ಲಕ್ಷ್ಮೀ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನೆ

ಲೋಕದರ್ಶನ ವರದಿ

ಕಾಗವಾಡ 05: ಸಹಕಾರಿ ಸಂಘಗಳು ಹುಟ್ಟು ಹಾಕುವುದು ಏಕೈಕ್ಯಕಾರಣ ಸರ್ವ ಸಾಮಾನ್ಯ ಬಡ ಕುಟುಂಬಗಳಿಗೆ ಆಥರ್ಿಕ ನೆರವುವಾಗಲಿ ಎಂಬ ಉದ್ದೇಶದಿಂದ ಮಾಂಜರಿಯ ಲಕ್ಷ್ಮೀ ಬ್ಯಾಂಕ್ ಕೃಷ್ಣಾ ನದಿ ಮಹಾಪೂರ ನೀರಿನಲ್ಲಿ ಸಮಸ್ಯೆ ಎದುರಿಸಿದ ಬ್ಯಾಂಕಿನ ಸದಸ್ಯರಿಗೆ ಶೇ.50ರಷ್ಟು ಲಾಭಾಂಶ ನೀಡಿದೆ ಮತ್ತು ನಿರಂತರ ಶೇ.30ರಷ್ಟು ಲಾಭಾಂಶ ನೀಡುತ್ತಾ ಬಂದಿದೆ. ಈ ಸಂಸ್ಥೆ ಜೈನ ಸಮಾಜದ ಭಗವಾನ್ ಮಹಾವೀರರು ನೀಡಿರುವ "ಜಿವೋ ಔರ್ ಜೀನೆದೋ" ಈ ಸಂದೇಶದ ಪಾಲನೆ ಮಾಡಿದೆ ಎಂದು ಕವಲಗುಡ್ಡ ಸಿದ್ಧಯೋಗಿ ಮಠದ ಅಮರೇಶ್ವರ ಮಹಾರಾಜರು ಉಗಾರದಲ್ಲಿ ಹೇಳಿದರು.

ಗುರುವಾರರಂದು ಉಗಾರ ಬುದ್ರುಕ ಗ್ರಾಮದಲ್ಲಿ ಶ್ರೀ ಲಕ್ಷ್ಮೀಕ್ರೇಡಿಟ್ ಸೌಹಾರ್ದ ಸಹಕಾರಿ ಬ್ಯಾಂಕಿನ ಉಗಾರ ಬುದ್ರುಕ ಶಾಖೆಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿತು. ಅಮರೇಶ್ವರ ಮಹಾರಾಜರು ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮಾಜಿ ಶಾಸಕ ಮೋಹನರಾವ ಶಹಾ ದೀಪ ಬೆಳಗಿಸಿ ಮಾತನಾಡುವಾಗ, ಸಹಕಾರಿ ಸಂಘ ಒಂದುಎತ್ತಿನ ಬಂಡಿಠೇವಣಿ ಹಣ ನೀಡಿದವರು. ಒಂದು ಚಕ್ರವಾದರೆ ಸಾಲ ತೆಗೆದುಕೊಂಡವರು ಇನ್ನೊಂದು ಚಕ್ರ ಈ ಎರಡು ಚಕ್ರಗಳು ಸರಿಯಾಗಿ ಉಳಿಯಬೇಕಾದರೆ ಇವರ ಕರ್ತವ್ಯ ಪಾಲನೆವಾಗಬೇಕು.ಆಡಳಿತ ಮಂಡಳಿ, ಸಿಬ್ಬಂದಿ ಇವರಿಂದ ಈ ಸಂಸ್ಥೆ ಬೆಳಿಯುತ್ತಿದೆ ಎಂದು ಹೇಳಿದರು.

ಸಂಸ್ಥೆಯ ಸಂಸ್ಥಾಪಕ ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗೆಣ್ಣವರ ಸರಳ, ಸಜ್ಜನಿಕೆ ಹೊಂದಿದ್ದವರು.ಇವರ ನೇತೃತ್ವದಲ್ಲಿ 25 ಶಾಖೆಗಳು ಪ್ರಾರಂಭವಾಗಿದ್ದು, ಅನೇಕ ಶಾಖೆಗಳು ಸ್ವಂತಕಟ್ಟಡ ಹೊಂದಿವೆ. ಒಟ್ಟ ಸದಸ್ಯರ ಸಂಖ್ಯೆ 9,277 ಹೊಂದಿದೆ. 187.77 ಕೋಟಿರೂ. ಠೇವಣಿ ಹಣ ಸ್ವೀಕರಿಸಿದೆ.106.27 ಕೋಟಿಸಾಲ ವಿತರಿಸಿದ್ದು, 3.40 ಕೋಟಿರೂ. ಲಾಭಾಂಶಗಳಿಸಿದೆ. ಒಂದು ಮಾದರಿ ಸಂಸ್ಥೆಯೆಂದು ಇಡೀ ಜಿಲ್ಲೆಯಲ್ಲಿ ಹೆಸರಾಂತವಾಗಿದೆ ಎಂದು ಅಥಣಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶೀತಲ ಪಾಟೀಲ ಹೇಳಿದರು.

ಸಂಸ್ಥಾಪಕರು, ಮಾಜಿ ಶಾಸಕ ಕೆ.ಪಿ.ಮಗೆಣ್ಣವರ ಮಾತನಾಡುವಾಗ, ಕಳೇದ 30 ವರ್ಷಗಳ ಹಿಂದೆ ಎಲ್ಲ ಗೆಳೆಯರು ಒಂದುಗೂಡಿ ಸಂಸ್ಥೆ ಸ್ಥಾಪಿಸಿದ್ದು, ಎಲ್ಲ ಸಂಚಾಲಕರು, ಪ್ರಾಮಾಣಿಕ ಸಿಬ್ಬಂದಿ ವರ್ಗ ಸಹಕರಿಸಿದ್ದರಿಂದ 25 ಶಾಖೆಗಳು ಪ್ರಾರಂಭಿಸಿದ್ದೇವೆ. ಇದರಿಂದ ಲಾಭಗಳಿಸುವ ಭಾವನೆ ನಮ್ಮದಿಲ್ಲಾ. ನಿರಂತರವಾಗಿ ಶೇ.30ರಷ್ಟು ಲಾಭಾಂಶ ಸದಸ್ಯರಿಗೆ ನೀಡಿದ್ದು.

ಸಂಸ್ಥೆಯ ಸುವರ್ಣ ಮಹೋತ್ಸವ ನಿಮಿತ್ಯ ಶೇ.51ರಷ್ಟು ಲಾಭಾಂಶ ನೀಡಿದ ದೇಶದಲ್ಲಿ ಏಕೈಕ್ಯ ಸಂಸ್ಥೆ ಇದಾಗಿದೆ. ನಾನು ಶ್ರಮಪಟ್ಟಿದ್ದ ಈ ಸಂಸ್ಥೆ ಹೀಗೆ ಬೆಳಿಸಿರಿ ಎಂಬ ಆಸೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಮಹಾವೀರ ಬ್ಯಾಂಕಿನ ಅಧ್ಯಕ್ಷ ವಜ್ರಕುಮಾರ ಮಗದುಮ್, ಚಿಕ್ಕೋಡಿ ನ್ಯಾಯವಾದಿ ಎಸ್.ಟಿ.ಮುನ್ನೋಳಿ, ಸಂಸ್ಥೆಯ ಚೇರಮನ್ ಜಿನ್ನಪ್ಪಾ ಶೇಡಬಾಳೆ, ವೈಸ್ ಚೇರಮನ್ ಅಶೋಕ ಚಿಮಾಯಿ, ಜನರಲ್ ಮ್ಯಾನೇಜರ್ ಸಾಗರ ಮಂಗಸೂಳೆ, ಸ್ಥಾನಿಕ ಆಡಳಿತ ಚೇರಮನ್ ರಾಹುಲ್ ಶಹಾ, ಎಲ್ಲ ಸಂಚಾಲಕರು, ತಾಪಂ ಸದಸ್ಯ ವಸಂತ ಖೋತ, ಭೀಮು ಭೋಲೆ, ಭೂಪಾಲ್ ವಸವಾಡೆ, ಬಾಬುರಾವ ಅಕಿವಾಟೆ, ಸುಭಾಷ ಕುಸನಾಳೆ, ಸೇರಿದಂತೆ ಅನೇಕರು ಇದ್ದರು.