ಬೆಳಗಾವಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನೆ ಸಮಾರಂಭ

ಬೆಳಗಾವಿ, 18: ಯುವಜನರು ಕ್ರೀಡೆಯಲ್ಲಿ ಸೋಲು ಗೆಲುವು ಮಹತ್ವವಲ್ಲ ಭಾಗವಹಿಸುವುದು ಮಹತ್ವವಾಗಿದೆ. ಆಯಾ ತಾಲೂಕಿನಿಂದ ಬಂದಂತಹ ನೀವು ನಿಮ್ಮ ತಾಲೂಕನ್ನು ಪ್ರತಿನಿಧಿಸಿ ಕ್ರೀಡೆಯ ನಿಯಮಗಳಿಗೆ ಅನುಸಾರವಾಗಿ ಕ್ರೀಡೆಯಲ್ಲಿ ಭಾಗವಹಿಸ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಮ್ಮ ಜಿಲ್ಲೆಗೆ ಹೆಸರು ತರಲು ಪರಿಶ್ರಮ ಪಡಬೇಕೆಂದು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಆಶಾ ಐಹೊಳೆ ಕರೆಕೊಟ್ಟರು. 

  ಇಂದು(ಸೆ.18) ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ಧ್ವಜಾರೋಹಣ ಮಾಡುವುದರ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಪಟುಗಳಾದ ಕು. ತುಷಾರ್ ಭೇಕನೆ, ಕು. ಕಿರಣ ಲೋಹಾರ, ಕು. ಶ್ರೀನಾಥ ಆಣಿ, ಕು. ಮುಕುಲ್ ಜುವೇಕರ್ ಮೊದಲಾದವರು ಕ್ರೀಡಾಜ್ಯೋತಿಯನ್ನು ಮೈದಾನದಲ್ಲಿ ಸುತ್ತಿ ಮುಖ್ಯ ಅತಿಥಿಗಳಿಗೆ ಒಪ್ಪಿಸಿ ನಂತರ ಕ್ರೀಡಾಜ್ಯೊತಿ ಬೆಳಗಿಸಲಾಯಿತು. ಕ್ರೀಡಾಪಟುಗಳ ಪರವಾಗಿ ಪ್ರತಿಜ್ಞಾವಿಧಿಯನ್ನು ಅಖಿಲ್ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಪಟುವಾದ ಕು. ಶಿವಪ್ರಸಾದ ಮಂತುರಗಿಮಠ ರವರು ಭೋದಿಸಿದರು. 

ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಅರುಣ ಅ. ಕಟಾಂಬಳೆ, ಈ ಕ್ರೀಡಾಕೂಟದಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಅಥ್ಲೆಟಿಕ್ಸ್, ವಾಲಿಬಾಲ್, ಕಬಡ್ಡಿ, ಖೋಖೊ, ಬಾಸ್ಕೇಟಬಾಲ್, ಫುಟಬಾಲ್, ಹಾಕಿ, ಹ್ಯಾಂಡಬಾಲ್, ಥ್ರೋಬಾಲ್ ಇನ್ನಿತರೆ ಸ್ಪಧರ್ೆಗಳಲ್ಲಿ 1000 ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು 

ಉಪಸ್ಥಿತರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿಯ ಉಪ ನಿದರ್ೇಶಕರಾದ ಬಿ. ಶ್ರೀನಿವಾಸ್ ರವರು ಸ್ವಾಗತಿಸಿದರು. ಸೈಕ್ಲಿಂಗ್ ತರಬೇತಿದಾರರಾದ ಎಂ.ಪಿ.ಮರನೂರ ವಂದಿಸಿದರು. ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಸಿದ್ದಣ್ಣ ದುರದುಂಡಿ ನಿರೂಪಿಸಿದರು.