ಹೃದಯದಲ್ಲಿ ಅಂತಃಕರಣವುಳ್ಳವರು ಮಾತ್ರ ದೊಡ್ಡವರು: ಶ್ರೀಗಳು
Only those with compassion in their hearts are great: Sri
ಜಮಖಂಡಿ 27: ಸಂಪತ್ತು, ಅಧಿಕಾರ, ಅಪಾರ ವಿದ್ಯೆವುಳ್ಳವರು ದೊಡ್ಡವರಲ್ಲ. ಹೃದಯದಲ್ಲಿ ದಯೆ, ಪ್ರೀತಿ, ಕರುಣೆ, ಅಂತಃಕರಣವುಳ್ಳವರು ಮಾತ್ರ ದೊಡ್ಡವರು ಎಂದು ಓಲೆಮಠದ ಆನಂದ ದೇವರು ಶ್ರೀಗಳು ಹೇಳಿದರು.
ಶ್ರಾವಣ ಮಾಸದ ಪ್ರಯುಕ್ತ ನಗರದ ರುದ್ರಾವಧೂತ ಮಠದಲ್ಲಿ ಓಲೆಮಠದ ಆಶ್ರಯದಲ್ಲಿ ಹಮ್ಮಿಕೊಂಡಿರುವ ವಚನ ಶ್ರಾವಣದ ಮೊದಲ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ‘ದಯವೇ ಧರ್ಮದ ಮೂಲವಯ್ಯಾ’ ವಿಷಯ ಕುರಿತು ಮಾತನಾಡಿದ ಅವರು, ಜನರ ವೇದನೆಯನ್ನು ಕೇಳುವವರು, ಅಳುವವರ ಕಣ್ಣೀರು ಒರೆಸುವವರು ದೊಡ್ಡವರೆನಿಸಿಕೊಳ್ಳುತ್ತಾರೆ. ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂಬ ಭಾವನೆ ಹೊಂದಿರುವವರು ದೊಡ್ಡವರೆನಿಸಿಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ಪ್ರಾಣಿ, ಪಕ್ಷಿ, ಸಸ್ಯಕಾಶಿಗಳಲ್ಲಿ ಸಹ ದಯೆ ಇರಬೇಕು. ಪ್ರಾಣಿ ಬಲಿ ಕೊಡಬಾರದು ಎಂದು ಆಶೀರ್ವಚನ ನೀಡಿದರು.
ರುದ್ರಾವಧೂತ ಮಠದ ಸಹಜಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಎಲ್ಲವನ್ನು ಈಶ್ವರ ಭಾವದಿಂದ ನೋಡುವುದೇ ದಯೆ. ಸರ್ವ ಜಗದಲ್ಲಿ ಶಿವನನ್ನು ಕಾಣುವ ಸ್ಥಿತಿಯೇ ದಯೆ ಎಂದು ಆಶೀರ್ವಚನ ನೀಡಿದರು.
ಹುನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಎನ್.ವಿ. ಅಸ್ಕಿ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿ, ದಯೆ ಎಂದರೆ ಅನುಕಂಪ ಮತ್ತು ಸಹಾನುಭೂತಿ. ಇತರರ ನೋವುಗಳನ್ನು ಅರ್ಥ ಮಾಡಿಕೊಳ್ಳುವ ಮಾನವೀಯ ಮೌಲ್ಯವೇ ದಯೆ. ಧರ್ಮ ಎಂದರೆ ಆದರ್ಶ. ಸಮಾಜ, ದೈವವನ್ನು ಒಂದುಗೂಡಿಸುವ ದೃಷ್ಟಿಕೋನವೇ ಧರ್ಮ ಎಂದರು.
ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು ಸಾನ್ನಿಧ್ಯ ವಹಿಸಿದ್ದರು. ಚಂದ್ರಶೇಖರ ವೇದಪಾಠಕ ಹಾಗೂ ರಾಜು ಗಸ್ತಿ ಅವರನ್ನು ಸನ್ಮಾನಿಸಲಾಯಿತು. ಸರಸ್ವತಿ ಸಬರದ(ಹೆಗಡಿ) ಸಂಗೀತ ಸೇವೆ ಸಲ್ಲಿಸಿದರು. ಗೋಪಾಲ ತುಳಜಾಪೂರ ತಬಲಾ ಸಾಥ್ ನೀಡಿದರು. ಆರ್.ಎಸ್. ಲಗಳಿ ಸ್ವಾಗತಿಸಿ, ನಿರೂಪಿಸಿದರು. ಬಸವರಾಜ ಬಳಗಾರ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 