ಜ್ಞಾನವನ್ನು ಹಂಚಿದರೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ

ಲೋಕದರ್ಶನ ವರದಿ

ಶೇಡಬಾಳ 03: ಭಾರತೀಯ ಪರಂಪರೆ ಜಗತ್ತಿಗೆ ಮಾದರಿ, ಜ್ಞಾನವನ್ನು ಹಂಚಿದರೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ. ಜ್ಞಾನ ಪರಂಪರೆಯೆನ್ನುವುದು ಸ್ವಾರ್ಥರಹಿತವಾದ ಸೇವೆ. ಮನುಷ್ಯ ಸಮಾಜ ಜೀವಿ ಸಮಾಜದ ಒಳಿತಕ್ಕಾಗಿ ಆತ ಕೊಡುಗೆ ನೀಡಲೇಬೇಕು. ಜ್ಞಾನ ಮತ್ತು ಧ್ಯಾನವನ್ನು ಇವತ್ತಿನ ಆಧುನಿಕ ಸನ್ನಿವೇಶದಲ್ಲಿ ವ್ಯಾಪಾರವಾಗಿ ಬಳಸದೇ ಸನ್ಮಾನಕ್ಕಾಗಿ ಬಳಸಬೇಕಾಗಿದೆ ಎಂದು ಉಚ್ಛನ್ಯಾಯಾಲಯ ಬೆಂಗಳೂರಿನ ನ್ಯಾಯವಾದಿಗಳಾದ ಶ್ರೀಧರ ಪ್ರಭು ಹೇಳಿದರು.

ಅವರು ಸೋಮವಾರ ದಿ. 2 ರಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಬೌದ್ಧಿಕ ಆಸ್ತಿ ಹಕ್ಕು ವಿಷಯದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕೀರಣದಲ್ಲಿ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡುತ್ತಾ ಮುಂದುವರೆದು ಬೀಜ ಸಂರಕ್ಷಣಾ ಕಾಯ್ದೆ 2019, ಹಕ್ಕು ಪತ್ರ ಕಾಯ್ದೆಯ ಕುರಿತು ಹೇಳುತ್ತಾ ಜ್ಞಾನಕ್ಕೆ ಬೇಲಿ ಹಾಕಿ ಜ್ಞಾನವಂಚಿತರಾಗಿ ಮಾಡುವುದರ ಬದಲಾಗಿ ಜ್ಞಾನ ಪ್ರಸಾರ ಮಾಡಲು ಮುಂದಾಳತ್ವ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.    

ಇದೇ ಸಂದರ್ಭದಲ್ಲಿ ಕುಡಚಿಯ ಜನಪ್ರೀಯ ಶಾಸಕರಾದ ಪಿ. ರಾಜೀವ ಅವರು ವಿದ್ಯಾರ್ಥಿಗಳಿಗೆ ಉದ್ಧೇಶಿಸಿ ಮಾತನಾಡುತ್ತಾ ಮನುಷ್ಯ ಪ್ರಾಣಿ ದುಷ್ಚಟಗಳಿಗೆ ಬಲಿ ಬೀಳಲು ಹಲವಾರು ಕಾರಣಗಳಿವೆ. ಕೆಲವರು ಸಮಾಜದ ಪ್ರಭಾವದಿಂದ, ಭ್ರಮನಿರಸನ ಮತ್ತು ಶೋಕಿಗಾಗಿ ದುಷ್ಚಟಗಳನ್ನು ಮಾಡುತ್ತಾರೆ. ವಿದ್ಯಾರ್ಥಿಗಳು ಈ ರೀತಿ ಮಾಡದೇ ಆಧ್ಯಾತ್ಮದ ಕಡೆ ಒಲವು ತೋರಿಸಿ ಅಸಾಧ್ಯವಾದ ವಿಷಯಗಳನ್ನು ಸಾಧ್ಯವನ್ನಾಗಿ ಪರಿವರ್ತಿಬೇಕಾಗಿದೆ. ಆತ್ಮ ವಿಶ್ವಾಸ ಮತ್ತು ಸ್ವನಿಯಂತ್ರಣ ಹೊಂದಿದ ವ್ಯಕ್ತಿ ಜಗತ್ತಿನ ಯಾವುದೇ ಕಾರ್ಯವನ್ನು ಸಾಧ್ಯಗೊಳಿಸಬಲ್ಲ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಎಸ್.ಓ.ಹಲಸಗಿಯವರು ಗುಣಮಟ್ಟದ ಶಿಕ್ಷಣ ನೀಡಲು ಮತ್ತು ಮಹಾವಿದ್ಯಾಲಯದ ಸ್ಥಾಪನೆಗಾಗಿ ಮಹಾತ್ಮರ ತ್ಯಾಗ ಮತ್ತು ಬಲಿದಾನ ಅವಿಸ್ಮರಣೀಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಏಕನ್ಯಾಸಧಾರಿಗಳಾದ ಪ.ಪೂ.ಶ್ರೀ. ಯತೀಶ್ವರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ವೇದಿಕೆ ಮೇಲೆ ವಿಜ್ಞಾನ ವಿಭಾಗದ ಸಂಯೋಜಕರಾದ ಪ್ರೊ. ಕೆ.ಜೆ.ದೇಸಾಯಿ, ಆದರ್ಶ ವಿದ್ಯಾರ್ಥಿ  ಕು. ಸುಧೀರ ಬೇಡರ, ಆದರ್ಶ ವಿದ್ಯಾಥರ್ಿನಿ ಕು. ಮೇಘಾ ಜಾಧವ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ವರ್ಗದ ಜೊತೆಗೆ ಸುತ್ತ ಮುತ್ತಲಿನ ಪ್ರಾಥಮಿಕ, ಪ್ರೌಢ ಮತ್ತು ಪದವಿ-ಪೂರ್ವ ವಿಭಾಗದ ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಡಾ.ಎಸ್.ಎ.ಕಕರ್ಿ ಸ್ವಾಗತ ಮತ್ತು ಪರಿಚಯಿಸಿದರು. ಪ್ರೊ. ವ್ಹಿ.ಬಿ.ಬುರ್ಲೆ  ವಂದಿಸಿದರು. ಪ್ರೊ. ಎ.ಎಂ.ಜಕ್ಕಣ್ಣವರ ನಿರೂಪಿಸಿದರು.