇಂಗ್ಲೀಷ ಶಿಕ್ಷಕರಿಗೆ ಅತ್ಯಮೂಲ್ಯವಾದ ವಿದ್ಯಾರ್ಹತೆಗಳ ಶ್ರೇಣಿಯನ್ನು ಅಭಿವೃದ್ಧಿಪಡಿಸುವಲ್ಲಿ ಇದು ತೊಡಗಿದೆ.
ಪ್ರತಿವರ್ಷ 130 ಕ್ಕೂ ಹೆಚ್ಚು ದೇಶಗಳಲ್ಲಿ 5 ದಶಲಕ್ಷಕ್ಕೂ ಹೆಚ್ಚು ಕೇಂಬ್ರಿಡ್ಜ್ ಇಂಗ್ಲೀಷ ಪರೀಕ್ಷೆಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು 20 ಸಾವಿರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಉದ್ಯೋಗದಾತರು ಸಕರ್ಾರಿ ಸಚಿವಾಲಯಗಳು ಮತ್ತು ಇತರ ಸಂಸ್ಥೆಗಳು ಇಂಗ್ಲೀಷ ಭಾಷೆಯ ಸಾಮಥ್ರ್ಯದ ಪುರಾವೆಗೆ ಕೇಂಬ್ರಿಡ್ಜ್ ಇಂಗ್ಲೀಷ ಪರೀಕ್ಷೆಗಳು ಮತ್ತು ಅರ್ಹತೆಗಳನ್ನು ಅವಲಂಬಿಸಿವೆ. ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲೀಷ ಒಂದು ಲಾಭೋದ್ದೇಶ ರಹಿತ ಸಂಸ್ಥೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ: ತಿತಿತಿ.ಛಿಚಿಟಛಡಿಜರಜಜಟಿರಟ.ಠಡಿರ/ಟಿ/
ಮೊ. 9842475706 ಸಂಪಕರ್ಿಸಬಹುದು.