ಅಂತರ್ಶಾಲಾ ಮಟ್ಟದ ಹಾಕಿ ಪಂದ್ಯಾವಳಿಯ ಉದ್ಘಾಟನೆ ಸಮಾರಂಭ

ಬಾಗಲಕೋಟ : "ಗೆಲುವು ಸ್ಪಧರ್ೆಯ ಗುಣಮಟ್ಟವನ್ನು ಸೂಚಿಸುತ್ತದೆಯೇ ಹೊರತು ಅಂತಿಮ ಫಲಿತಾಂಶವನ್ನಲ್ಲ, ಆಟಗಾರರಿಗೆ ಕ್ರೀಡಾ ಮನೋಭಾವನೆ ಮುಖ್ಯ. ಸ್ಪಧರ್ಾತ್ಮಕ ಮನೋಭಾವನೆಯ ಮೇಲೆ ಆಟಗಾರರು ಶಿಸ್ತು, ಸಂಯಮ ಹೊಂದಿದ್ದಾದರೆ ಜನರ ಹೃದಯವನ್ನು ಗೆಲ್ಲಲು ಸಾಧ್ಯ. ಆಟಗಾರರು ಒಂದು ಶಾಲೆ ಅಥವಾ ಸಂಸ್ಥೆಯನ್ನು  ಇಂದು ಪ್ರತಿನಿಧಿಸಿದ್ದರೂ ಕೂಡ ಅದು ಮುಂದೆ ಒಂದು ದಿನ ದೇಶದ ಸಾಧನೆಗೆ ಅಡಿಪಾಯ ಹಾಕುವುದರಲ್ಲಿ ಸಂಶಯವಿಲ್ಲ ಎಂದು ಅಂತಾರಾಷ್ಟ್ರೀಯ ಮಟ್ಟದ ಉದಯೋನ್ಮುಖ ಹಾಕಿ ಕ್ರೀಡಾಪಟು ಹರೀಶ ಎಸ್. ಮುತಗಾರ್ ಇವರು  ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ವಿದ್ಯಾಗಿರಿಯಲ್ಲಿನ ಬಸವೇಶ್ವರ ಸಿಬಿಎಸ್ಇ ಶಾಲೆಯ ಆಶ್ರಯದಲ್ಲಿ ಅ. 19 ರಿಂದ ಅ.21ರವರೆಗೆ ಮೂರು ದಿನಗಳವರೆಗೆ ನಡೆಯುವ  ದಕ್ಷಿಣ ಭಾರತ ಸಿಬಿಎಸ್ಇ ಅಂತರ್ ಶಾಲಾ ಮಟ್ಟದ ಪಂದ್ಯಾವಳಿಯನ್ನು ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಬಾಗಲಕೋಟೆ ನಗರ ಯಾವತ್ತೂ ಹಾಕಿ ಕ್ರೀಡೆಗೆ ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ಹೊಂದಿದೆ.

       ಇಲ್ಲಿಯ ಆಟಗಾರರು ವಿಶ್ವಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಲಿ ಎಂದು ಶುಭ ಕೋರಿದರು ಈ ಸಮಾರಂಭದ ಅಧ್ಯಕ್ಷತೆಯನ್ನು ಬಾಗಲಕೋಟ ಮತಕ್ಷೇತ್ರದ ಜನಪ್ರಿಯ ಶಾಸಕರೂ ಹಾಗೂ   ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾಯರ್ಾಧ್ಯಕ್ಷರೂ ಆದ   ಡಾ. ವೀರಣ್ಣ ಸಿ. ಚರಂತಿಮಠರವರು ವಹಿಸಿದ್ದರು. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದಶರ್ಿಗಳಾದ ಮಹೇಶ. ಎನ್. ಅಥಣಿ ಹಾಗೂ ಕಾಲೇಜುಗಳ ಮಂಡಳಿಯ ಕಾಯರ್ಾಧ್ಯಕ್ಷರಾದ ಅಶೋಕ ಸಜ್ಜನ (ಬೇವೂರ), ಸಂಘದ ಪದಾಧಿಕಾರಿಗಳು, ಸಿಬಿಎಸ್ಇ ಪರಿವೀಕ್ಷರಾದ ಪ್ರಮೋದ ವ್ಹಿ.ಪಾಟೀಲ,  ಬಿ.ವಿ.ವಿ. ಸಂಘದ ಆಡಳಿತಾಧಿಕಾರಿಗಳಾದ ಪ್ರೊ. ಎನ್.ಜಿ.ಕರೂರ, ಬಿ.ಎಚ್.ಆರ್.ಡಿ ನಿದರ್ೇಕರಾದ ಪ್ರೊ. ಸಿದ್ದರಾಮ ಮನಹಳ್ಳಿ  ಮತ್ತಿತರು ಉಪಸ್ಥಿತರಿದ್ದರು.     ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹಾಕಿ ಕ್ರೀಡಾಪಟು ಹರೀಶ ಎಸ್. ಮುತಗಾರ ಅವರನ್ನು ಸತ್ಕರಿಸಲಾಯಿತು.

        ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನು  ಪ್ರಾಚಾರ್ಯರಾದ ಸಿ ಬಿ. ಸುರೇಶ ಹೆಗ್ಡೆ, ಪ್ರತಿಜ್ಞಾವಿಧಿಯನ್ನು ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಗುರುದತ್ತ ಕೋರಿಯವರು, ವಂದನಾರ್ಪಣೆ ಉಪ  ಪ್ರಾಚಾರ್ಯರಾದ ಮಂಗಳಗೌರಿ ಹೆಗ್ಡೆ, ಶಾಲೆಯ ವಿದ್ಯಾಥರ್ಿನಿಯರಾದ  ಪೃಥ್ವಿ ಹಾಗೂ ಸಂಜನಾ ನಿರೂಪಿಸಿದರು.