ಮೇಘಾಲಯದಲ್ಲಿ ಕೇವಲ ಒಂದು ಕೊರೊನವೈರಸ್ ಪ್ರಕರಣ ಸಕ್ರಿಯ

ಶಿಲ್ಲಾಂಗ್‍, ಮೇ 13,ಮೇಘಾಲಯದಲ್ಲಿ ಕೊರೊನವೈರಸ್‍ ಸೋಂಕು ಸತತ ನಾಲ್ಕು ಬಾರಿ ದೃಢಪಟ್ಟಿದ್ದ ಮಹಿಳೆಯೊಬ್ಬರಿಗೆ ಆರನೇ ಪರೀಕ್ಷೆಯಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟ ನಂತರ ರಾಜ್ಯದಲ್ಲಿ ಕೇವಲ ಒಂದು ಸೋಂಕು ಪ್ರಕರಣ ಸಕ್ರಿಯವಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ‘24 ತಾಸಿನ ನಂತರ 11ನೇ ಪ್ರಕರಣವನ್ನು ಪರೀಕ್ಷಿಸಲಾಗಿದೆ. ಈ ಪರೀಕ್ಷೆಯಲ್ಲಿ ಮಹಿಳೆಗೆ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಮಾರ್ಗಸೂಚಿಗಳಂತೆ ಆಕೆ ಗುಣಮುಖರಾಗಿದ್ದಾರೆ. ಸದ್ಯ, ಮೇಘಾಲಯದಲ್ಲಿ ಕೇವಲ ಒಂದು ಸಕ್ರಿಯ ಪ್ರಕರಣವಿದೆ.’ ಎಂದು ಮುಖ್ಯಮಂತ್ರಿ ಕಾನ್ರಾಡ್‍ ಸಂಗ್ಮಾ ಮಂಗಳವಾರ ತಡ ರಾತ್ರಿ ತಿಳಿಸಿದ್ದಾರೆ.

ಈ ಮಹಿಳೆ ಮೇಘಾಲಯದಲ್ಲಿ ಮೊದಲು ಪತ್ತೆಯಾದ ಮತ್ತು ನಂತರ ಸೋಂಕಿನಿಂದ ಸಾವನ್ನಪ್ಪಿದ ಕೊವಿಡ್‍-19 ರೋಗಿ ಡಾ ಜಾನ್‍ ಎಲ್‍ ಸೈಲೊ ರಿಂತತಿಯಾಂಗ್‍ ಕುಟುಂಬ ಸ್ನೇಹಿತೆಯಾಗಿದ್ದಾರೆ. ಈಕೆಗೆ ಏಪ್ರಿಲ್‍ 15ರಂದು ಮೊದಲು ಸೋಂಕು ದೃಢಪಟ್ಟಿತ್ತು. ಡಾ ಸೈಲೊ ಅವರಿಗೆ ಏಪ್ರಿಲ್‍ 13ರಂದು ಸೋಂಕು ದೃಢಪಟ್ಟು ಏಪ್ರಿಲ್‍ 15ರಂದು ಸಾವನ್ನಪ್ಪಿದ್ದರು. ಇದುವರೆಗೆ ರಾಜ್ಯದಲ್ಲಿ 13 ಕೊವಿಡ್‍-19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಒಬ್ಬರು ಸಾವನ್ನಪ್ಪಿದ್ದರೆ, 10 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದೀಗ ರಾಜ್ಯದಲ್ಲಿ ಮೊದಲ ಬಾರಿಗೆ ಪತ್ತೆಯಾದ ವ್ಯಕ್ತಿಯ ಸಂಪರ್ಕದಲ್ಲಿದ್ದ ಪ್ರಕರಣ ಸಕ್ರಿಯವಾಗಿದೆ. ಶನಿವಾರ ಸೋಂಕು ದೃಢಪಟ್ಟ ಮಹಿಳೆಯು ಪ್ರಾಥಮಿಕ ಸಂಪರ್ಕ ಪ್ರಕರಣಗಳ ಪೈಕಿ ಒಬ್ಬರಾಗಿದ್ದಾರೆ.