ಲೋಕದರ್ಶನ ವರದಿ
ಶಿರಹಟ್ಟಿ 14: ಜೀವನದಲ್ಲಿ ಸ್ಪರ್ಧೆ ನಿರಂತರವಾಗಿದ್ದು, ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಸೋತರೆ ಎದೆಗುಂದದೇ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು ಹಾಗೂ ಸೋಲಿಗೆ ಎದೆಗುಂದದೇ ಸೋಲನ್ನು ಸವಾಲಾಗಿ ಸ್ವೀಕರಿಸಿದಲ್ಲಿ ಮಾತ್ರ ಗೆಲುವು ಕಾಣಲು ಸಾಧ್ಯವಾಗುತ್ತದೆ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚೀಗೇರಿ ಕರೆ ನೀಡಿದರು.
ಅವರು ಸ್ಥಳೀಯ ಎಫ್ಎಂ ಡಬಾಲಿ ತಾಲೂಕ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಅಡಿಯಲ್ಲಿ ನಡೆದ ದಸರಾ ಕ್ರೀಡಾಕೂಟಗಳನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕ್ರೀಡೆಗಳಲ್ಲಿ ಭಾಗವಹಿಸಿ ಯಶಸ್ಸು ಗಳಿಸಬೇಕು ಎನ್ನುವ ಸಲುವಾಗಿ ಕ್ರೀಡಾಪಟುಗಳು ಅವಿರತವಾಗಿ ಶ್ರಮಿಸುತ್ತಾರೆ, ಇಂಥಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಿನ್ನಡೆಯಾದಾಗ ಬೇಸರಪಟ್ಟುಕೊಂಡು ಮುಂದಿನ ಸ್ಪಧರ್ೆಗಳಲ್ಲಿ ಭಾಗವಹಿಸಲು ಹಿಂಜರಿಯುತ್ತಾರೆ, ಆದ ಕಾರಣ ಯಾವುದೇ ಕ್ರೀಡಾಪಟುಗಳಾಗಲೀ ಕ್ರೀಡೆಗಳಿಗೆ ಜೀವಕಳೆ ತುಂಬುವ ಮೂಲಕ ಗೆಲುವನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಸ್ಫಧರ್ಿಸಬೇಕು ಹಾಗೂ ಇತರ ಕ್ರೀಡಾಪಟುಗಳನ್ನು ಹುರುದುಂಬಿಸಿ ಕ್ರೀಡೆಗಳ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ದೇವಕ್ಕ ಲಮಾಣಿ, ತಾಪಂ ಅಧ್ಯಕ್ಷೆ ಸುಶೀಲವ್ವ ಲಮಾಣಿ, ಮಹೇಶ ಲಮಾಣಿ, ಥಾವರೆಪ್ಪ ಲಮಾಣಿ, ಶಿಕ್ಷಕರಾದ ಎಂ.ಡಿ ತಳ್ಳಳ್ಳಿ, ಬಿ.ಕೆ ದ್ಯಾವನಗೌಡರ, ಎಚ್.ಎಚ್ ದಾದನವರ, ಎಲ್.ಎಚ್ ಬಾಳೆ, ಎಂ.ಎಸ್ ಚಾಕಲಬ್ಬಿ, ಕೆ.ಪಿ ಪಾಟೀಲ, ಮಹಾಂತೇಶ ಬಳ್ಳಾರಿ, ಚನ್ನಪ್ಪ ಬೆಟಸೂರ, ಬಸವಣ್ಣೆಪ್ಪ ಹಡಪದ ಇನ್ನೂ ಅನೇಕ ಶಿಕ್ಷಕರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು