ಉನ್ನತ ವ್ಯಕ್ತಿಗಳ ಮಾದರಿ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರಯಶಸ್ಸು ಸಾಧ್ಯ : ಮಲ್ಲಿಕಾರ್ಜುನ ಸಂಶಿ

Only success is possible when the exemplary qualities of superiors are adopted : Mallikarjuna Samshi

ಶಿಗ್ಗಾವಿ27  : ವಿಧ್ಯಾರ್ಥಿಗಳು ಉನ್ನತ ವ್ಯಕ್ತಿಗಳ ಮಾದರಿ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರಯಶಸ್ಸು ಸಾಧ್ಯಎಂದು ನಿವೃತ್ತ ನ್ಯಾಯದೀಶ ಮಲ್ಲಿಕಾರ್ಜುನ ಸಂಶಿ ಹೇಳಿದರು. 

ಪಟ್ಟಣದ ಐತಿಹಾಸಿಕ ಪಿ.ಎಂ.ಶ್ರೀ ಸರಕಾರಿ ಮಾದರಿಕನ್ನಡಗಂಡು ಮಕ್ಕಳ ಶಾಲೆ ನಂ 1ರಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದಅವರು ಒಂದೇ ವೃತ್ತಿಆಯ್ಕೆಮಾಡದೇ ಬೇರೆ ಬೇರೆ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಿರಿ ಅಂದಾಗಜೀವನ ನಿರ್ವಹಣೆ ಸುಗಮವಾಗುತ್ತದೆಅಲ್ಲದೇಯಾವುದೇ ವೃತ್ತಿಯನ್ನು ಅಲ್ಲಗಳಿಯದಿರಿ ಜೊತೆಗೆ ಮಕ್ಕಳಿಗೆ ಜಿಂಕ್‌ಆಹಾರದ ಬದಲು ಪೌಷ್ಠಿಕಾಂಶಯುಕ್ತಆಹಾರದಕಡೆಗೆ ಪಾಲಕರು ಗಮನ ಹರಿಸಬೇಕುಎಂದು ಕಿವಿಮಾತು ಹೇಳಿದರು.

176 ವರ್ಷಗಳ ಇತಿಹಾಸವಿರುವ ಈ ಐತಿಹಾಸಿಕ ಶಾಲೆಯಲ್ಲಿ ಅನೇಕ ಮೇಧಾವಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದ್ದರ ಪರಿಣಾಮ ಈ ಶಾಲೆಯ ಅನೇಕ ವಿಧ್ಯಾರ್ಥಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. 

ಈ ಶಾಲೆ ಹಳೆಯ 1967ರ ವಿದ್ಯಾರ್ಥಿ ಹಾಗೂ ನಿವೃತ್ತ ನ್ಯಾಯಾಧೀಶ ಮಲ್ಲಿಕಾರ್ಜುನ ಸಂಶಿ. 

ವಿರಕ್ತಮಠದ ಸಂಗನಬಸವ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆರ್ಶಿವಚನ ನೀಡಿದವರು ಖಾಸಗೀ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ವ್ಯಾಸಂಗ ಮಾಡಿಸುವ ಬದಲುಕನ್ನಡ ಶಾಲೆಗಳಿಗೆ ಕಳುಹಿಸಿರಿ ಅಲ್ಲದೇಕನ್ನಡ ಶಾಲೆಯಲ್ಲಿ ನೈತಿಕತೆಇದೆಎಂದರು.ಮುಖ್ಯೋಪಾದ್ಯಾಯಎಂ.ಕೆ.ದೇವಕಿಗೌಡ್ರ ವರದಿ ವಾಚಿಸಿದರು.ಪುರಸಭೆ ಸದಸ್ಯ ಪರುಶರಾಮ ಸೊನ್ನದ ಮಾತನಾಡಿದರು.ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುಎಲ್ಲರನ್ನು ಮನರಂಜಿಸಿದರು. 

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಸಿ.ಆರ್‌.ಪಿ ಎಸ್‌.ವಾಯ.ಮಿಸಿ, ಬಿ.ಬಿ.ಕಟ್ಟಿಮನಿ,ಸಾವಿತ್ರಿ ಎಸ್‌.ಡಿ.ಎಂ.ಸಿ ಅಧ್ಯಕ್ಷ ಮಹಾರುದ್ರಪ್ಪ ಕೊಡ್ಲಿವಾಡ, ಉಪಾದ್ಯಕ್ಷೆ ಪವಿತ್ರಾ ಹಾವೇರಿ, ಸದಸ್ಯರಾದ ಸಾವಿತ್ರಿಕಮ್ಮಾರ, ರಾಜು ಬಿಂದ್ಲಿ, ಪ್ರಕಾಶ ಬಾವಿಕಟ್ಟಿ, ಸಂಕಪ್ಪಗಂಟೆಪ್ಪನವರ, ಮಂಜುನಾಥ ಬಂಡಿವಡ್ಡರ, ಹನುಮಂತಪ್ಪ ಧಾರವಾಡ, ರೇಖಾ ಪೂಜಾರ, ಮಮತಾ,ಭಜಂತ್ರಿ, ಮೆಹಬೂಬಿ, ಅಶೋಕ ಓಲೇಕಾರ, ಸಂಜೀವ ಮಣ್ಣಣ್ಣವರ, ವಿ.ಎಸ್‌.ಭದ್ರಶೆಟ್ಟಿ, ಹೇಮಾ ಪೂಜಾರ, ಧರ್ಮರಾಜ ಬಡಿಗೇರ, ಸೇರಿದಂತೆ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.