ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ

ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ Demand to implement old pension scheme

ಲೋಕದರ್ಶನ ವರದಿ

ವಿಜಯಪುರ ೨೨: ನೂತನ ಪಿಂಚಣಿ ಯೋಜನೆಯು ಮಾರುಕಟ್ಟೆ ಆಧಾರಿತವಾಗಿರುವುದರಿಂದ ಸರ್ಕಾರಿ ನೌಕರರ ನಿವೃತ್ತಿ ಭದ್ರತೆಗೆ ಧಕ್ಕೆಯಾಗುತ್ತಿದೆ. ನೌಕರರಲ್ಲಿ ಆರ್ಥಿಕ ಅಭದ್ರತೆ ಮತ್ತು ಭವಿಷ್ಯದ ಚಿಂತೆ ಉಂಟಾಗಿದೆ. ನಿವೃತ್ತಿ ನಂತರ ಅತಂತ್ರವಾಗುತ್ತಿರುವ ನೌಕರರ ಮತ್ತು ಅವಲಂಬಿತ ಕುಟುಂಬದ ಭದ್ರತೆಯ ದೃಷ್ಟಿಯಿಂದ ಸರ್ಕಾರವು ಕೂಡಲೇ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕೆಂದು ಡಾ. ಬಿ.ಎಂ.ಕೋರಬು ಅವರು ಅಭಿಪ್ರಾಯಪಟ್ಟರು.

ಅವರು ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಹಳೆಯ ಪಿಂಚಣಿ ಯೋಜನೆ ಬೇಡಿಕೆ ಸಲ್ಲಿಸುವ ಕುರಿತು ಜರುಗಿದ ಸಭೆಯಲ್ಲಿ ಮಾತನಾಡುತ್ತಿದ್ದರು.

ಅವರು ಮಾತನಾಡುತ್ತಾ, ೧-೪-೨೦೦೬ ನಂತರ ನೌಕರರಿಗೆ ಹೊಸ ಪಿಂಚಣಿ ಯೋಜನೆ (ಎನ್.ಪಿ.ಎಸ್.) ಜಾರಿಗೊಳಿಸಿದೆ. ಆದ್ದರಿಂದ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ನಿಶ್ಚಿತ ಪಿಂಚಣಿ ನೀಡುವ ಅಂದರೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ನಮ್ಮೆಲ್ಲರ ಬೇಡಿಕೆಯಾಗಿದೆ. ನಾವು ನಮ್ಮ ಮನವಿಯನ್ನು ವಿಜಯಪುರ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಶ್ರೀ ಸುರೇಶ ಶೆಡಶ್ಯಾಳ ಅವರ ಮುಖಾಂತರ ಸಲ್ಲಿಸಿ, ರಾಜ್ಯ ಸರ್ಕಾರವು ಓ.ಪಿ.ಎಸ್. ಪದ್ದತಿಯನ್ನು ಜಾರಿಗೊಳಿಸುವಂತೆ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.

ನಂತರ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕೆಂಬ ಬೇಡಿಕೆಯ ಮನವಿಯನ್ನು ಸುರೇಶ ಶೆಡಶ್ಯಾಳ ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ವಿಜಯಪುರ ಇವರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ಪ್ರಾಧ್ಯಾಪಕರಾದ ಡಾ. ಬಿ.ಎಂ.ಕೋರಬು, ಪ್ರೊ. ಆರ್.ಬಿ.ಶೀತೋಳೆ, ಡಾ. ಎಸ್.ಎಸ್.ಸಿದ್ದಾಪೂರ, ಡಾ. ಪಿ.ಎಂ.ಪರುಗೊAಡ, ಪ್ರೊ. ಎಂ.ಎಸ್.ಖೊದ್ನಾಪೂರ, ಪ್ರೊ. ಸಂಗಮೇಶ ಗುರವ, ಡಾ. ಎಸ್.ಬಿ.ಕಬಾಡೆ, ಡಾ. ಸಂತೋಷ ದಂಡ್ಯಾಗೋಳ, ಡಾ. ಎಸ್.ಪಿ.ಚವ್ಹಾಣ, ಡಾ. ಎಸ್.ಆರ್. ವಾಘಮೋರೆ, ಡಾ. ದೇವೇಂದ್ರಗೌಡ ಪಾಟೀಲ, ಪ್ರೊ. ಸುನೀಲ ಹತ್ತಿ ಇನ್ನಿತರರು ಸಹ ಉಪಸ್ಥಿತರಿದ್ದರು,