ಸಿರಿಮಳಿಗೆ ಉದ್ಘಾಟನೆ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಟಗೇರಿ: ಸಮೀಪದ ಕೌಜಲಗಿ ಗ್ರಾಮದಲ್ಲಿ ಸೋಮವಾರ ನ.18 ರಂದು ಮೂಡಲಗಿ ಕೇಂದ್ರ ಹಾಗೂ ಕೌಜಲಗಿ ವಲಯದ ಶ್ರೀಕ್ಷೇಧಗ್ರಾಯೋ, ಬಿಸಿ ಟ್ರಸ್ಟ್ ಹಾಗೂ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಹಯೋಗದಲ್ಲಿ ಸಿರಿಮಳಿಗೆ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

     ಮೂಡಲಗಿ ಕೇಂದ್ರ ಶ್ರೀಕ್ಷೇಧಗ್ರಾಯೋ ಯೋಜನಾಧಿಕಾರಿ ದೇವರಾಜ್.ಎಂ., ಅವರು ಸಿರಿಮಳಿಗೆ ಉದ್ಘಾಟನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮಸ್ಥಳದ ಡಾ.ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಿರಿ ಮಳಿಗೆಗಳನ್ನು ಗ್ರಾಮೀಣ ವಲಯದಲ್ಲಿ ತೆರೆಯಲಾಗಿದೆ. 

ಹಳ್ಳಿಗಳ ಜನರು ಸಿರಿ ಮಳಿಗೆ ಸದುಪಯೋಗಪಡೆದುಕೊಳ್ಳಬೇಕು ಎಂದರು.

     ಸ್ಥಳೀಯ ಯುವ ಧುರೀಣ ಮಹೇಶ ಪಟ್ಟಣಶೆಟ್ಟಿ ಮುಖ್ಯ ಅತಿಥಿಗಳಾಗಿ ಸಿರಿ ಮಳಿಗೆ ಉದ್ಘಾಟನೆ ನೆರವೇರಿಸಿದರು. ಬೆಳಗಾವಿ ಜಿಲ್ಲಾ-2 ಗೋಕಾಕ ಸಿರಿ ಜಿಲ್ಲಾ ಸಮನ್ವಯಾಧಿಕಾರಿ ಅಡಿವೆಪ್ಪ ಸಣಗೌಡರ ಅವರು ಸಿರಿ ಮಳಿಗೆಯಲ್ಲಿ ದೊರಕುವ ವಿವಿಧ ವಸ್ತುಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.     

    ಈ ವೇಳೆ ಕೌಜಲಗಿ ವಲಯದ ಮೇಲ್ವಿಚಾರಕ ಬಾಬುರಾವ್ ಗೋಣಿ, ಮೂಡಲಗಿ ಕೇಂದ್ರ ಕಛೇರಿಯ ಪ್ರಬಂಧಕ ಪರಶುರಾಮ ಗೆನನ್ನವರ, ಸುರೇಶ ಶೆಟ್ಟಿ, ಶ್ರೀಕಾಂತ ಕುಲಕಣರ್ಿ, ಪುಂಡಲೀಕ ಕಟ್ಟಿ, ಅಪ್ಪಣ್ಣ ಕರಗನ್ನಿ, ಚೇತನ ಕತ್ತಿಶೆಟ್ಟಿ, ವಿಜಯಕುಮಾರ ನಾಂವಿ, ಮಾಲಾ ಸುತಾರ, ಶೋಭಾ ದಳವಾಯಿ, ರಮೀಜಾ ಮಹಾತ್, ವಾಣಿಶ್ರೀ ತೆಲಂಗ, ನೇತ್ರಾ ಪಾಟೀಲ, ಜಮೀಲಾ.ಎಂ. ಸೇರಿದಂತೆ ಗ್ರಾಮಸ್ಥರು, ಕೌಜಲಗಿ ವಲಯದ ಶ್ರೀಕ್ಷೇಧಗ್ರಾಯೋ ಮಹಿಳಾ ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳು, ಸದಸ್ಯರು, ಮತ್ತೀತರರು ಇದ್ದರು.