ಫುಟ್ಬಾಲ್ ರೆಫರಿಗಳಿಗೆ ಆನ್ ಲೈನ್ ತರಬೇತಿ: ಎಐಎಫ್ಎಫ್

ನವದೆಹಲಿ, ಏ 10, ಕೋವಿಡ್-19 ರೋಗ ತಡೆಗಟ್ಟಲು ದೇಶಾದ್ಯಂತ ದಿಗ್ಬಂಧನ ವಿಧಿಸಲಾಗಿದೆ. ಇದರಿಂದಾಗಿ ಕ್ರೀಡಾ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿವೆ. ಈ ಹಿನ್ನೆೆಲೆಯಲ್ಲಿ ಅಖಿಲ ಭಾರತ  ಫುಟ್ಬಾಲ್ ಒಕ್ಕೂಟ (ಎಐಎಫ್ಎಫ್) ದೇಶದ ಬೇರೆ ಬೇರೆ ಸ್ಥಳಗಳಲ್ಲಿರುವ ತನ್ನ ರೈಫರಿಗಳಿಗೆ ಆನ್ ಲೈನ್ ತರಗತಿಗಳ ಮೂಲಕ ಮಾರ್ಗದರ್ಶನ ನೀಡುತ್ತಿದೆ. ಮೂರು ಮತ್ತು ನಾಲ್ಕನೇ ಹಂತದ 60 ರೆಫರಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಎ ಬ್ಯಾಚ್ ಗೆ ಅನುಭವಿಗಳಾದ ಸುರೇಶ್ ಶ್ರೀನಿವಾಸನ್ ಮತ್ತು ಭಾಸ್ಕರ್ ತರಬೇತಿ ನೀಡಿದರೆ, ಬಿ ಬ್ಯಾಚ್ ಗೆ ರಿಜ್ವಾನ್  ಉಲ್ ಹಕ್ ಮತ್ತು ಅಂಥೋನಿ ಡಿಕೋಸ್ಟಾ ತರಬೇತಿ ಕೋಡುತ್ತಿದ್ದಾರೆ. ಈ ನಾಲ್ವರು ಫಿಫಾದ ಮಾಜಿ ರೆಫರಿಗಳಾಗಿದ್ದಾರೆ.