ಈರುಳ್ಳಿ ಬೆಲೆ ವಾರದಲ್ಲಿ ಶೇಕಡ 40 ರಷ್ಟು ಕುಸಿತ

ಮುಂಬೈ ಜನವರಿ, 29, ದೇಶಾದ್ಯಂತ ಸಗಟು ಮಾರುಕಟ್ಟೆಗೆ ಹೆಚ್ಚಿನ ಅವಕ  ಆಗಮನದ ಕಾರಣ ಈರುಳ್ಳಿ ಧಾರಣೆ  ಸತತ ಐದನೇ ದಿನವೂ  ಕುಸಿದಿದ್ದು, ಒಂದೇ ವಾರದಲ್ಲಿ ಶೇ 40 ರಷ್ಟು ಬೆಲೆ ಕುಸಿತ ದಾಖಲಿಸಿದೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಲಾಸಲ್ಗಾಂವ್ ಸಗಟು ಮಂಡಿಯಲ್ಲಿ ಮಂಗಳವಾರ ಈರುಳ್ಳಿ ಕೆ.ಜಿ.ಗೆ 24 ರೂಪಾಯಿಗೆ  ಮಾರಾಟವಾಗುತ್ತಿದೆ  ಎಂದು ನಾಸಿಕ್ ಮೂಲದ ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಮೂಲಗಳು  ತಿಳಿಸಿವೆ.

ವರ್ಷದ ಕೊನೆಯಲ್ಲಿ ಈರುಳ್ಳಿ  ಬೆಲೆ  ವಿಪರೀತ ಹೆಚ್ಚಳವಾಗಿ ಜನರು ಕೊಳ್ಳುವುದಿರಲಿ, ಹೆಸರು ಕೇಳಿದರೆ  ಕಣ್ಣೀರು ಹಾಕುತ್ತಿದ್ದರು. ಕೆಲವು  ಕಡೆ ಕೆಜಿ ಈರುಳ್ಳಿ 200ರೂಪಾಯಿ ಗಡಿ ದಾಟಿತ್ತು. ಈಗ  ದೇಶಾದ್ಯಂತ ಚಿಲ್ಲರೆ ಮಾರುಕಟ್ಟೆಗಳಲ್ಲಿ ಒಂದು ಈರುಳ್ಳಿ  40 ರಿಂದ  44 ರೂಪಾಯಿಗೆ  ಮಾರಾಟವಾಗುತ್ತಿದೆ.

ಕಳೆದ ಕೆಲವು ದಿನಗಳಲ್ಲಿ ರೈತರು ಮಾರುಕಟ್ಟೆಗೆ ಹೆಚ್ಚಿನ ಮಾಲು ತರುವುದನ್ನು ತೀವ್ರಗೊಳಿಸಿದ್ದರಿಂದ ಬೆಲೆ ಕುಸಿತ ಕಂಡಿದೆ .  ಮುಖ್ಯವಾಗಿ, ಕರ್ನಾಟಕ, ಗುಜರಾತ್ ಮತ್ತು ಮಧ್ಯಪ್ರದೇಶದ ಸ್ಥಳೀಯ  ರೈತರು ಪೂರೈಕೆ  ಹೆಚ್ಚಿಸಿದ್ದು, ಲಸಲ್ಗಾಂವ್ ಮಾರುಕಟ್ಟೆಯ ಮೇಲಿನ  ಬೇಡಿಕೆ, ಹಾಗೂ ಒತ್ತಡ ಕಡಿಮೆ ಮಾಡಿದ್ದಾರೆ. ಇದಲ್ಲದೆ ಈರುಳ್ಳಿ ರಫ್ತು ಮೇಲಿನ ಸರ್ಕಾರದ ನಿಷೇಧವು ಬೆಲೆ ಇಳಿಯಲು ಮತ್ತೊಂದು ಕಾರಣವಾಗಿದೆ ಎಂದೂ   ಏಷ್ಯಾದ ಅತಿದೊಡ್ಡ  ಸಗಟು ಈರುಳ್ಳಿ ಮಾರುಕಟ್ಟೆ  ಸಮಿತಿಯ ಕಾರ್ಯದರ್ಶಿ ನರೇಂದ್ರ ವಾಧವನೆ ಹೇಳಿದ್ದಾರೆ