ನವೀಕರಿಸಬಹದಾದ ಇಂಧನಗಳ ಬಳಕೆಯಿಂದ ಮಾತ್ರ ಪರಿಹಾರ ಸಾಧ್ಯ ಸ್ವಸಹಾಯ ಸಂಘದ ಸದಸ್ಯರಿಗೆ ಕಾಯರ್ಾಗಾರದಲ್ಲಿ ಕುಲಕಣರ್ಿ

    ಬೋಕನೂರ 11: ಇಂದು ಜರುಗುತ್ತಿರುವ ಅನೇಕ ಪರಿಸರದ ಸಮಸ್ಯೆಗಳಿಗೆ ಮಾನವನ ದುರಾಸೆಯೆ ಕಾರಣ. ಹೆಚ್ಚುತ್ತಿರುವ ಮಾನವನ ಬೇಡಿಕೆಗಳು ಪರಿಸರವನ್ನು ನಾಶಮಾಡುತ್ತಿವೆ. ಆದ್ದರಿಂದ  ಭೂಮಿಯ ಮೇಲಿನ ಉಷ್ಣತೆ ಹೆಚ್ಚಾಗಿ ಸಮುದ್ರದ ನೀರಿನ ಮಟ್ಟವು ಹೆಚ್ಚಾಗಿತ್ತಿದೆ. ಅಲ್ಲದೇ ಹೆಚ್ಚು ಮಳೆ, ಪ್ರವಾಹ, ಮಣ್ಣಿನ ಸವಕಳಿ, ದ್ವೀಪಗಳ ಮುಳುಗುವಿಕೆ, ಬರಗಾಲ, ದಿನೇ ದಿನೇ ಹೆಚ್ಚುತ್ತಿರುವ ತೈಲ ಬೆಲೆ ಸಮಸ್ಯೆಗಳು ಉಂಟಾಗುತ್ತಿವೆ. ಈ ಎಲ್ಲ ಸಮಸ್ಯೆಗಳಿಂದ ಹೊರಬರಲು ನವೀಕರಿಸಬಹುದಾದ ಇಂಧನ ಮೂಲಗಳಾದ ಸೌರಶಕ್ತಿ, ಕಿರುಜಲಶಕ್ತಿ, ಜೈವಿಕ ಇಂಧನ, ಹಾಗೂ ಇತರೆ ಮುಗಿದುಹೋಗಲಾರದ ಶಕ್ತಿಯ ಬಳಕೆಯಿಂದ ಮಾತ್ರ ಪರಿಸರದ ಸಂರಕ್ಷಣೆ ಸಾಧ್ಯ ಎಂದು ಬೆಂಗಳೂರಿನ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ತರಬೇತಿ ಸಹಾಯಕ ವಿಕ್ರಮ ಕುಲಕಣರ್ಿ ಅಭಿಪ್ರಾಯಪಟ್ಟರು. 

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಂಟಿಯಾಗಿ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೋಕನೂರ ಗ್ರಾಮದಲ್ಲಿ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮಹಾತ್ಮಾ ಗಾಂದೀ ಸಂಸ್ಥೆಯು ಅನೇಕ ಮಹತ್ವದ ಕಾರ್ಯ ಕೈಗೆತ್ತಿಕೊಂಡಿದೆ. ಶಾಲಾ ಮಕ್ಕಳಿಗೆ ಜಾಗೃತಿ, ಚುನಾಯಿತ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತರಬೇತಿ, ಸಂಶೋಧನಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ಸಮಸ್ಯೆಗಳನ್ನು ಪರಿಹರಿಸಿ ಸುಸ್ಥಿರ ಪರಿಸರ ನಿಮರ್ಿಸಲು ಎಲ್ಲರ ಸಹಭಾಗಿತ್ವ ಅಗತ್ಯ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಹಿಳಾ ಕಲ್ಯಾಣ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಎನ್.ಡೋಣಿ ಮಾತನಾಡಿ ನೀರು ಜೀವನ ಸಂಜೀವಿನಿ. ಅಸಮರ್ಪಕ ಬಳಕೆಯಿಂದ ನೀರಿನ ಕೊರತೆಯಾಗುತ್ತಿದೆ ಆದಕಾರಣ  ಮಳೆ ನೀರು ಕೊಯ್ಲು ವಿಧಾನಗಳಳನ್ನು ಅಳವಡಿಸಿಕೊಂಡಲ್ಲಿ ನೀರಿನ ಸಮಸ್ಯೆ ಉಂಟಾಗುವದಿಲ್ಲವೆಂದರು. ಇನ್ನೂರ್ವ ಸಂಪನ್ಮೂಲ ವ್ಯಕ್ತಿ ಪ್ರದೀಪ ಪಟ್ಟಣಶೆಟ್ಟಿ ಸೌರಶಕ್ತಿ ಬಳಸಿಕೊಂಡು ಅಡುಗೆ ಮಾಡುವದು, ನೀರು ಕಾಯಿಸುವಿಕೆ, ಬೀದಿದೀಪಗಳ ಅಳವಡಿಕೆ ಬಗ್ಗೆ ಮಾಹಿತಿ ನೀಡಿದರು. ಕವಿತಾ ಅಕ್ಕಿ ಪರಿಸರ ಸಂರಕ್ಷಣೆ, ಕಸಗಳ ನಿರ್ವಹಣೆ, ಎರೆಗೊಬ್ಬರ ತಯಾರಿಕೆ ವಿಷಯಗಳ ಕುರಿತು ಹಾಗೂ ಸುರೇಖಾ ಪಾಟೀಲ ಸೋಲಾರ ದೀಪಗಳ ಅಳವಡಿಕೆ ಪರಿಸರ ಹಾಗೂ ಮಾನವನ ಆರೋಗ್ಯಕ್ಕಿರುವ ಸಂಬಂಧ, ಶುಚಿತ್ವಗಳ ವಿವರಿಸಿದರು.

ಅಧ್ಯಕ್ಷತೆಯನ್ನು ಎಸ್ಡಿಎಂ ಸಂಸ್ಥೆಯ ಯೋಜನಾಧಿಕಾರಿ ಪ್ರಭಾಕರ ನಾಯಿಕ                                     ವಹಿಸಿದ್ದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುರೇಖಾ ಕೋಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.