ಕೊಪ್ಪಳ 03: ಹಿಂಗಾರು ಹಂಗಾಮಿನ ಬೆಳೆ ಇತ್ಯರ್ಥ ಪಡಿಸಲು ಬೆಳೆ ಕಟಾವು ಬಹಳ ಮುಖ್ಯವಾಗಿದ್ದು, ಯೋಜನಾ ಪಟ್ಟಿಯಲ್ಲಿ ನೀಡಲಾದ ಬೆಳೆಗಳ ಸಮೀಕ್ಷೆಯನ್ನು ಮಾತ್ರ ಮಾಡಬೇಕು, ಯಾವುದೇ ಕಾರಣಕ್ಕೂ ಬೆಳೆ ಬದಲಾವಣೆಯನ್ನು ಮಾಡಬಾರದು ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಇಂದು (ಡಿ.03) ಹಮ್ಮಿಕೊಳ್ಳಲಾದ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳೊನ್ನೊಳಗೊಂಡ ಮೂಲ ಕಾರ್ಯಕರ್ತರಿಗೆ ಬೆಳೆ ಕಟಾವು ಪ್ರಯೋಗಗಳ ತರಬೇತಿ ಕಾಯರ್ಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬೆಳೆ ಕಟಾವು ಪ್ರಯೋಗಗಳನ್ನು ಮೂಲಕಾರ್ಯಕರ್ತರೇ ಕಡ್ಡಾಯವಾಗಿ ಕೈಗೊಳ್ಳಬೇಕು, ವಿನಃ ತಮ್ಮ ಪರವಾಗಿ ಬೇರೆಯಾರನ್ನು ಕಳುಹಿಸಿ ಕಟಾವು ಪ್ರಯೋಗವನ್ನು ಕೈಗೊಳ್ಳಬಾರದು. ಯಾವುದೇ ಸಂದರ್ಭದಲ್ಲಿಯೂ ಕಟಾವು ಪ್ರಯೋಗಗಳು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಮೂಲಕಾರ್ಯಕರ್ತರು ಕಡ್ಡಾಯವಾಗಿ ವಿಮಾಕಂಪನಿಯ ಪ್ರತಿನಿಧಿಗೆ ಒಂದು ದಿನ ಮುಂಚೆ ತಿಳಿಸುವುದು ಹಾಗೂ ನಿಯಮಾನುಸಾರ ಕಟಾವು ಪ್ರಯೋಗಗಳನ್ನು ಕೈಗೊಳ್ಳಬೇಕು. ಮೂಲಕಾರ್ಯಕರ್ತರು ಪ್ರತಿ ಪ್ರಯೋಗಕ್ಕೆ ಮೂಲ ಸವರ್ೇ ನಂಬರ ಸೇರಿದಂತೆ ಹೆಚ್ಚುವರಿಯಾಗಿ 4 ಸವರ್ೇ ನಂಬರಗಳನ್ನು ಅಳವಡಿಸುವುದು ಕಡ್ಡಾಯವಿದೆ. ಮೇಲ್ವಿಚಾರಣಾಧಿಕಾರಿ ಎಂದು ನೇಮಕ ಮಾಡಲಾಗಿರುವ ವಿವಿಧಇಲಾಖೆಯ ಅಧಿಕಾರಿಗಳು ಕಟಾವಿನ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು. ನಮೂನೆ-1ನ್ನು ಮಾಡುವಾಗ ಸವರ್ೇ ನಂಬರ ಮಧ್ಯದಲ್ಲಿ ನಿಂತು, ಜಿಪಿಎಸ್ ಲೋಕೇಷನ್ ಆನ್ ಮಾಡಬೇಕು. ನಮೂನೆ-1ನ್ನುಉಳಿಸಿ ನಂತರ ಅಲ್ಲಿಯೇ ಜಿಪಿಎಸ್ ಲೋಕೇಷನ್ ಆಫ್ ಮಾಡಲೇಬೇಕು. ಇದು ಕಡ್ಡಾಯವಾರುತ್ತದೆ. ಇಲ್ಲದಿದ್ದರೆ, ನಮೂನೆ-2 ನ್ನು ಮಾಡಲು ಸಾಧ್ಯವಿರುವುದಿಲ್ಲ. ಕಟಾವು ಪ್ರಯೋಗಗಳನ್ನು ಕೈಗೊಂಡ ನಂತರ ಇಳುವರಿ ದಾಖಲಿಸುವಾಗ ವಿಶೇಷ ಎಚ್ಚರಿಕೆ ಯಿಂದ ದಾಖಲಿಸಿ ಖಚಿತಪಡಿಸಿಕೊಳ್ಳಬೇಕು. ಕಟಾವು ಪ್ರಯೋಗಗಳ ಛಾಯಾಚಿತ್ರವನ್ನು ತೆಗೆಯುವಾಗ ಮೂಲಕಾರ್ಯಕರ್ತರು ಛಾಯಾಚಿತ್ರದಲ್ಲಿರಬೇಕು ಎಂದು ಸೂಚನೆ ನೀಡಿದರು.
ಜಂಟಿ ಕೃಷಿ ನಿದರ್ೇಶಕಿ ಶಬಾನಾ ಎಂ. ಶೇಖ್ ಅವರು ಮಾತನಾಡಿ, ಬೆಳೆ ಕಟಾವು ಕೈಗೊಳ್ಳುವ ಮೂಲಕಾರ್ಯಕರ್ತರು, ರೈತರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಕಟಾವು ದಿನಾಂಕವನ್ನು ಖಚಿತ ಪಡಿಸಿಕೊಳ್ಳಬೇಕು. ಇಳುವರಿ ಪ್ರಮಾಣವನ್ನು ಸರಿಯಾಗಿದಾಖಲಿಸುವುದು ಹಾಗೂ ನಿಯಮಾನುಸಾರ ಕಟಾವೂ ಮಾಡದಿದ್ದರೆ ವಿಮಾಕಂಪನಿಯವರು ಆಕ್ಷೇಪಣೆಯನ್ನು ಸಲ್ಲಿಸುವರು. ಆಕ್ಷೇಪಣೆಯನ್ನು ಸಲ್ಲಿಸಿದ ನಂತರ ವಿಚಾರಣೆಗಾಗಿ ಸಂಬಂಧಿಸಿದ ಮೂಲಕಾರ್ಯಕರ್ತರ ಜೊತೆಗೆ ಆಯಾ ಇಲಾಖೆಯ ತಾಲ್ಲೂಕ ಮಟ್ಟದ ಅಧಿಕಾರಿಗಳು ಮತ್ತು ವಿಮಾಕಂಪನಿಯವರು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಹಾಜರಾಗಬೇಕು. ನಂತರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮುಂದಿನ ಕಾರ್ಯ ಕೈಗೊಳ್ಳುವುದು. ಬೆಳೆ ಧೃಡೀಕರಣ ಪತ್ರಕ್ಕೆ ಸಹಿ ಮಾಡುವ ಮೊದಲು ತಹಶೀಲ್ದಾರರು, ಸಹಾಯಕ ಕೃಷಿ ನಿದರ್ೇಶಕರು, ತೋಟಗಾರಿಕೆ ಅಧಿಕಾರಿಗಳು ರೈತರು ಅಲ್ಲಿ ಬೆಳೆ ವಿಮಾ ದಾಖಲಿಸಿದ ಬಗ್ಗೆ ಪರಿಶೀಲಿಸಿದ ನಂತರವೇ ಧೃಡೀಕರಿಸುವುದು. ಇಳುವರಿ ಶೂನ್ಯ '0' ಬಂದರೆ, ಕಡ್ಡಾಯವಾಗಿ ಪಂಚನಾಮೆ ವರದಿಯನ್ನು ಬರೆದು ಸಂಬಂಧ ಪಟ್ಟ ರೈತರ ಸಹಿ ಹಾಗೂ ವಿಮಾಕಂಪನಿಯ ಪ್ರತಿನಿಧಿಗಳ ಸಹಿಯನ್ನು ಪಡೆದು ತಂತ್ರಾಂಶದಲ್ಲಿ ಅಪಲೋಡ್ ಮಾಡಬೇಕು. ಯಾವುದೇ ತಾಂತ್ರಿಕ ಅಥವಾ ಸಮಸ್ಯೆ ಉಂಟಾದಲ್ಲಿ ಸಹಾಯವಾಣಿ ಸಂಖ್ಯೆ: 7813019907 ಹಾಗೂ 08539-221869, 8762302963, ಇವುಗಳಿಗೆ ಸಂಪಕರ್ಿಸಬೇಕು ಎಂದು ಹೇಳಿದರು.
ನಮೂನೆ-1ನ್ನು ಅಪಲೋಡ್ ಮಾಡುವ ಸಂದರ್ಭದಲ್ಲಿ ಒಂದು ಪ್ರಯೋಗಕ್ಕೆ ಕಡ್ಡಾಯವಾಗಿ 5 ಸರ್ವೇ ನಂಬರಗಳನ್ನು ಅಳವಡಿಸಿ ಅಪಲೋಡ್ ಮಾಡಬೇಕು. ನಮೂನೆ-1ರ ಛಾಯಾಚಿತ್ರ (ಪೋಟೋ)ದಲ್ಲಿ ಕಡ್ಡಾಯವಾಗಿ ಮೂಲಕಾರ್ಯಕರ್ತರು ಇರಬೇಕು. ನಮೂನೆ-1ರ ಛಾಯಾಚಿತ್ರ ಸೆರೆ ಹಿಡಿದ ಸ್ಥಳದಲ್ಲಿಯೇ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಸಂಬಂಧಿಸಿದ ಸವರ್ೇ ನಂಬರನಲ್ಲಿಯೇ ಕಡ್ಡಾಯವಾಗಿ ಮಾಹಿತಿಯನ್ನು ಉಳಿಸುವುದು. ಒಂದು ವೇಳೆ ಬೇರೆ ಸ್ಥಳದಲ್ಲಿ ಮಾಹಿತಿಯನ್ನು ಉಳಿಸಿ ಅಪಲೋಡ್ ಮಾಡಿದರೆ ನಮೂನೆ-2ನ್ನು ಕೈಗೊಳ್ಳುವ ಸಂದರ್ಭದಲ್ಲಿ ಹೊಂದಾಣಿಕೆ ಸಮಸ್ಯೆಉಂಟಾಗುತ್ತದೆ. ಮೂಲಕಾರ್ಯಕರ್ತರು, ರೈತರೊಂದಿಗೆ ನಿರಂತರವಾಗಿ ಸಂಪರ್ಕವನ್ನು ಇಟ್ಟುಕೊಂಡು ಯಾವದೇ ಕಾರಣಕ್ಕೂ ಪ್ರಯೋಗಗಳು ನಷ್ಟಗೊಳ್ಳದಂತೆ ಮುಂಜಾಗ್ರತೆಯನ್ನು ವಹಿಸಬೇಕು ಎಂದು ತಿಳಿಸಿದರು.
ಕಾಟಾವು ದಿನಾಂಕದ ಕನಿಷ್ಟ 1 ದಿನ ಮುಂಚಿತವಾಗಿ ಮೂಲಕಾರ್ಯಕರ್ತರು ವಿಮಾ ಕಂಪನಿ ಅಧಿಕಾರಿಗಳಿಗೆ ಕಟಾವಿನ ಕುರಿತು ಮಾಹಿತಿಯನ್ನು ನೀಡುಬೇಕು. ನಮೂನೆ-1 ರ ಸವರ್ೇ ನಂಬರನಲ್ಲಿರುವ ಬೆಳೆಯು ಮಳೆಯ ಕೊರತೆಯಿಂದಾಗಿ ಕಟಾವು ಹಂತ ತಲುಪುವ ಮುಂಚಿತವಾಗಿಯೇ ಬೆಳೆ ಒಣಗಿ ಹೋದ ಸಂದಂರ್ಭದಲ್ಲಿ ಮೂಲಕಾರ್ಯಕರ್ತರು ವಿಮಾ ಕಂಪನಿ ಅಧಿಕಾರಿ ಅಥವಾ ಪ್ರತಿನಿಧಿಯೊಂದಿಗೆ ಸಂಬಂಧಿಸಿದ ಸವರ್ೇ ನಂಬರಗೆ ಭೇಟಿ ನೀಡಿ ಪರಿಶೀಲಿಸಿ, ನಮೂನೆ-2 ರಲ್ಲಿಶೂನ್ಯ (0) ಇಳುವರಿ ದಾಖಲಿಸಿ ಗ್ರಾಮದ ಪಂಚರ ಸಮಕ್ಷಮದಲ್ಲಿ ಪಂಚನಾಮೆಯ ವರದಿಯನ್ನು ತಯಾರಿಸಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಮೂಲಕಾರ್ಯಕರ್ತರು, ರೈತರೊಂದಿಗೆ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ನಮೂನೆ-1ರಲ್ಲಿ ಕಟಾವು ದಿನಾಂಕವನ್ನುಅಪಡೇಟ್ ಮಾಡುತ್ತಿರ ಬೇಕು. ನಮೂನೆ-2 ರಲ್ಲಿ ಒಂದು ಸಲ ದಾಖಲಾದ ಇಳುವರಿಯನ್ನು ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಲು ಬರುವುದಿಲ್ಲಾ. ಇಳುವರಿ ಮಾಹಿತಿಯನ್ನು ಅತೀಜಾಗೂರಕರಾಗಿ ದಾಖಲಿಸಬೇಕು. (ಉದಾ:(1) ಕೆ.ಜಿ 004 ಗ್ರಾಂ.300.) ಬೆಳೆ ಕಟಾವುಕೈಗೊಂಡ ದಿನವೇ ನಮೂನೆ-2ರ ಮಾಹಿತಿಯನ್ನು ಸಂಪೂರ್ಣವಾಗಿ ಭತರ್ಿಮಾಡಿಅಪಲೋಡ್ ಮಾಡಬೇಕು. ತಾಂತ್ರಿಕ ಸಮಸ್ಯೆ ಉಂಟಾದಲ್ಲಿ ಸಿಸಿಇ ಸಹಾಯವಾಣಿ ಸಂಖ್ಯೆ 7813019907 ಸಂಪಕರ್ಿಸಬಹುದು ಎಂದು ಹೇಳಿದರು.
ಕಾಯರ್ಾಗಾರದಲ್ಲಿ ತೋಟಗಾರಿಕೆ ಇಲಾಖೆ ಉಪನಿದರ್ೇಶಕ ಕೃಷ್ಣ ಉಕ್ಕುಂದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬೆಳೆ ಕಟಾವು ಮೂಲ ಕಾರ್ಯಕರ್ತರು ಉಪಸ್ಥಿತರಿದ್ದರು. ಮೆಕ್ಕೆಜೋಳ, ಜೋಳ, ಶೇಂಗಾ, ಹುರಳಿ, ಉರಕಡ್ಲೆ, ಸೂರ್ಯಕಾಂತಿ, ತೊಗರಿ ಹಾಗೂ ಇತರೆ ಬೆಳೆಗಳ ಕಟಾವು ಕುರಿತು ಪ್ರಯೋಗಿಕವಾಗಿ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.