ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಶಾಖಾ ಉದ್ಘಾಟನೆ

ಲೋಕದರ್ಶನ ವರದಿ

ಕಾಗವಾಡ 06: ದೇಶ ಹಾಗೂ ರಾಜ್ಯದಲ್ಲಿ ಕೆಲ ಆರ್ಥಿಕ ಸಂಸ್ಥೆಗಳು ಸಮಸ್ಯೆಗಳು ಎದುರಿಸುತ್ತಿವೆ. ಇಂತಹ ಸಮಯದಲ್ಲಿ ಸರಳ ಮತ್ತು ಸಜ್ಜನಿಕೆ ಹೊಂದಿರುವ ಮಾಜಿ ಶಾಸಕ ಕೆ.ಪಿ.ಮಗೆಣ್ಣವರಇವರು ಸ್ಥಾಪಿಸಿದ್ದ ಶ್ರೀ ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ 25 ಶಾಖೆಗಳನ್ನು ಹೊಂದಿದ್ದು, 16 ಶಾಖೆಗಳು ಸ್ವಂತ ಕಟ್ಟಡ ಹೊಂದಿವೆ, ಅಷ್ಟೇ ಅಲ್ಲದೇ 3.40 ಕೋಟಿ ಲಾಭಗಳಿಸಿದೆ, ಇದು ಸಾಮಾನ್ಯವಲ್ಲಾ. ಇವರ ಮೇಲೆ ಇಟ್ಟ ನಂಬಿಕೆ ವಿಶ್ವಾಸದಿಂದ ಇಷ್ಟೇಲ್ಲಾ ಸಾಧ್ಯವಾಗಿದೆ ಎಂದು ಕಾಗವಾಡದ ಮಾಜಿ ಶಾಸಕ ಮೋಹನರಾವ ಶಹಾ ಹೇಳಿದರು.

ಶುಕ್ರವಾರರಂದು ಐನಾಪೂರದಲ್ಲಿ ಸಂಸ್ಥೆಯ ಶಾಖೆಗಾಗಿ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದು.ಇದರ ಉದ್ಘಾಟನೆ ಮೋಹನರಾವ ಶಹಾ ನೆರವೇರಿಸಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಐನಾಪೂರ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ರವೀಂದ್ರ ಗಾಣಿಗೇರ ಕರಗೆ ಪೂಜೆ ಸಲ್ಲಿಸಿ ಮಾತನಾಡುವಾಗ, ಮಾಜಿ ಶಾಸಕ ಕೆ.ಪಿ.ಮಗೆಣ್ಣವರ 5 ವರ್ಷ ಶಾಸಕ, ಮೈಸೂರು ಸ್ಯಾಂಡಲ್ ಸೋಪ್ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಕಾಗವಾಡದಲ್ಲಿ ದಿ.ಶಿರಗುಪ್ಪಿ ಶುಗರ್ ವಕ್ಸರ್್ ಸಕ್ಕರೆ ಕಾರ್ಖಾನೆ ನಿರ್ಮಿಸಿ, ಶ್ರೀ ಲಕ್ಷ್ಮೀ ಕ್ರೆಡಿಟ್ ಸಂಸ್ಥೆ ಸ್ಥಾಪಿಸಿ ಸಾವಿರಾರು ಕುಟುಂಬಗಳಿಗೆ ಆಧಾರಸ್ಥಂಬರಾಗಿದ್ದಾರೆ. ಇಂತಹ ಸರಳ, ಸಜ್ಜನಿಕೆ ಸ್ವಭಾವ ಹೊಂದಿದ್ದರಿಂದ ಜನರ ಮೆಚ್ಚುಗೆಗೆ ಪಾತ್ರರಾಗಿ ಇಷ್ಟೇಲ್ಲಾ ಅಭಿವೃದ್ಧಿಯಾಗಿದೆ. ಈ ಮುಂದೆಯೂ ಸಮಾಜದಲ್ಲಿ ಇಂತಹ ನಿಸ್ವಾರ್ಥ ವ್ಯಕ್ತಿಗಳ ಬೆಂಬಲಕ್ಕೆ ಜನರು ನಿಲ್ಲಲಿದ್ದಾರೆ ಎಂದು ಹೇಳಿದರು.

ಐನಾಪೂರ ಪಿಕೆಪಿಎಸ್ ಸಂಸ್ಥೆಯ ಸಂಚಾಲಕ ರಾಜೇಂದ್ರ ಪೋತದಾರ ಸೇಫ್ ಡಿಪಾಜಿಟ್ ಲಾಕರ ಪೂಜೆ ಸಲ್ಲಿಸಿ ಮಾತನಾಡುವಾಗ, ಅನೇಕ ಬ್ಯಾಂಕ್, ಸಂಘಗಳು ಐನಾಪೂರದಲ್ಲಿ ಸ್ಥಾಪಿಸಿ ಮುಚ್ಚಿಹೋಗಿವೆ. ಆದರೆ, ಲಕ್ಷ್ಮೀ ಬ್ಯಾಂಕಿನ ಶಾಖೆ ಹುಟ್ಟುಹಾಕಿ ಸ್ವಂತ ಕಟ್ಟಡವೂ  ನಿಮರ್ಿಸಿದ್ದಾರೆ. ಇದು ಇಲ್ಲಿಯ ಜನರ ಪ್ರಾಮಾಣಿಕರಿಗೆ ನೀಡುತ್ತಿರುವ ಬೆಂಬಲ ಎಂದರು. ಸಂಸ್ಥೆಯ ಸಂಸ್ಥಾಪಕ ಕೆ.ಪಿ.ಮಗೆಣ್ಣವರಅಧ್ಯಕ್ಷತೆ ವಹಿಸಿ ಮಾತನಾಡುವಾಗ, ನಾನು ಹಾಗೂ ನನ್ನ ಗೆಳೆಯರು ಒಂದುಗೂಡಿ ಲಕ್ಷ್ಮೀ ಸಂಸ್ಥೆ ಹುಟ್ಟುಹಾಕಿದ್ದೇವೆ. ಇದು ಸಂಸ್ಥೆ ಶ್ರೀಮಂತದರಲ್ಲಾ. ಬಡ ಮತ್ತು ಸಾಮಾನ್ಯ ಜನರ ಸಂಸ್ಥೆ ಸದಸ್ಯರು ಸಂಕಷ್ಟದಲ್ಲಿದ್ದಾಗ ನೆರವಿಗೆ ಹೋಗುತ್ತೇವೆ. 25 ಶಾಖೆಗಳಿಂದ ಸೇವೆ ನೀಡುತ್ತಿದ್ದು, ಇದು ನಿಮ್ಮ ಬ್ಯಾಂಕ್.ಒಳ್ಳೆಯದಾಗಿ ನಡೆಸಿಕೊಳ್ಳಿರಿ  ಎಂದು ಗ್ರಾಹಕರಿಗೆ ಹೇಳಿದರು.ಇದೇ ರೀತಿ ಚಿಕ್ಕೋಡಿಯ ಖ್ಯಾತ ನ್ಯಾಯವಾದಿಗಳಾದ ಸಿ.ಟಿ.ಮುನ್ನೋಳಿ ಮಾತನಾಡಿದರು.

ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷ ಜಿನ್ನಪ್ಪಾ ಶೇಡಬಾಳೆ, ಉಪಾಧ್ಯಕ್ಷ ಅಶೋಕ ಚಿಮಾಯಿ, ಪ್ರಧಾನ ವ್ಯವಸ್ಥಾಪಕ ಸಾಗರ ಮಂಗಸೂಳೆ ಇವರು ಮತ್ತು ಕೆ.ಪಿ.ಮಗೆಣ್ಣವರ ಇವರಿಂದ ಐನಾಪೂರ ಶಾಖೆ ಅಧ್ಯಕ್ಷ ಆದಿನಾಥ ದಾನೋಳಿ, ಉಪಾಧ್ಯಕ್ಷ ಕಲಗೌಡಾ ಪಾಟೀಲ, ಶ್ರೀಪಾಲ್ ಶೇಡಬಾಳೆ, ಮೋಹನ ಅನಗಲಿ, ಭರತೇಶ ಪಾಟೀಲ, ಶಾಂತಿನಾಥ ಉಗಾರೆ, ಭರತೇಶ ಖೋತ, ಮಲ್ಲಪ್ಪಾಅವಟಿ, ಸುರೇಶ ಚಿನಗಿ, ತಾತ್ಯಾಸಾಬ ಜತನ್ನವರ, ರಮಪ್ಪಾ ಸತ್ತಿ, ಶಾಖಾ ವ್ಯವಸ್ಥಾಪಕ ರಾಘವೇಂದ್ರ ಕುಲಕರ್ಣಿ ಇವರನ್ನು ಸನ್ಮಾನಿಸಿದರು. ಕಾಗವಾಡ ಶಾಖೆ ವ್ಯವಸ್ಥಾಪಕ ಚಂದ್ರಕಾಂತ ಪಾಟೀಲ ವಂದಿಸಿದರು.