ಉಪ-ವಿಭಾಗ ಶಿಗ್ಗಾವಿ ಕಛೇರಿ ನೂತನ ಕಟ್ಟಡದ ಉದ್ಘಾಟನೆ

ಶಿಗ್ಗಾವಿ 29ಃ ಒಳ್ಳೆಯ ಆಡಳಿತಕ್ಕೆ ಒಳ್ಳೆಯ ಕಛೇರಿಯ ಅವಶ್ಯಕತೆ ಇದ್ದು, 10 ವರ್ಷದ ಹಿಂದೆ ಇದ್ದ ತಾಲೂಕಿನ ಸ್ಥಿತಿ ಈಗಿಲ್ಲ, ಸುಧಾರಿತ ರಸ್ತೆ, ಕಟ್ಟಡ, ಬ್ರಿಡ್ಜ್ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಂದ ತಾಲೂಕು ಕೂಡಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ, ಉಪ-ವಿಭಾಗ ಶಿಗ್ಗಾವಿ ಕಛೇರಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿದ ಅವರು 75 ಲಕ್ಷದಲ್ಲಿ ನೂತನ ಕಚೇರಿ ನಿಮರ್ಾಣವಾಗಿದ್ದು ಇಲಾಖೆಯ ದಕ್ಷತೆಗೆ ತಕ್ಕಂತೆ ಕಾರ್ಯಗಳಾಗಬೇಕಿದ್ದು ಲೋಕೋಪಯೋಗಿ ಇಲಾಖೆಗೆ ತಕ್ಕಂತೆ ಜನರಿಗೆ ಉಪಯೋಗವಾಗುಂತಹ ಕಾರ್ಯಗಳಾಗಲಿ, ಇಲಾಖೆಯು ನೂರಾರು ಕೋಟಿಗಳಲ್ಲಿ ವಿವಿಧ ಯೋಜನೆಗಳ ಕಾರ್ಯಗಳ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು ಆರ್ಡಿಪಿಆರ್ ಬಿಟ್ಟರೆ ಲೋಕೋಪಯೋಗಿ ಇಲಾಖೆಯಲ್ಲಿ ರಸ್ತೆಗಳಿಗೆ ಹೆಚ್ಚಿನ ಒತ್ತು ಕೊಟ್ಟು ಗುಣಾತ್ಮಕ ಕಾರ್ಯಗಳನ್ನ ಮಾಡಲಾಗಿದೆ, ಹಳೆ ತಹಶೀಲ್ದಾರ ಕಚೇರಿಯಿದ್ದ ಸ್ಥಳದಲ್ಲಿ 10 ಕೋಟಿ ರೂಗಳ ಎಲ್ಲ ಇಲಾಖೆಗಳೂ ಸಹಿತ ಒಂದೇ ಸೂರಿನಲ್ಲಿ ಬರುವಂತೆ ಕಟ್ಟಡ ನಿಮರ್ಿಸಲು ಟೆಂಡರ್ ಕರೆಯಲಾಗಿದೆ, ಶಿಗ್ಗಾವಿ ಸವನೂರ ರಸ್ತೆಯ ಅಭಿವೃದ್ಧಿಗೆ 25 ಕೋಟಿಗಳ ಪ್ರಸ್ತಾವನೆ ಕಳಿಸಲಾಗಿದೆ, ಕಾರವಾರ -ಇಳಕಲ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪರಿವರ್ತನೆಗೆ ಪ್ರಸ್ತಾವನೆಯನ್ನು ಕಳಿಸಲಾಗಿದೆ ಮತ್ತು ಶಿಗ್ಗಾವಿ ಸವಣೂರ ರಸ್ತೆ ಅಗಲೀಕರಣ ಯೋಜನೆ ಕೈಗೊಂಡಿದ್ದು ಅಲ್ಲಿರುವ ಮರಗಳನ್ನು ಕಡಿಯದಂತೆ ಅಭಿವೃದ್ಧಿ ಪಡಿಸಲು ಸೂಚಿಸಲಾಗಿದೆ, ಶಿಗ್ಗಾವಿ ಪ್ರವಾಸಿ ಮಂದಿರದಲ್ಲಿ ಇನ್ನೊಂದು 4 ಕೊಠಡಿಗಳ ಒಂದು ಬ್ಲಾಕ್ ಅನ್ನು ಕಟ್ಟಲು ಮತ್ತು ಬಂಕಾಪೂರ ಮತ್ತು ತಡಸ ಗಳಲ್ಲಿಯ ಪ್ರವಾಸಿ ಮಂದಿರಗಳನ್ನು ಅಭಿವೃದ್ಧಿ ಪಡಿಲು ಕ್ರಮ ಜರುಗಿಸಲಗುವುದು ಎಂದರು.

ಇದೇ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಯಿಯವರನ್ನು ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಾವೇರಿ ಎಇಇ ವ್ಹಿ ಇ ಭವನಮೂತರ್ಿ, ಶಿಗ್ಗಾವಿ ಎಇಇ ವ್ಹಿ ಎಂ ಚಿಕ್ಕಮಠ, ಕೆಸಿಸಿ ಬ್ಯಾಂಕ್ ನಿದರ್ೇಶಕರುಗಳಾದ ಗಂಗಣ್ಣ ಸಾತಣ್ಣವರ, ನಿಂಗಣ್ಣ ಚಪ್ಪರದಹಳ್ಳಿ, ತಾಪಂ ಸದಸ್ಯೆ ವಿಜಯಲಕ್ಷ್ಮಿ ಮುಂದಿನಮನಿ, ಗುತ್ತಿಗೆದಾರ ಅಜರ್ುನ ಹಂಚಿನಮನಿ, ಭಾಜಪ ಅದ್ಯಕ್ಷ ಶಿವಾನಂದ ಮ್ಯಾಗೇರಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರು, ಕಾರ್ಯಕರ್ತರು ಇದ್ದರು.