ಬೆಂಗಳೂರು : ಆನ್ ಲೈನ್ ರಿಯಾಯಿತಿ ಪಾಸ್ ಗಳಿಗೆ ವಿದ್ಯಾರ್ಥಿಗಳಿಂದ ವ್ಯಾಪಕ ಪ್ರತಿಕ್ರಿಯೆ ಸ್ವೀಕರಿಸಿರುವ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ನಿಗಮ) ಕಾಲೇಜು ವಿದ್ಯಾರ್ಥಿಗಳಿಗೆ ಆನ್ ಲೈನ್
ವಿದ್ಯಾರ್ಥಿ ಬಸ್ ಪಾಸ್ ವ್ಯವಸ್ಥೆಯನ್ನು ಜಾರಿಗೆ ತರಲು ತೀರ್ಮಾನಿಸಿದೆ. ಈ ಮೂಲಕ ಇಂತಹಾ ವ್ಯವಸ್ಥೆ ಜಾರಿಗೆ ತರುತ್ತಿರುವ ದೇಶದ ಮೊದಲ ಸಾರ್ವಜನಿಕ ಸಾರಿಗೆ ಸಂಸ್ಥೆ ಎನ್ನುವ ಹಿರಿಮೆ ಇದರದಾಗಲಿದೆ.
ಬಿಎಂಟಿಸಿ ಈ ಆನ್ ಲೈನ್ ಪಾಸ್ ಗಳನ್ನು ದಿನದ, ಮಾಸಿಕ ಹಾಗು
ಇ-ವ್ಯಾಲೆಟ್ ಬಸ್ ಪಾಸ್ ಗಳಿಗೆ ಸಹ ವಿಸ್ತರಿಸುವ ಉದ್ದೇಶ ಹೊಂದಿದೆ.
ವಿದ್ಯಾರ್ಥಿಗಳಿಂದ ಸ್ಮಾರ್ಟ್ ಕಾರ್ಡ್ ಪಾಸ್ ಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಿದ ಅರ್ಜಿಗಳ ಸಂಖೆ ಕಳೆದ ಒಂದು ವಾರದಲ್ಲಿ ಒಂದು ಲಕ್ಷದಷ್ಟಾಗಿದೆ. 500 ಕ್ಕಿಂತ ಹೆಚ್ಚು ಸ್ಮಾರ್ಟ್ ಕಾರ್ಡ್ ಗಳನ್ನು ಶಾಲೆಗಳಿಗೆ ವಿತರಿಸಲಾಗುವುದು. ಕಳೆದ ಸಾಲಿನಲ್ಲಿ ಬಿಎಂಟಿಸಿ ಒಟ್ಟು 3.75 ಲಕ್ಷ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಗಳನ್ನು ವಿತರಿಸಿದೆ. ಈ ವರ್ಷದ ಆಗಸ್ಟ್ ಅಂತ್ಯಕ್ಕೆ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಣೆಯನ್ನು ಪೂರ್ಣಗೊಳಿಸಲಿದ್ದೇವೆ ಎಂದು
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ಹೇಳಿದ್ದಾರೆ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಹೊಸ ಸ್ಮಾರ್ಟ್ ಕಾರ್ಡ್ ಪಾಸ್ ಗಳನ್ನು ಪಡೆದುಕೊಳ್ಳಲಿದ್ದಾರೆ.ಆಗಸ್ಟ್ ನಿಂದ, ವಿದ್ಯಾರ್ಥಿಗಳು ಸ್ಮಾರ್ಟ್ ಕಾರ್ಡ್ ಪಾಸ್ ಗಳೊಡನೆ ಪ್ರಯಾಣಿಸಬೇಕಾಗುತ್ತದೆ, ಅವರು ತಮ್ಮ ಹಳೆಯ ಬಸ್ ಪಾಸ್ ಅನ್ನು ಇದಕ್ಕೆ ಬದಲಿಸಿಕೊಳ್ಳಬೇಕು. ಸ್ಮಾರ್ಟ್ ಕಾರ್ಡ್ ಪಾಸ್ ಗಳನ್ನು ಸ್ವೀಕರಿಸಿಅದ್ಸ್
ವಿದ್ಯಾರ್ಥಿಗಳು ಬಸ್ ಕಂಡಕ್ಟರ್ ಗಳಿಗೆ ಎಕ್ನಾಲೆಜ್ ಮೆಂಟ್ ಸಂಖ್ಯೆ ಹಾಗೂ ಗುರುತಿನ ಚೀಟಿಗಳನ್ನು ತೋರಿಸಬೇಕಾಗುವುದು.ಗುರುತು ಸಂಖ್ಯೆಯು ಯುನಿಕ್ ಆಗಿದ್ದು ವಿದ್ಯಾರ್ಥಿಯು ತನ್ನ ಶಾಲೆ ಅಥವಾ ಕಾಲೇಜನ್ನು ಬದಲಿಸಲು ಯಾವ ಅಭ್ಯಂತರವಿರುವುದಿಲ್ಲ.
ಕಳೆದ ಒಂದು ವರ್ಷದಲ್ಲಿ ಬಿಎಂಟಿಸಿ ಶಿಕ್ಷಣ ಇಲಾಖೆಯೊಂದಿಗೆ ಸಾರಿಗೆ ಸಂಸ್ಥೆಯು ಸುಮಾರು 100 ಸಭೆಗಳನ್ನು ನಡೆಸಿದೆ. ಸ್ಮಾರ್ಟ್ ಕಾರ್ಡ್ ಪಾಸ್ ವಿತರಣೆ ವಿಳಂಬದಿಂದಾಗಿ ಖಾಸಗಿ ಬಸ್ ಮಾಲೀಕರು ಯಾವುದೇ ಲಾಭ ಮಾಡಿಕೊಳ್ಳುವುದಿಲ್ಲ. ಖಾಸಗಿ ಬಸ್ ಪಾಸ್